Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 3:23 - ಕನ್ನಡ ಸಮಕಾಲಿಕ ಅನುವಾದ

23 ದೇವರು ಸುತ್ತಲೂ ಬೇಲಿಹಾಕಿ, ದಾರಿ ಮುಚ್ಚಿದ ಮೇಲೆ ಅವರಿಗೆ ಬೆಳಕು ಏಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ದೇವರು ನನ್ನ ಸುತ್ತಲೂ ಬೇಲಿ ಹಾಕಿ, ದಾರಿಕಟ್ಟಿದ ಮೇಲೆ ಅವನಿಗೆ ಏಕೆ ಬೆಳಕನ್ನು ಕೊಡುತ್ತಾನೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಬೆಳಕು ಏತಕೆ ದಾರಿ ಮುಚ್ಚಿರುವವನಿಗೆ? ತನ್ನ ಸುತ್ತಲೂ ದೇವರೆ ಬೇಲಿಹಾಕಿರುವವನಿಗೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ದೇವರು ಒಬ್ಬನ ಸುತ್ತಲೂ ಬೇಲಿ ಹಾಕಿ ದಾರಿಕಟ್ಟಿದ ಮೇಲೆ [ಅವನಿಗೆ ಏಕೆ ಬೆಳಕನ್ನು ಕೊಡುತ್ತಾನೆ?]

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ದೇವರು ಯಾರ ಭವಿಷ್ಯವನ್ನು ರಹಸ್ಯವಾಗಿಡುತ್ತಾನೊ, ಯಾರ ಸುತ್ತಲೂ ಗೋಡೆಯನ್ನು ಕಟ್ಟುತ್ತಾನೊ ಅವರಿಗೆ ಯಾಕೆ ಜೀವವನ್ನು ಕೊಡುತ್ತಾನೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 3:23
13 ತಿಳಿವುಗಳ ಹೋಲಿಕೆ  

ನಾನು ಮುಂದೆ ಹೋಗದಂತೆ ದೇವರು ನನ್ನ ದಾರಿಗೆ ಬೇಲಿ ಹಾಕಿದ್ದಾರೆ; ನನ್ನ ಹಾದಿಗಳನ್ನು ಕತ್ತಲು ಕವಿಯುವಂತೆ ಮಾಡಿದ್ದಾರೆ.


ನಾನು ಹೊರಗೆ ಬಾರದ ಹಾಗೆ, ಅವರು ನನ್ನ ಸುತ್ತಲೂ ಗೋಡೆಯನ್ನು ಕಟ್ಟಿದ್ದಾರೆ. ಅವರು ನನ್ನ ಸಂಕೋಲೆಯ ಭಾರವನ್ನು ಹೆಚ್ಚಿಸಿದ್ದಾರೆ.


ನನ್ನ ಮಾರ್ಗವು ಯೆಹೋವ ದೇವರಿಗೆ ಮರೆಯಾಗಿದೆ. ನನ್ನ ನ್ಯಾಯವು ನನ್ನ ದೇವರಿಂದ ದಾಟಿಹೋಯಿತಲ್ಲಾ! ಎಂದು ಯಾಕೋಬೇ ಏಕೆ ಹೇಳುತ್ತೀ? ಇಸ್ರಾಯೇಲೇ ಏಕೆ ಮಾತನಾಡುತ್ತೀ?


ಆದ್ದರಿಂದ ನಾನು ಅವಳ ಮಾರ್ಗಕ್ಕೆ ಮುಳ್ಳುಗಳ ಬೇಲಿಹಾಕಿ ತಡೆಯುವೆನು. ಅವಳು ತನ್ನ ಹಾದಿಗಳನ್ನು ಕಾಣದ ಹಾಗೆ ಅವಳ ಮುಂದೆ ಗೋಡೆಯನ್ನು ಕಟ್ಟುವೆನು.


ಕೆತ್ತಿದ ಕಲ್ಲಿನಿಂದ ನನ್ನ ಮಾರ್ಗಗಳನ್ನು ಮುಚ್ಚಿ, ಆ ನನ್ನ ದಾರಿಗಳನ್ನು ಡೊಂಕು ಮಾಡಿದ್ದಾನೆ.


ನನ್ನ ಪರಿಚಿತರನ್ನು ನನ್ನಿಂದ ದೂರಮಾಡಿದ್ದೀರಿ. ನಾನು ಅವರಿಗೆ ಬೇಡವಾಗಿದ್ದೇನೆ. ನಾನು ಬಂಧಿತನಾಗಿದ್ದೇನೆ, ಹೊರಗೆ ಬರಲಾರೆನು.


ಶತ್ರುವಿನ ಕೈಯಲ್ಲಿ ನನ್ನನ್ನು ಒಪ್ಪಿಸಿ ಬಿಡಲಿಲ್ಲ; ನನ್ನ ಪಾದಗಳನ್ನು ವಿಶಾಲವಾದ ಸ್ಥಳದಲ್ಲಿ ನಿಲ್ಲಿಸಿದ್ದೀರಿ.


ದೇವರ ಸೇನೆ ಒಟ್ಟಿಗೆ ಬಂದು, ನನಗೆ ವಿರೋಧವಾಗಿ ದಿಬ್ಬನ್ನು ಕಟ್ಟಿ, ನನ್ನ ಗುಡಾರದ ಸುತ್ತಲೂ ಇಳಿದಿವೆ.


ದೇವರು ಕೆಡವಿದ್ದನ್ನು ತಿರುಗಿ ಕಟ್ಟಲಾಗುವುದಿಲ್ಲ; ದೇವರು ಸೆರೆಯಲ್ಲಿ ಹಾಕುವ ಮನುಷ್ಯನನ್ನು ಯಾರೂ ಬಿಡಿಸಲಾಗುವುದಿಲ್ಲ.


ದೇವರಿಂದಲೇ ನನಗೆ ಅನ್ಯಾಯವಾಗಿದೆ; ದೇವರು ತಮ್ಮ ಬಲೆಯನ್ನು ನನ್ನ ಮೇಲೆ ಬೀಸಿದ್ದಾರೆಂದು ನಿಮಗೆ ತಿಳಿದಿರಲಿ.


ಅವರು ಸಮಾಧಿ ಸೇರಿದ ಮೇಲೆ ಸಂತೋಷ ಸಂಭ್ರಮದಿಂದ ಹರ್ಷಿಸುವರೋ?


ನನ್ನ ಪಾದಗಳನ್ನು ಸಂಕೋಲೆಗಳಿಂದ ಕಟ್ಟಿಹಾಕಿದ್ದೀರಿ, ನನ್ನ ಪಾದಗಳ ಹಿಮ್ಮಡಿಗಳ ಮೇಲೆ ಗುರುತು ಹಾಕಿದ್ದೀರಿ; ನನ್ನ ಹಾದಿಗಳನ್ನೆಲ್ಲಾ ಲಕ್ಷ್ಯವಿಟ್ಟು ನೋಡುತ್ತೀರಿ.


ಬಾಧೆಯ ದೆಸೆಯಿಂದ ನನ್ನ ಕಣ್ಣು ಮಂದವಾಗಿ ಹೋಗಿದೆ. ಯೆಹೋವ ದೇವರೇ, ದಿನವೆಲ್ಲಾ ನಿಮ್ಮನ್ನು ಕರೆಯುತ್ತೇನೆ. ನಾನು ನಿಮ್ಮ ಕಡೆಗೆ ನನ್ನ ಕೈಗಳನ್ನು ಚಾಚುತ್ತೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು