Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 18:13 - ಕನ್ನಡ ಸಮಕಾಲಿಕ ಅನುವಾದ

13 ಅದು ಅವನ ಚರ್ಮದ ಬಲವನ್ನು ತಿಂದುಬಿಡುವುದು; ಮರಣದ ಚೊಚ್ಚಲತನವು ಅವನ ಅಂಗಾಂಗಗಳನ್ನು ನುಂಗಿಬಿಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಮೃತ್ಯುವಿನ ಹಿರಿಯ ಮಗನು ಅವನ ಚರ್ಮವನ್ನು ಚೂರು ಚೂರಾಗಿ ತಿಂದು, ಅವನ ಅಂಗಗಳನ್ನು ನುಂಗಿಬಿಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ರೋಗರುಜಿನಗಳು ಅವನ ಚರ್ಮವನು ಚೂರುಚೂರಾಗಿ ತಿಂದುಬಿಡುವುವು ಅಂಗಾಂಗವಾಗಿ ಮೃತ್ಯುಕಾರಕ ರೋಗವು ಅವನನ್ನು ನುಂಗಿಬಿಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಮೃತ್ಯುವಿನ ಹಿರೀಮಗನು ಅವನ ಚರ್ಮವನ್ನು ಚೂರು ಚೂರಾಗಿ ತಿಂದು ಅವನ ಅಂಗಗಳನ್ನು ನುಂಗಿಬಿಡುವನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಭಯಂಕರವಾದ ಕಾಯಿಲೆಯು ಅವನ ಚರ್ಮದ ಭಾಗಗಳನ್ನು ತಿಂದುಬಿಡುತ್ತದೆ. ಅದು ಅವನ ತೋಳುಗಳನ್ನೂ ಕಾಲುಗಳನ್ನೂ ಕೊಳೆಸಿಬಿಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 18:13
7 ತಿಳಿವುಗಳ ಹೋಲಿಕೆ  

ಬಡವರಲ್ಲಿ ಬಡವರಾದವರು ಆಹಾರ ಕಂಡುಕೊಳ್ಳುವರು. ಕೊರತೆಯಲ್ಲಿರುವವರು ಸುರಕ್ಷಿತವಾಗಿ ನಿದ್ರಿಸುವರು. ಆದರೆ ನಿನ್ನ ಸಂತಾನದವರೋ ಕ್ಷಾಮದಿಂದ ಹತರಾಗುವರು. ನಿನ್ನಲ್ಲಿ ಉಳಿದವರನ್ನು ಅದು ಹತಮಾಡುವುದು.


ನಾನು ನೋಡಲು, ಒಂದು ನಸು ಹಸಿರು ಬಣ್ಣದ ಕುದುರೆ ಕಾಣಿಸಿತು. ಅದರ ಸವಾರನಿಗೆ ಮೃತ್ಯುವೆಂದು ಹೆಸರಿತ್ತು. ಪಾತಾಳವೆಂಬವನು ಅವನ ಹಿಂದೆ ಹೋಗುತ್ತಿದ್ದನು. ಅವರಿಗೆ ಭೂಮಿಯ ನಾಲ್ಕನೆಯ ಒಂದು ಭಾಗದ ಮೇಲೆ ಕತ್ತಿ, ಕ್ಷಾಮ, ಮರಣ ಮತ್ತು ಭೂಮಿಯ ಕ್ರೂರಮೃಗಗಳಿಂದ ಕೊಲ್ಲುವ ಅಧಿಕಾರಕೊಡಲಾಗಿತ್ತು.


ಯೆರೂಸಲೇಮಿಗೆ ವಿರೋಧವಾಗಿ ದಂಡು ಕಟ್ಟಿಕೊಂಡಿರುವ ಎಲ್ಲಾ ಜನರನ್ನು ಯೆಹೋವ ದೇವರು ವ್ಯಾಧಿಯಿಂದ ಬಾಧಿಸುವರು. ಹೀಗೆಯೇ, ಅವರು ನಿಂತಿರುವಾಗ, ಅವರ ಮಾಂಸವು ಕ್ಷಯಿಸಿ ಹೋಗುವುವು. ಅವರ ಕಣ್ಣುಗಳು ಕುಣಿಗಳಲ್ಲಿ ಇಂಗಿ ಹೋಗುವುವು. ಅವರ ನಾಲಿಗೆ ಅವರ ಬಾಯಲ್ಲಿ ಕ್ಷಯಿಸಿ ಹೋಗುವುದು.


ಬೆಟ್ಟಗಳ ಅಡಿಗಳ ಪರ್ಯಂತರ ಇಳಿದು ಹೋದೆನು. ಕೆಳಗಿನ ಭೂಮಿಯು ನನ್ನನ್ನು ಶಾಶ್ವತವಾಗಿ ನಿರ್ಬಂಧಿಸಿತು. ಆದರೂ ದೇವರಾದ ನನ್ನ ಯೆಹೋವ ದೇವರೇ, ನೀವು ನನ್ನ ಪ್ರಾಣವನ್ನು ತಗ್ಗಿನಿಂದ ಮೇಲಕ್ಕೆ ಎಬ್ಬಿಸಿದ್ದೀರಿ.


ನಿರೀಕ್ಷೆಯು ನನ್ನ ಸಂಗಡ ಪಾತಾಳಕ್ಕೆ ಇಳಿದು ಬರುವುದೇ? ನಾವು ಜೊತೆಯಾಗಿ ಮಣ್ಣಿಗೆ ಸೇರಲಾದೀತೆ?”


“ರೂಬೇನನೇ, ನೀನು ನನ್ನ ಜೇಷ್ಠಪುತ್ರನು. ನನ್ನ ಶಕ್ತಿ, ನನ್ನ ಬಲದ ಸಂಕೇತವೂ, ಗೌರವದಲ್ಲಿ ಶಕ್ತಿಯಲ್ಲಿ ಮಿತಿಮೀರಿದವನೂ ಆಗಿರುವೆ.


ಅವನು ನಮ್ಮನ್ನು ಹೊರಗಿನವರಂತೆ ಎಣಿಸಿದ್ದಾನಲ್ಲಾ. ಅವನು ನಮ್ಮನ್ನು ಮಾರಿ, ನಮ್ಮ ಹಣವನ್ನೂ ನುಂಗೇ ಬಿಟ್ಟನಲ್ಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು