Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 2:6 - ಕನ್ನಡ ಸಮಕಾಲಿಕ ಅನುವಾದ

6 ಆಗ ಯೆಹೋವ ದೇವರು ಸೈತಾನನಿಗೆ, “ಹಾಗಾದರೆ ಅವನು ನಿನ್ನ ಕೈಯಲ್ಲಿ ಇದ್ದಾನೆ. ಅವನ ಪ್ರಾಣವನ್ನು ಮಾತ್ರ ಮುಟ್ಟಬಾರದು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಯೆಹೋವನು ಸೈತಾನನಿಗೆ, “ನೋಡು, ಅವನನ್ನು ನಿನ್ನ ಕೈಯಲ್ಲಿ ಒಪ್ಪಿಸಿದ್ದೇನೆ. ಅವನ ಪ್ರಾಣವನ್ನು ಉಳಿಸಬೇಕು” ಎಂದು ಅಪ್ಪಣೆ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಆಗ ಸರ್ವೇಶ್ವರ ಸೈತಾನನಿಗೆ, “ಸರಿ, ಆತನನ್ನು ನಿನ್ನ ಕೈಗೆ ಬಿಟ್ಟಿದ್ದೇನೆ. ಆದರೆ ಆತನ ಪ್ರಾಣವನ್ನು ಮಾತ್ರ ಮುಟ್ಟಕೂಡದು,” ಎಂದು ಆಜ್ಞಾಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಯೆಹೋವನು ಸೈತಾನನಿಗೆ - ಅವನು ನಿನ್ನ ಕೈಯಲ್ಲಿದ್ದಾನೆ, ನೋಡು; ಅವನ ಪ್ರಾಣವನ್ನಾದರೋ ಉಳಿಸಲೇಬೇಕು ಎಂದು ಅಪ್ಪಣೆಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಅದಕ್ಕೆ ಯೆಹೋವನು ಸೈತಾನನಿಗೆ, “ಸರಿ, ಯೋಬನನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ; ಆದರೆ ಅವನ ಪ್ರಾಣವನ್ನು ಮಾತ್ರ ತೆಗೆಯಬೇಡ” ಎಂದು ಅಪ್ಪಣೆಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 2:6
15 ತಿಳಿವುಗಳ ಹೋಲಿಕೆ  

ಮನುಷ್ಯರಿಗಾಗುವ ಶೋಧನೆಯೇ ಹೊರತು, ಬೇರೆ ಯಾವುದೂ ನಿಮಗೆ ಸಂಭವಿಸಲಿಲ್ಲ. ಆದರೆ ದೇವರು ನಂಬಿಗಸ್ತರು. ನಿಮ್ಮ ಶಕ್ತಿಗೆ ಮೀರಿದ ಶೋಧನೆಗಳನ್ನು ಅವರು ನಿಮ್ಮ ಮೇಲೆ ಬರುವಂತೆ ಮಾಡುವುದಿಲ್ಲ. ಆದರೆ ನಿಮಗೆ ಶೋಧನೆಗಳು ಬಂದಾಗ, ಅವುಗಳನ್ನು ಜಯಿಸುವುದಕ್ಕೆ ಶಕ್ತರಾಗುವಂತೆ, ಅವುಗಳಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಮಾಡುವರು.


ಯೆಹೋವ ದೇವರು ಸೈತಾನನಿಗೆ, “ಅವನಲ್ಲಿರುವ ಎಲ್ಲವೂ ನಿನ್ನ ಅಧಿಕಾರದಲ್ಲಿ ಇವೆ. ಆದರೆ ಅವನ ಮೇಲೆ ಮಾತ್ರ ನಿನ್ನ ಕೈ ಹಾಕಬೇಡ,” ಎಂದರು. ಆಗ ಸೈತಾನನು ಯೆಹೋವ ದೇವರ ಸನ್ನಿಧಾನದಿಂದ ಹೊರಟುಹೋದನು.


ನಿನಗೆ ಸಂಭವಿಸುವುದಕ್ಕಿರುವ ಬಾಧೆಗಳಿಗೆ ಭಯಪಡಬೇಡ. ಇಗೋ, ನಿಮ್ಮನ್ನು ಪರೀಕ್ಷಿಸಲು, ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವುದಕ್ಕೆ ಇದ್ದಾನೆ. ಹತ್ತು ದಿವಸಗಳ ತನಕ ನಿಮಗೆ ಸಂಕಟವಿರುವುದು. ನೀನು ಸಾಯುವವರೆಗೆ ನಂಬಿಗಸ್ತನಾಗಿರು. ನಾನು ನಿನಗೆ ಜೀವದ ಕಿರೀಟವನ್ನು ಕೊಡುವೆನು.


ಆ ಸಾವಿರ ವರ್ಷಗಳು ಗತಿಸಿದ ಮೇಲೆ ಸೈತಾನನಿಗೆ ಅವನ ಸೆರೆಯಿಂದ ಬಿಡುಗಡೆಯಾಗುವುದು.


ಸಮುದ್ರಗಳ ಘೋಷವನ್ನೂ, ಅವುಗಳ ತೆರೆಗಳ ಘೋಷವನ್ನೂ, ಪ್ರಜೆಗಳ ಕೋಲಾಹಲವನ್ನೂ ಶಮನಗೊಳಿಸುವವರು ನೀವೇ.


ಬಹು ವಿಶೇಷವಾದ ಪ್ರಕಟನೆಗಳ ಬಗ್ಗೆ ನಾನು ಗರ್ವಪಡದಂತೆ, ನನ್ನ ಶರೀರದಲ್ಲಿ ಒಂದು ಮುಳ್ಳನ್ನು ಕೊಡಲಾಗಿತ್ತು. ಅದು ನನ್ನನ್ನು ಕಾಡಿಸಲು ಕಳುಹಿಸಲಾದ ಸೈತಾನನ ದೂತನೇ ಆಗಿತ್ತು.


ಆದರೆ ಈಗ ನಿಮ್ಮ ಕೈಚಾಚಿ, ಅವನ ಎಲುಬನ್ನೂ ಅವನ ಮಾಂಸವನ್ನೂ ಹೊಡೆದರೆ, ಅವನು ನಿಮ್ಮ ಮುಖದೆದುರಿಗೇ ನಿಮ್ಮನ್ನು ಶಪಿಸುವನು,” ಎಂದನು.


ಆಗ ಸೈತಾನನು ಯೆಹೋವ ದೇವರ ಸನ್ನಿಧಾನದಿಂದ ಹೊರಟುಹೋಗಿ, ಯೋಬನಿಗೆ ಅಂಗಾಲಿನಿಂದ ನೆತ್ತಿಯವರೆಗೆ ಕೆಟ್ಟ ಹುಣ್ಣುಗಳು ಬರುವಂತೆ ಅವನನ್ನು ಬಾಧಿಸಿದನು.


“ಅದಕ್ಕದು, ‘ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಲ್ಲಿ ಸುಳ್ಳನ್ನಾಡುವ ಆತ್ಮವಾಗಿರುವೆನು,’ ಎಂದಿತು. “ಅದಕ್ಕೆ ಯೆಹೋವ ದೇವರು, ‘ನೀನು ಅವನನ್ನು ಮರುಳುಗೊಳಿಸುವೆ ಮತ್ತು ಜಯಿಸುವೆ, ಹೊರಟುಹೋಗಿ ಹಾಗೆ ಮಾಡು,’ ಎಂದರು.


ಆದರೆ ನಿಮ್ಮ ಕೈಚಾಚಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡಿರಿ, ಆಗ ಅವನು ನಿಮ್ಮನ್ನು ಮುಖಾಮುಖಿಯಾಗಿ ಶಪಿಸುವನು,” ಎಂದನು.


ಊಟಕ್ಕಿಂತ ಜೀವನವೂ ವಸ್ತ್ರಕ್ಕಿಂತ ದೇಹವೂ ಹೆಚ್ಚಿನದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು