Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 7:4 - ಕನ್ನಡ ಸಮಕಾಲಿಕ ಅನುವಾದ

4 ಆದ್ದರಿಂದ ಜನರಲ್ಲಿ ಹೆಚ್ಚು ಕಡಿಮೆ ಮೂರು ಸಾವಿರ ಮಂದಿ ಅಲ್ಲಿಗೆ ಹೋದರು. ಆದರೆ ಅವರು ಆಯಿ ಎಂಬ ಪಟ್ಟಣದ ಮನುಷ್ಯರನ್ನು ಎದುರಿಸಲಾಗದೆ ಓಡಿಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅದರಂತೆ ಸುಮಾರು ಮೂರು ಸಾವಿರ ಮಂದಿ ಯುದ್ಧಕ್ಕೆ ಹೋದರು. ಆದರೆ ಅವರು ಆಯಿ ಊರಿನವರ ಎದುರಿನಿಂದ ಓಡಿ ಹೋಗಬೇಕಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಅದರಂತೆಯೇ ಸುಮಾರು ಮೂರುಸಾವಿರ ಮಂದಿ ಹೋದರು. ಆದರೆ ಅವರು ಆಯಿ ಎಂಬ ಊರಿನವರನ್ನು ಎದುರಿಸಲಾಗದೆ ಓಡಿಬರಬೇಕಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅದರಂತೆ ಸುಮಾರು ಮೂರು ಸಾವಿರ ಮಂದಿ ಹೋದರು. ಆದರೆ ಅವರು ಆಯಿ ಎಂಬ ಊರಿನವರ ಎದುರಿನಿಂದ ಓಡಿ ಬರಬೇಕಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4-5 ಸುಮಾರು ಮೂರು ಸಾವಿರ ಜನರು “ಆಯಿ”ಗೆ ಹೋದರು. ಆದರೆ “ಆಯಿ”ಯ ಜನರು ಇಸ್ರೇಲಿನ ಸುಮಾರು ಮೂವತ್ತಾರು ಜನರನ್ನು ಕೊಂದು ಹಾಕಿದರು. ಆದ್ದರಿಂದ ಇಸ್ರೇಲಿನ ಜನರು ಓಡಿಹೋದರು. “ಆಯಿ”ಯ ಜನರು ಅವರನ್ನು ಪಟ್ಟಣದ ದ್ವಾರದಿಂದ ಕಲ್ಲುಗಣಿಗಳವರೆಗೆ ಬೆನ್ನಟ್ಟಿಕೊಂಡು ಬಂದರು. “ಆಯಿ”ಯ ಜನರು ಅವರನ್ನು ಚೆನ್ನಾಗಿ ಥಳಿಸಿದರು. ಆಗ ಇಸ್ರೇಲರು ತುಂಬ ಭಯಗೊಂಡು ಧೈರ್ಯವನ್ನು ಕಳೆದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 7:4
7 ತಿಳಿವುಗಳ ಹೋಲಿಕೆ  

ಯೆಹೋವ ದೇವರು ನಿಮ್ಮನ್ನು ನಿಮ್ಮ ಶತ್ರುಗಳ ಮುಂದೆ ಸೋಲಿಸಿಬಿಡುವರು. ನೀವು ಒಂದೇ ಮಾರ್ಗದಲ್ಲಿ ಅವರಿಗೆ ವಿರೋಧವಾಗಿ ದಾಳಿಮಾಡಲು ಹೊರಟು, ಏಳು ಮಾರ್ಗಗಳಲ್ಲಿ ಅವರ ಮುಂದೆ ಓಡಿಹೋಗುವಿರಿ. ಭೂಮಿಯ ರಾಜ್ಯಗಳೆಲ್ಲವೂ ಇದನ್ನು ಕಂಡು ಬೆರಗಾಗುವವು.


ನಾನು ನಿಮಗೆ ವಿಮುಖನಾಗಿರುವೆನು. ಆದ್ದರಿಂದ ನೀವು ನಿಮ್ಮ ವೈರಿಗಳಿಂದ ಸೋತುಹೋಗುವಿರಿ. ನಿಮ್ಮ ವೈರಿಗಳು ನಿಮ್ಮ ಮೇಲೆ ದೊರೆತನ ಮಾಡುವರು. ಓಡಿಸುವವನು ಯಾರೂ ಇಲ್ಲದಿರುವಾಗಲೂ ಓಡಿಹೋಗುವಿರಿ.


ನಿಮ್ಮ ಅಕ್ರಮಗಳೇ, ನಿಮ್ಮನ್ನು ನಿಮ್ಮ ದೇವರಿಂದ ಅಗಲಿಸಿವೆ. ನಿಮ್ಮ ಪಾಪಗಳೇ, ಆತನು ಹೇಳಿದ ಹಾಗೆ ಆತನ ಮುಖವನ್ನು ನಿಮಗೆ ಮರೆಮಾಡಿಸಿವೆ.


ಒಬ್ಬನ ಬೆದರಿಕೆಗೆ ಸಾವಿರ ಜನರು ಓಡುವರು, ಐವರು ಹೆದರಿಸುವುದರಿಂದ ನೀವೆಲ್ಲರೂ ಓಡಿಹೋಗುವಿರಿ, ಕಟ್ಟಕಡೆಗೆ ಬೆಟ್ಟದ ಶಿಖರದಲ್ಲಿನ ಸ್ತಂಭದ ಹಾಗೂ ಗುಡ್ಡದ ಮೇಲಣ ಕಂಬದಂತೆಯೂ ಒಂಟಿಯಾಗಿ ಉಳಿಯುವಿರಿ.”


ಇಸ್ರಾಯೇಲ್ ರಕ್ಷಣಾಬಂಡೆ ಅವರನ್ನು ಮಾರಿ, ಯೆಹೋವ ದೇವರು ಅವರನ್ನು ಕೈಬಿಟ್ಟ ಹೊರತು, ಒಬ್ಬನು ಹೇಗೆ ಸಾವಿರ ಮಂದಿಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು?


ಯೆಹೋಶುವನ ಬಳಿಗೆ ತಿರುಗಿಬಂದು ಅವನಿಗೆ, “ಜನರೆಲ್ಲರೂ ಹೋಗುವ ಅವಶ್ಯಕತೆ ಇಲ್ಲ, ಆಯಿ ಎಂಬ ಪಟ್ಟಣವನ್ನು ಹೊಡೆಯುವುದಕ್ಕೆ ಎರಡು ಅಥವಾ ಮೂರು ಸಾವಿರ ಜನರು ಹೋದರೆ ಸಾಕು. ಸೈನ್ಯವನ್ನು ಕಳುಹಿಸಿ ದಣಿಸಬೇಡ. ಏಕೆಂದರೆ ಸ್ವಲ್ಪ ಜನರು ಮಾತ್ರ ಅಲ್ಲಿ ಇದ್ದಾರೆ,” ಎಂದರು.


ಅವನ ಖಡ್ಗದ ಮೊನೆ ಮೊಂಡಾಗಿದೆ. ಯುದ್ಧದಲ್ಲಿ ನೀವು ಅವನನ್ನು ನಿಲ್ಲುವಂತೆ ಮಾಡಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು