Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 19:11 - ಕನ್ನಡ ಸಮಕಾಲಿಕ ಅನುವಾದ

11 ದೇವರ ಶಿಕ್ಷೆಯು ನನ್ನ ಮೇಲೆ ಉರಿಯುತ್ತಿದೆ; ನಾನು ದೇವರಿಗೆ ವೈರಿಯಂತೆ ಪರಿಗಣಿಸಲಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನನ್ನ ಮೇಲೆ ತನ್ನ ಕೋಪಾಗ್ನಿಯನ್ನು ಧಗಧಗಿಸಿ; ಉರಿಯುವಂತೆ ಮಾಡಿ ನನ್ನನ್ನು ವೈರಿಯೆಂದೆಣಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ತನ್ನ ಕೋಪಾಗ್ನಿಯನು ನನ್ನ ಮೇಲೆ ಧಗಧಗಿಸಿದ್ದಾನೆ ನನ್ನನ್ನು ತನ್ನ ವೈರಿಯೆಂದೇ ಪರಿಗಣಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ನನ್ನ ಮೇಲೆ ತನ್ನ ಕೋಪಾಗ್ನಿಯನ್ನು ಧಗಧಗಿಸಿ ನನ್ನನ್ನು ವೈರಿಯೆಂದೆಣಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ದೇವರ ಕೋಪವು ನನಗೆ ವಿರೋಧವಾಗಿ ಉರಿಯುತ್ತಿದೆ. ಆತನು ನನ್ನನ್ನು ತನ್ನ ಶತ್ರುವೆಂದು ಪರಿಗಣಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 19:11
9 ತಿಳಿವುಗಳ ಹೋಲಿಕೆ  

ಏಕೆ ನಿಮ್ಮ ಮುಖವನ್ನು ಮರೆಮಾಡುತ್ತೀರಿ? ನನ್ನನ್ನು ನಿಮ್ಮ ಶತ್ರುವಿನ ಹಾಗೆ ಏಕೆ ಭಾವಿಸುತ್ತೀರಿ?


ಆದರೂ ದೇವರು ನನ್ನಲ್ಲಿ ತಪ್ಪು ಕಂಡುಹಿಡಿಯುತ್ತಿದ್ದಾರೆ; ದೇವರು ನನ್ನನ್ನು ಶತ್ರುವೆಂದು ಎಣಿಸುತ್ತಿದ್ದಾರೆ.


ದೇವರು ತಮ್ಮ ಬೇಸರದಲ್ಲಿ ನನ್ನನ್ನು ದಂಡಿಸಿದ್ದಾರೆ; ನನ್ನ ದೇವರು ನನ್ನ ಮೇಲೆ ಅತೃಪ್ತರಾಗಿದ್ದಾರೆ; ನನ್ನ ವೈರಿಯು ನನ್ನನ್ನು ದ್ವೇಷದಿಂದ ನೋಡುತ್ತಿದ್ದಾನೆ.


ಕರ್ತದೇವರು ಶತ್ರುವಿನಂತೆ ಆಗಿ, ಇಸ್ರಾಯೇಲನ್ನು ನುಂಗಿಬಿಟ್ಟಿದ್ದಾರೆ. ಕರ್ತದೇವರು ಅವನ ಭದ್ರವಾದ ಸ್ಥಾನಗಳನ್ನೆಲ್ಲಾ ನಾಶಮಾಡಿದ್ದಾರೆ. ಯೆಹೂದದ ದುಃಖವನ್ನೂ, ಪ್ರಲಾಪವನ್ನೂ ಹೆಚ್ಚಿಸಿದ್ದಾರೆ.


ನಾವು ನಿಮ್ಮ ಬೇಸರದಿಂದ ಬಾಧಿತರಾಗಿದ್ದೇವೆ. ನಿಮ್ಮ ಖಂಡನೆಯಿಂದ ತಲ್ಲಣಿಸುತ್ತೇವೆ.


ಯೆಹೋವ ದೇವರೇ, ಇನ್ನೂ ಎಷ್ಟರವರೆಗೆ? ಸದಾಕಾಲಕ್ಕೆ ನೀವು ಅಡಗಿಕೊಳ್ಳುವಿರಾ? ನಿಮ್ಮ ಬೇಸರವು ಬೆಂಕಿಯ ಹಾಗೆ ಉರಿಯುವುದು ಎಷ್ಟರವರೆಗೆ?


ಏಕೆಂದರೆ ನನ್ನ ರೋಷ ಬೆಂಕಿಯಂತಿದೆ, ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ, ಅದರ ಫಲವನ್ನೂ ತಿಂದು ಬಿಟ್ಟು, ಬೆಟ್ಟಗಳ ಅಸ್ತಿವಾರವನ್ನು ದಹಿಸುವುದು.


ಇಕ್ಕಟ್ಟೂ, ಸಂಕಟವೂ ಅವನನ್ನು ಹೆದರಿಸಿ, ಆಕ್ರಮಣ ಮಾಡಲು ಸಿದ್ಧನಾದ ರಾಜನಂತೆ ತೊಂದರೆಗಳು ಅವನನ್ನು ಆವರಿಸುತ್ತವೆ,


ಅವರು ಶತ್ರುವಿನ ಹಾಗೆಯೇ ತನ್ನ ಬಿಲ್ಲನ್ನು ಬಗ್ಗಿಸಿದ್ದಾರೆ. ವೈರಿಯ ಹಾಗೆ ತನ್ನ ಬಲಗೈ ಎತ್ತಿ ನಿಂತುಕೊಂಡು, ಕಣ್ಣಿಗೆ ರಮ್ಯವಾಗಿ ಕಾಣುವ ಎಲ್ಲವುಗಳನ್ನು ಕೊಂದುಹಾಕಿದ್ದಾರೆ. ಅವರು ತನ್ನ ರೋಷವೆಂಬ ಅಗ್ನಿಯನ್ನು ಚೀಯೋನ್ ಪುತ್ರಿಯ ಡೇರೆಯಲ್ಲಿ ಸುರಿದಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು