ಯೋನನು 1:8 - ಕನ್ನಡ ಸಮಕಾಲಿಕ ಅನುವಾದ8 ಆಗ ಅವರು ಅವನಿಗೆ, “ನಮಗಾಗಿ ಈ ಕಷ್ಟವನ್ನೆಲ್ಲಾ ಉಂಟುಮಾಡಿದ್ದಕ್ಕೆ ಯಾರು ಜವಾಬ್ದಾರರೆಂದು ನಮಗೆ ತೋರಿಸು. ನಿನ್ನ ಕೆಲಸವೇನು? ಎಲ್ಲಿಂದ ಬಂದೆ? ನಿನ್ನ ದೇಶ ಯಾವುದು? ನೀನು ಯಾವ ಜನಾಂಗದವನು?” ಎಂದು ಪ್ರಶ್ನಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಆಗ ಅವರು ಯೋನನಿಗೆ ಅಯ್ಯಾ, “ಈ ಕೇಡು ನಮಗೆ ಸಂಭವಿಸಲು ಕಾರಣವೇನು ಎಂಬುದನ್ನು ನೀನೇ ನಮಗೆ ತಿಳಿಸು; ನಿನ್ನ ವೃತ್ತಿ ಏನು? ನೀನು ಎಲ್ಲಿಂದ ಬಂದವನು? ನೀನು ಯಾವ ದೇಶದವನು?, ಯಾವ ಜನಾಂಗದವನು?” ಎಂದು ಅವನನ್ನು ಕೇಳಲು ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಆಗ ನಾವಿಕರು: “ನೀನು ಯಾರು? ಎಲ್ಲಿಂದ ಬಂದೆ? ಯಾವ ಕೆಲಸದ ಮೇಲೆ ಬಂದೆ? ನೀನು ಯಾವ ಜನಾಂಗದವನು? ಈ ದುರಂತಕ್ಕೆ ಕಾರಣ ಯಾರು?” ಎಂದು ಪ್ರಶ್ನಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಅದನ್ನು ನೋಡಿ ಅವರು - ಅಯ್ಯಾ, ಈ ಕೇಡು ನಮಗೆ ಸಂಭವಿಸಿದ್ದಕ್ಕೆ ಯಾರು ಕಾರಣ ಎಂಬದನ್ನು ನೀನೇ ನಮಗೆ ತಿಳಿಸು; ನೀನು ಎಲ್ಲಿಂದ ಯಾವ ಕೆಲಸದ ಮೇಲೆ ಬಂದಿ, ನೀನು ಯಾವ ದೇಶದವನು, ಯಾವ ಜನಾಂಗದವನು ಎಂದು ಅವನನ್ನು ಕೇಳಲು ಅವನು ಅವರಿಗೆ - ನಾನು ಇಬ್ರಿಯನು; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಆಗ ಅವರು ಯೋನನಿಗೆ, “ನೋಡು, ನಿನ್ನಿಂದಾಗಿ ನಮಗೆ ಈ ಸಂಕಟ ಬಂದಿದೆ. ನೀನು ಏನು ಮಾಡಿದಿ ಎಂದು ನಮಗೆ ಹೇಳು. ನಿನ್ನ ಕೆಲಸವೇನು? ನೀನು ಎಲ್ಲಿಂದ ಬಂದಿ? ನಿನ್ನ ದೇಶ ಯಾವುದು? ನಿನ್ನ ಜನರು ಯಾರು?” ಎಂದೆಲ್ಲಾ ವಿಚಾರಿಸಿದರು. ಅಧ್ಯಾಯವನ್ನು ನೋಡಿ |