Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 15:6 - ಕನ್ನಡ ಸಮಕಾಲಿಕ ಅನುವಾದ

6 ನಾನಲ್ಲ, ನಿನ್ನ ಬಾಯಿಯೇ ನಿನ್ನನ್ನು ಖಂಡಿಸುತ್ತದೆ; ಹೌದು, ನಿನ್ನ ತುಟಿಗಳೇ ನಿನಗೆ ವಿರೋಧವಾಗಿ ಸಾಕ್ಷಿ ಕೊಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ನಿನ್ನನ್ನು ಅಪರಾಧಿಯೆಂದು ನಿರ್ಣಯಿಸುವವನು ನಾನಲ್ಲ, ನಿನ್ನ ಮಾತುಗಳು ಕೂಡ ನಿನಗೆ ವಿರುದ್ಧವಾಗಿ ಸಾಕ್ಷಿ ಕೊಡುತ್ತವೆ, ನಿನ್ನನ್ನು ಅಪರಾಧಿಯನ್ನಾಗಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ನಾನಲ್ಲ, ನಿನ್ನ ಬಾಯೇ, ನಿನ್ನನು ಅಪರಾಧಿಯನ್ನಾಗಿಸುತ್ತಿದೆ ನಿನ್ನ ತುಟಿಗಳೇ ನಿನಗೆ ವಿರುದ್ಧ ಸಾಕ್ಷಿಕೊಡುತ್ತಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ನಿನ್ನನ್ನು ಅಪರಾಧಿಯೆಂದು ನಿರ್ಣಯಿಸುವವನು ನಾನಲ್ಲ, ನಿನ್ನ ಬಾಯೇ, ನಿನ್ನ ತುಟಿಗಳು ಕೂಡಾ ನಿನಗೆ ವಿರುದ್ಧವಾಗಿ ಸಾಕ್ಷಿಕೊಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ನೀನು ತಪ್ಪಿತಸ್ಥನೆಂದು ನಾನು ನಿರೂಪಿಸುವ ಅಗತ್ಯವಿಲ್ಲ. ಯಾಕೆಂದರೆ ನಿನ್ನ ಬಾಯ ಮಾತುಗಳೇ ನಿನ್ನನ್ನು ತಪ್ಪಿತಸ್ಥನೆಂದು ತೋರಿಸುತ್ತವೆ. ನಿನ್ನ ಸ್ವಂತ ತುಟಿಗಳೇ ನಿನ್ನ ವಿರುದ್ಧವಾಗಿ ಸಾಕ್ಷಿ ಕೊಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 15:6
12 ತಿಳಿವುಗಳ ಹೋಲಿಕೆ  

“ಆಗ ಆ ಯಜಮಾನನು, ‘ಕೆಟ್ಟ ಸೇವಕನೇ! ನಿನ್ನ ಮಾತಿನ ಮೇಲೆಯೇ ನಿನಗೆ ನ್ಯಾಯತೀರಿಸುವೆನು. ನಾನು ಕೂಡಿಡದೆ ಇರುವಲ್ಲಿ ತೆಗೆದುಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆದ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತಲ್ಲಾ.


ನೀನು ನಿನ್ನ ಮಾತುಗಳಿಂದಲೇ ನೀತಿವಂತನೆಂದು ನಿರ್ಣಯಿಸಲಾಗುವುದು ಮತ್ತು ನಿನ್ನ ಮಾತುಗಳಿಂದಲೇ ನೀನು ಅಪರಾಧಿಯೆಂದು ನಿರ್ಣಯಿಸಲಾಗುವುದು,” ಎಂದು ಹೇಳಿದರು.


ನಾನು ನೀತಿವಂತನಾಗಿದ್ದರೂ, ನನ್ನ ಸ್ವಂತ ಬಾಯೇ ನನ್ನನ್ನು ಖಂಡಿಸುತ್ತದೆ; ನಾನು ನಿರ್ದೋಷಿಯಾಗಿದ್ದರೂ, ದೇವರು ನನ್ನನ್ನು ಅಪರಾಧಿ ಎಂದು ನಿರೂಪಿಸುವರು.


ಹೀಗೆ ಅವರು ತಮ್ಮ ನಾಲಿಗೆಯಿಂದ ತಾವೇ ಎಡವಿ ಬೀಳುವಂತೆ ಮಾಡಿಕೊಳ್ಳುವರು. ಅವರನ್ನು ಕಾಣುವವರೆಲ್ಲರೂ ತಲೆಯಾಡಿಸಿ ಅಣಕಿಸುವರು.


‘ತಿಳುವಳಿಕೆಯಿಲ್ಲದೆ ನನ್ನ ಯೋಜನೆಯನ್ನು ಮಂಕುಮಾಡುವ ನೀನು ಯಾರು?’ ಎಂದು ತಾವು ಪ್ರಶ್ನಿಸಿದ್ದೀರಿ. ನಿಶ್ಚಯವಾಗಿ, ತಾವು ಹೇಳಿದಂತೆ ನನಗೆ ಅರ್ಥವಾಗದವುಗಳನ್ನು ಮಾತಾಡಿಬಿಟ್ಟೆ, ನನಗೆ ತಿಳಿಯದ ಸಂಗತಿಗಳನ್ನೂ ನನ್ನ ಬುದ್ಧಿಗೆ ಮೀರಿದ ಅದ್ಭುತಗಳನ್ನೂ ಕುರಿತು ಟೀಕಿಸಿಬಿಟ್ಟೆ.


“ನನ್ನ ನ್ಯಾಯವನ್ನು ನೀನು ಅಪಕೀರ್ತಿ ಮಾಡುತ್ತೀಯೋ? ನೀನು ನಿನ್ನ ನ್ಯಾಯವನ್ನು ಸ್ಥಾಪಿಸಲು ನನ್ನನ್ನು ಅಪರಾಧಿ ಎಂದು ನಿರ್ಣಯಿಸುತ್ತೀಯೋ?


ಆಗ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಈತನು ದೇವದೂಷಣೆ ಮಾಡಿದ್ದಾನೆ. ನಮಗೆ ಇನ್ನು ಹೆಚ್ಚಿನ ಸಾಕ್ಷಿಗಳು ಏತಕ್ಕೆ? ನೋಡಿ, ಈಗ ಈತನ ದೇವದೂಷಣೆಯನ್ನು ನೀವೇ ಕೇಳಿದ್ದೀರಲ್ಲಾ


ಅವನ ಬಲವುಳ್ಳ ಹೆಜ್ಜೆಗಳು ದುರ್ಬಲಗೊಳ್ಳುವುದು; ಅವನ ಯೋಜನೆಗಳೇ ಅವನನ್ನು ಕೆಡವಿಹಾಕುವವು.


ಆದರೆ ನಿನ್ನ ಸೇವಕನು ಇಲ್ಲಿ ಕೆಲಸ ಮಾಡುತ್ತಿರುವಾಗ ಅವನು ತಪ್ಪಿಸಿಕೊಂಡುಹೋದನು,” ಎಂದನು. ಇಸ್ರಾಯೇಲಿನ ಅರಸನು ಅವನಿಗೆ, “ನಿನ್ನ ತೀರ್ಪಿನ ಹಾಗೆಯೇ ಆಗಲಿ, ನೀನು ಸರಿಯಾಗಿ ನಿರ್ಣಯಿಸಿದಿ,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು