Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 1:10 - ಕನ್ನಡ ಸಮಕಾಲಿಕ ಅನುವಾದ

10 ನೀವು ಅವನಿಗೂ ಅವನ ಮನೆಗೂ ಅವನಲ್ಲಿ ಇರುವ ಎಲ್ಲವುಗಳ ಸುತ್ತಲು ಬೇಲಿ ಹಾಕಿದ್ದೀರಲ್ಲಾ? ಅವನು ಕೈಹಾಕಿದ ಕೆಲಸವನ್ನು ನೀವು ಆಶೀರ್ವದಿಸಿದ್ದೀರಿ, ಆದ್ದರಿಂದ ಅವನ ಕುರಿದನಗಳ ಹಿಂಡುಗಳು ಭೂಮಿಯ ಮೇಲೆಲ್ಲಾ ಹರಡುತ್ತಾ ಬಂದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನೀನು ಅವನಿಗೂ, ಅವನ ಮನೆಗೂ, ಅವನ ಎಲ್ಲಾ ಸ್ವತ್ತಿಗೂ ಸುತ್ತು ಮುತ್ತಲು ನಿನ್ನ ಕೃಪೆಯ ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವುದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ನೀವು ಆತನಿಗೂ ಆತನ ಎಲ್ಲ ಆಸ್ತಿಪಾಸ್ತಿಗೂ ಬೇಲಿ ಹಾಕಿ ಭದ್ರಪಡಿಸಿದ್ದೀರಲ್ಲವೇ? ಆತನು ಕೈ ಹಾಕಿದ ಕೆಲಸ ಸಫಲವಾಗುವಂತೆ ಮಾಡಿದ್ದೀರಲ್ಲವೆ? ಎಂದೇ ಆತನ ಸಿರಿಸಂಪತ್ತು ಈ ನಾಡಿನಲ್ಲಿ ಬೆಳೆಯುತ್ತಾ ಬಂದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತುಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ನೀನು ಅವನನ್ನೂ ಅವನ ಕುಟುಂಬವನ್ನೂ ಅವನ ಆಸ್ತಿಯನ್ನೂ ಸಂರಕ್ಷಿಸುತ್ತಿರುವೆ. ಅವನ ಕೆಲಸಕಾರ್ಯಗಳನ್ನು ಸಫಲಪಡಿಸುತ್ತಿರುವುದರಿಂದ ಅವನ ಸಂಪತ್ತು ದೇಶದಲ್ಲೆಲ್ಲಾ ವೃದ್ಧಿಯಾಗುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 1:10
29 ತಿಳಿವುಗಳ ಹೋಲಿಕೆ  

ದೇವರಿಗೆ ಭಯಪಡುವವರ ಸುತ್ತಲೂ ಯೆಹೋವ ದೇವರ ದೂತನು ಇಳಿದುಕೊಂಡು ಅವರನ್ನು ಕಾಪಾಡುತ್ತಾನೆ.


ನಾನೇ ಅದರ ಸುತ್ತಲೂ ಬೆಂಕಿಯ ಗೋಡೆಯಾಗಿಯೂ, ಅದರ ಮಧ್ಯದಲ್ಲಿ ಮಹಿಮೆಯಾಗಿಯೂ ಇರುವೆನು ಎಂದು ಹೇಳು,’ ಎಂದನು,” ಎಂದು ಯೆಹೋವ ದೇವರು ಹೇಳುತ್ತಾರೆ.


ಅಂತ್ಯಕಾಲದಲ್ಲಿ ಪ್ರಕಟವಾಗುವುದಕ್ಕೆ ಸಿದ್ಧವಾಗಿರುವ ರಕ್ಷಣೆಗೆ ದೇವರು ನಿಮ್ಮ ನಂಬಿಕೆಯ ಮುಖಾಂತರ ನಿಮ್ಮನ್ನು ತಮ್ಮ ಶಕ್ತಿಯಿಂದ ಕಾಯುತ್ತಾರೆ.


ಯೆಹೋವ ದೇವರ ಆಶೀರ್ವಾದವು ಸಂಪತ್ತನ್ನು ಉಂಟುಮಾಡುವುದು; ಅವರು ಅದರೊಂದಿಗೆ ಯಾವ ದುಃಖವನ್ನೂ ಸೇರಿಸುವುದಿಲ್ಲ.


ಏಕೆಂದರೆ ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, “ನಿಮ್ಮನ್ನು ಸುಲಿದುಕೊಂಡ ಜನಾಂಗಗಳ ಬಳಿಗೆ ಮಹಿಮೆಯ ತರುವಾಯ ನನ್ನನ್ನು ಆತನು ಕಳುಹಿಸಿದ್ದಾನೆ. ಏಕೆಂದರೆ ನಿಮ್ಮನ್ನು ಮುಟ್ಟುವವನು ಯೆಹೋವ ದೇವರ ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ.


ನನ್ನ ಐಶ್ವರ್ಯವು ಬಹಳ ಎಂದು ಕೊಚ್ಚಿಕೊಂಡಿದ್ದರೆ, ನನ್ನ ಕೈ ಬಹಳ ಸಂಪಾದಿಸಿದೆ ಎಂದು ನಾನು ಸಂತೋಷಪಟ್ಟಿದ್ದರೆ,


ಇವುಗಳಾದ ಮೇಲೆ ಯೆಹೋವ ದೇವರ ವಾಕ್ಯವು ಅಬ್ರಾಮನಿಗೆ ದರ್ಶನದಲ್ಲಿ ಉಂಟಾಗಿ ಹೇಳಿದ್ದೇನೆಂದರೆ: “ಅಬ್ರಾಮನೇ, ಭಯಪಡಬೇಡ. ನಾನು ನಿನಗೆ ಗುರಾಣಿಯಾಗಿದ್ದೇನೆ. ನಾನೇ ನಿನಗೆ ಅತ್ಯಧಿಕ ಬಹುಮಾನವಾಗಿದ್ದೇನೆ.”


ದೇವರು ಅವರನ್ನು ಆಶೀರ್ವದಿಸಿದ್ದರಿಂದ, ಅವರು ಬಹಳವಾಗಿ ಹೆಚ್ಚಿದರು; ದೇವರು ದನಗಳು ಕಡಿಮೆಯಾಗುವಂತೆ ಮಾಡಲಿಲ್ಲ.


ನಮ್ಮ ದೇವರಾದ ಯೆಹೋವ ದೇವರ ಮೆಚ್ಚುಗೆಯು ನಮ್ಮ ಮೇಲೆ ಇರಲಿ. ನಮ್ಮ ಕೈಗಳ ಕೆಲಸವನ್ನು ಸ್ಥಿರಪಡಿಸಿರಿ. ಹೌದು, ನಮ್ಮ ಕೈಗಳ ಕೆಲಸವನ್ನು ಸ್ಥಾಪಿಸಿರಿ.


ಅವರು ನಿಮ್ಮನ್ನು ಪ್ರೀತಿಸಿ, ನಿಮ್ಮನ್ನು ಆಶೀರ್ವದಿಸಿ, ನಿಮ್ಮನ್ನು ಅಭಿವೃದ್ಧಿಗೊಳಿಸಿ ಮತ್ತು ನಿಮಗೆ ಕೊಡುತ್ತೇನೆಂದು ಅವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಆ ದೇಶದಲ್ಲಿ ನಿಮ್ಮ ಗರ್ಭದ ಫಲವನ್ನೂ ಅಂದರೆ, ಭೂಮಿಯ ಹುಟ್ಟುವಳಿಯನ್ನೂ, ನಿಮ್ಮ ಧಾನ್ಯವನ್ನೂ, ನಿಮ್ಮ ಹೊಸ ದ್ರಾಕ್ಷಾರಸವನ್ನೂ, ನಿಮ್ಮ ಎಣ್ಣೆಯನ್ನೂ, ನಿಮ್ಮ ಪಶುಗಳನ್ನೂ, ನಿಮ್ಮ ಕುರಿಗಳ ಮಂದೆಗಳನ್ನೂ ಆಶೀರ್ವದಿಸುವರು.


ಇಸಾಕನು ಆ ದೇಶದಲ್ಲಿ ಬಿತ್ತಿದ ವರ್ಷದಲ್ಲಿಯೇ ನೂರರಷ್ಟು ಬೆಳೆಯನ್ನು ಹೊಂದಿದನು. ಯೆಹೋವ ದೇವರು ಅವನನ್ನು ಆಶೀರ್ವದಿಸಿದರು.


ನನ್ನ ದ್ರಾಕ್ಷಿ ತೋಟಕ್ಕೆ ನಾನು ಮಾಡುವುದು ಏನೆಂದು ನಾನು ನಿಮಗೆ ತಿಳಿಸುತ್ತೇನೆ. ನಾನು ಅದರ ಬೇಲಿಯನ್ನು ತೆಗೆದುಹಾಕುವೆನು. ಆಗ ದನಕರುಗಳು ಅದನ್ನು ಮೇಯ್ದುಬಿಡುವುದು. ಅದರ ಗೋಡೆಯನ್ನು ಕೆಡವಿಬಿಡುವೆನು, ಆಗ ಅದು ತುಳಿದಾಟಕ್ಕೆ ಈಡಾಗುವುದು.


ಅವನು ಅದಕ್ಕೆ ಬೇಲಿಹಾಕಿ, ಅದರೊಳಗಿಂದ ಕಲ್ಲುಗಳನ್ನು ಆರಿಸಿ ತೆಗೆದುಹಾಕಿ, ಒಳ್ಳೆಯ ದ್ರಾಕ್ಷಿ ಸಸಿಯನ್ನು ನೆಟ್ಟು, ಅದರ ಮಧ್ಯದಲ್ಲಿ ಒಂದು ಬುರುಜನ್ನು ಕಟ್ಟಿ, ದ್ರಾಕ್ಷಿ ತೊಟ್ಟಿಯನ್ನು ಕೊರೆಯಿಸಿ, ತೋಟವು ಒಳ್ಳೆಯ ದ್ರಾಕ್ಷಿಹಣ್ಣನ್ನು ಕೊಡುವುದೆಂದು ಎದುರುನೋಡುತ್ತಿರಲು, ಅದು ಹುಳಿ ಹಣ್ಣನ್ನು ಬಿಟ್ಟಿತು.


ಇದಲ್ಲದೆ ಅವರ ಸಂಗಡ ನಾವು ಕುರಿಗಳನ್ನು ಮೇಯಿಸಿಕೊಂಡು ಇದ್ದ ದಿನಗಳೆಲ್ಲಾ ನಮಗೆ ಅವರು ರಾತ್ರಿ ಹಗಲು ಒಂದು ಕೋಟೆಯಂತೆ ಗೋಡೆಯಾಗಿದ್ದರು.


ನಿತ್ಯ ದೇವರು ನಿನ್ನ ಆಶ್ರಯವು. ದೇವರ ಶಾಶ್ವತ ತೋಳುಗಳು ನಿನಗೆ ಆಶ್ರಯ. ನಿನ್ನ ವೈರಿಗಳನ್ನು ನಿನ್ನ ಮುಂದೆ ಓಡಿಸಿ, ‘ಅವರನ್ನು ಸಂಹರಿಸಿರಿ,’ ಎಂದು ಆಜ್ಞಾಪಿಸುವರು.


ನೀವು ನನ್ನ ಗೌರವವನ್ನು ಹೆಚ್ಚಿಸಿ ನನ್ನನ್ನು ಮತ್ತೊಮ್ಮೆ ಆದರಿಸಿರಿ.


ಇದಲ್ಲದೆ ಯೆಹೋವ ದೇವರು ಯೋಬನ ಆರಂಭಕ್ಕಿಂತ ಅವನ ಅಂತ್ಯವನ್ನು ಅಧಿಕವಾಗಿ ಆಶೀರ್ವದಿಸಿದರು. ಯೋಬನಿಗೆ ಹದಿನಾಲ್ಕು ಸಾವಿರ ಕುರಿಗಳೂ ಆರು ಸಾವಿರ ಒಂಟೆಗಳೂ ಸಾವಿರ ಜೋಡಿ ಎತ್ತುಗಳೂ ಸಾವಿರ ಕತ್ತೆಗಳೂ ದೊರಕಿದವು.


ಇದಕ್ಕೆ ಕಾರಣ ನಿನಗೆ ಸಹಾಯ ಮಾಡುವ ನಿನ್ನ ಪಿತೃಗಳ ದೇವರು; ನಿನ್ನನ್ನು ಸರ್ವಶಕ್ತರಾದ ದೇವರು ಆಶೀರ್ವದಿಸಲಿ. ಆ ಆಶೀರ್ವಾದಗಳು ಪರಲೋಕದವುಗಳು. ಆ ಆಶೀರ್ವಾದಗಳು ಕೆಳಗಿನಾಳದಲ್ಲಿರುವವುಗಳು. ಅವು ಎದೆಯ ಹಾಗೂ ಗರ್ಭದ ಆಶೀರ್ವಾದಗಳು.


ಈ ಪ್ರಕಾರ ಯಾಕೋಬನು ಅತ್ಯಧಿಕವಾಗಿ ಅಭಿವೃದ್ಧಿಯಾದ್ದರಿಂದ, ಬಹು ಕುರಿಗಳೂ ದಾಸದಾಸಿಯರೂ ಒಂಟೆಗಳೂ ಕತ್ತೆಗಳೂ ಅವನಿಗೆ ದೊರೆತವು.


ನಾನು ಬರುವುದಕ್ಕಿಂತ ಮುಂಚೆ ನಿನಗಿದ್ದದ್ದು ಸ್ವಲ್ಪವೇ. ಈಗ ಅದು ಬಹಳವಾಗಿ ಹೆಚ್ಚಿದೆ. ನಾನು ಬಂದಂದಿನಿಂದ ಯೆಹೋವ ದೇವರು ನಿನ್ನನ್ನು ಆಶೀರ್ವದಿಸಿದ್ದಾರೆ. ಈಗ ನಾನು ನನ್ನ ಸ್ವಂತ ಮನೆಗೋಸ್ಕರ ಯಾವಾಗ ಸಂಪಾದಿಸಲಿ?” ಎಂದನು.


ಮಾರ್ಗದಲ್ಲಿ ಹಾದುಹೋಗುವವರೆಲ್ಲರು ಅದನ್ನು ಕೀಳುವ ಹಾಗೆ ಏಕೆ ಅದರ ಬೇಲಿಗಳನ್ನು ನೀವು ಮುರಿದುಬಿಟ್ಟಿದ್ದೀರಿ?


ಯೆಹೋವ ದೇವರೇ, ನೀವು ನೀತಿವಂತರನ್ನು ನಿಶ್ಚಯವಾಗಿ ಆಶೀರ್ವದಿಸಿದ್ದೀರಿ; ನೀವು ಅವರನ್ನು ನಿಮ್ಮ ಮೆಚ್ಚುಗೆಯಿಂದ ಗುರಾಣಿಯಂತೆಯೇ ಆವರಿಸಿಕೊಳ್ಳಿರಿ.


ನನ್ನ ಹೆಜ್ಜೆಗಳನ್ನು ಮೊಸರಿನಿಂದ ತೊಳೆಯುತ್ತಾ ಇದ್ದೆನು; ಬಂಡೆಯಿಂದ ನನಗೆ ಓಲಿವ್ ಎಣ್ಣೆ ಪ್ರವಾಹವಾಗಿ ಸುರಿಸುತ್ತಿತ್ತು.


ಯೆಹೋವ ದೇವರೇ, ಅವನ ಎಲ್ಲ ಕೌಶಲ್ಯಗಳನ್ನು ಆಶೀರ್ವದಿಸಿರಿ. ಅವನ ಕೈಕೆಲಸವನ್ನು ಅಂಗೀಕರಿಸಿರಿ. ಅವನಿಗೆ ವಿರೋಧವಾಗಿ ಏಳುವವರ ನಡು ಮುರಿದು ಹೋಗಲಿ. ಅವನನ್ನು ದ್ವೇಷಿಸುವವರು ತಿರುಗಿ ಏಳದ ಹೋಗಲಿ.”


ಅವನನ್ನು ಮನೆಯಲ್ಲಿಯೂ, ತನಗಿದ್ದ ಎಲ್ಲದರ ಮೇಲೆಯೂ ಮೇಲ್ವಿಚಾರಕನನ್ನಾಗಿ ಮಾಡಿದಂದಿನಿಂದ ಯೆಹೋವ ದೇವರು ಆ ಈಜಿಪ್ಟಿನವನ ಮನೆಯನ್ನು ಯೋಸೇಫನಿಗಾಗಿ ಆಶೀರ್ವದಿಸಿದರು. ಮನೆಯಲ್ಲಿಯೂ ಹೊಲದಲ್ಲಿಯೂ ಅವನಿಗಿದ್ದ ಎಲ್ಲದರ ಮೇಲೆಯೂ ಯೆಹೋವ ದೇವರ ಆಶೀರ್ವಾದವಿತ್ತು.


ಅವನಿಗೆ ಏಳು ಸಾವಿರ ಕುರಿಗಳು, ಮೂರು ಸಾವಿರ ಒಂಟೆಗಳು, ಐನೂರು ಜೋಡಿ ಎತ್ತುಗಳು, ಐನೂರು ಕತ್ತೆಗಳು ಮತ್ತು ಅನೇಕ ಕೆಲಸಗಾರರಿದ್ದರು. ಅವನು ಪೂರ್ವದೇಶದ ಜನರೆಲ್ಲರಲ್ಲಿಯೇ ಹೆಚ್ಚು ಐಶ್ವರ್ಯವುಳ್ಳವನಾಗಿದ್ದನು.


“ಕಳೆದುಹೋದ ತಿಂಗಳುಗಳಲ್ಲಿ ಇದ್ದಂತೆ ಈಗಲೂ ಇದ್ದರೆ ಎಷ್ಟೋ ಒಳ್ಳೆಯದು; ಆಗ ದೇವರು ನನ್ನನ್ನು ಕಾಪಾಡುತ್ತಿದ್ದರಲ್ಲವೆ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು