Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 7:26 - ಕನ್ನಡ ಸಮಕಾಲಿಕ ಅನುವಾದ

26 ಅವರ ಮೇಲೆ ಕಲ್ಲುಕುಪ್ಪೆ ಕೂಡಿಸಿದರು. ಅದು ಈ ದಿನದವರೆಗೂ ಇದೆ. ಆಗ ಯೆಹೋವ ದೇವರು ತಮ್ಮ ಕೋಪದ ಉರಿಯನ್ನು ಬಿಟ್ಟು ತಿರುಗಿದರು. ಆದ್ದರಿಂದ ಆ ಸ್ಥಳವು ಈವರೆಗೂ ಆಕೋರಿನ ಕಣಿವೆ ಎಂದು ಕರೆಯಲಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಅವನ ಮೇಲೆ ಕಲ್ಲುಗಳ ಒಂದು ದೊಡ್ಡ ರಾಶಿಯು ನಿರ್ಮಾಣವಾಯಿತು. ಅದು ಇಂದಿನ ವರೆಗೂ ಇದೆ. ಆಗ ಯೆಹೋವನ ಕೋಪಾಗ್ನಿ ತಣ್ಣಗಾಯಿತು. ಈ ಸಂಗತಿಯ ದೆಸೆಯಿಂದ ಆ ಸ್ಥಳಕ್ಕೆ ಇಂದಿನವರೆಗೂ ಆಕೋರಿನ ತಗ್ಗು ಎಂಬ ಹೆಸರಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಅವನ ಮೇಲೆ ಕಲ್ಲುಗಳ ಒಂದು ದೊಡ್ಡ ಗುಡ್ಡೆಯನ್ನು ಹಾಕಿದರು. ಅದು ಇಂದಿನವರೆಗೂ ಇದೆ. ಬಳಿಕ ಸರ್ವೇಶ್ವರನ ಕೋಪಾಗ್ನಿ ತಣ್ಣಗಾಯಿತು. ಈ ಘಟನೆಯಿಂದಾಗಿ ಆ ಸ್ಥಳಕ್ಕೆ ‘ಆಕೋರಿನ ಕಣಿವೆ’ ಎಂಬ ಹೆಸರು ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಅವನ ಮೇಲೆ ಕಲ್ಲುಗಳ ಒಂದು ದೊಡ್ಡ ಕುಪ್ಪೆಯನ್ನು ಹಾಕಿದರು. ಅದು ಇಂದಿನವರೆಗೂ ಅದೆ. ಆಗ ಯೆಹೋವನ ರೋಷಾಗ್ನಿಯು ಅಡಗಿಹೋಯಿತು. ಈ ಸಂಗತಿಯ ದೆಸೆಯಿಂದ ಆ ಸ್ಥಳಕ್ಕೆ ಇಂದಿನವರೆಗೂ ಆಕೋರಿನ ತಗ್ಗು ಎಂಬ ಹೆಸರಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಆಕಾನನನ್ನು ಸುಟ್ಟ ಬಳಿಕ ಅವರು ಅವನ ದೇಹದ ಮೇಲೆ ಕಲ್ಲುಗಳ ಒಂದು ದೊಡ್ಡ ಕುಪ್ಪೆಯನ್ನು ಹಾಕಿದರು. ಆ ಕುಪ್ಪೆಯು ಇಂದಿಗೂ ಅಲ್ಲಿದೆ. ಹೀಗೆ ದೇವರು ಆಕಾನನನ್ನು ಶಿಕ್ಷಿಸಿದನು. ಅದಕ್ಕಾಗಿ ಆ ಕಣಿವೆಗೆ “ಆಕೋರ್ ಕಣಿವೆ” ಎಂಬ ಹೆಸರು ಬಂದಿತು. ಬಳಿಕ ಯೆಹೋವನಿಗೆ ಜನರ ಮೇಲಿದ್ದ ಕೋಪ ಶಮನವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 7:26
22 ತಿಳಿವುಗಳ ಹೋಲಿಕೆ  

ಅವಳ ದ್ರಾಕ್ಷಿತೋಟಗಳನ್ನು ಅಲ್ಲಿರುವಾಗಲೇ ಅವಳಿಗೆ ಹಿಂದಕ್ಕೆ ಕೊಡುವೆನು. ಆಕೋರಿನ ಕಣಿವೆಯನ್ನೇ, ಅವಳ ನಿರೀಕ್ಷೆಗೆ ದ್ವಾರವನ್ನಾಗಿ ಮಾಡುವೆನು. ಅಲ್ಲಿ ಅವಳು ತಾನು ಯೌವನದ ದಿವಸಗಳಲ್ಲಿಯೂ, ಈಜಿಪ್ಟ್ ದೇಶದೊಳಗಿಂದ ಹೊರಟು ಬಂದ ದಿವಸಗಳಲ್ಲಿಯೂ ಆದ ಹಾಗೆ ಆಡುವಳು.


ನನ್ನನ್ನು ಹುಡುಕುವ ನನ್ನ ಜನರಿಗೋಸ್ಕರ ಶಾರೋನು ಮಂದೆಗಳ ಹಟ್ಟಿಯಾಗಿಯೂ, ಆಕೋರಿನ ತಗ್ಗು, ದನಗಳು ಮಲಗುವ ಸ್ಥಳವಾಗಿಯೂ ಇರುವುದು, ಎಂದು ಯೆಹೋವ ದೇವರು ಹೇಳುತ್ತಾರೆ.


ಇದಲ್ಲದೆ ನೀವು ನಿಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳನ್ನು ಕಾಪಾಡಿ,


ಅವರು ಕಾರಾಗೃಹದಲ್ಲಿ ನನ್ನ ಜೀವವನ್ನು ತೆಗೆದುಹಾಕಿ, ನನ್ನ ಮೇಲೆ ಕಲ್ಲನ್ನು ಹಾಕಿದ್ದಾರೆ.


ಅವರು ಅಬ್ಷಾಲೋಮನನ್ನು ತೆಗೆದುಕೊಂಡು, ಅಡವಿಯಲ್ಲಿರುವ ಒಂದು ದೊಡ್ಡ ಗುಂಡಿಯಲ್ಲಿ ಹಾಕಿ, ಅವನ ಮೇಲೆ ದೊಡ್ಡ ಕಲ್ಲಿನ ಕುಪ್ಪೆಯನ್ನು ಹಾಕಿದರು. ಆದರೆ ಇಸ್ರಾಯೇಲರೆಲ್ಲರೂ ತಮ್ಮ ಗುಡಾರಗಳಿಗೆ ಓಡಿಹೋದರು.


ಆಯಿ ಎಂಬ ಪಟ್ಟಣದ ಅರಸನನ್ನು ಸಾಯಂಕಾಲದವರೆಗೂ ಒಂದು ಮರದಲ್ಲಿ ತೂಗಿಹಾಕಿಸಿದನು. ಸೂರ್ಯ ಅಸ್ತಮಿಸುವಾಗ ಯೆಹೋಶುವನು ಅವನ ಹೆಣವನ್ನು ಮರದಿಂದ ಇಳಿಸಿ, ಅದನ್ನು ಆ ಪಟ್ಟಣದ ಬಾಗಿಲಿನ ದ್ವಾರದಲ್ಲಿ ಹಾಕಲು ಆಜ್ಞಾಪಿಸಿದನು. ಆಗ ಅವರು ಹಾಗೆಯೇ ಮಾಡಿದರು. ಆ ದೊಡ್ಡ ಕಲ್ಲು ಕುಪ್ಪೆಯನ್ನು ಅದರ ಮೇಲೆ ಇಟ್ಟರು. ಅದು ಇಂದಿನವರೆಗೂ ಇದೆ.


ಆಗ ಯೆಹೋಶುವನೂ ಅವನೊಂದಿಗೆ ಇಸ್ರಾಯೇಲರೆಲ್ಲರೂ ಜೆರಹನ ಮಗನಾದ ಆಕಾನನನ್ನೂ ಆ ಬೆಳ್ಳಿಯನ್ನೂ ವಸ್ತ್ರವನ್ನೂ ಬಂಗಾರದ ಗಟ್ಟಿಯನ್ನೂ ಅವನ ಪುತ್ರಪುತ್ರಿಯರನ್ನೂ ಅವನ ಎತ್ತುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಅವನ ಡೇರೆಯನ್ನೂ ಅವನಿಗಿದ್ದ ಸಮಸ್ತವನ್ನೂ ತೆಗೆದುಕೊಂಡು ಆಕೋರಿನ ಕಣಿವೆಗೆ ತಂದರು.


ಆಗ ದೂತನು ನನಗೆ ಕೂಗಿ, “ನೋಡು, ಉತ್ತರ ದೇಶಕ್ಕೆ ಹೊರಟವುಗಳು, ಉತ್ತರ ದೇಶದಲ್ಲಿ ನನ್ನ ಆತ್ಮವನ್ನು ಶಾಂತಿ ಪಡಿಸಿವೆ,” ಎಂದನು.


ಆಗ ಯೆಹೋವ ದೇವರು ತಮ್ಮ ದೇಶಕ್ಕೋಸ್ಕರ ಅಭಿಮಾನಗೊಂಡು, ತಮ್ಮ ಜನರನ್ನು ಕನಿಕರಿಸುವರು.


ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದುಕೊಂಡು, ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಳ್ಳಿರಿ. ಅವರು ದಯೆಯೂ ಕರುಣೆಯೂ, ದೀರ್ಘಶಾಂತಿಯೂ ಮಹಾ ಪ್ರೀತಿಯೂ ಉಳ್ಳವರಾಗಿ ಮಾಡಬೇಕೆಂದಿರುವ ಕೇಡಿಗೆ ಮನಮರುಗುತ್ತಾರೆ.


ಯೆರೂಸಲೇಮಿನ ಸಂಗಡ ನೀವು ಮೃದುವಾಗಿ ಮಾತನಾಡಿರಿ. ಅದರ ಕಠಿಣ ಸೇವೆ ತೀರಿತೆಂದೂ, ಅದರ ಪಾಪಕ್ಕೆ ಪ್ರಾಯಶ್ಚಿತ್ತವಾಗಿದೆ, ಎಂದು ಘೋಷಿಸಿರಿ, ಏಕೆಂದರೆ ಅದು ಎಲ್ಲಾ ಪಾಪಗಳಿಗೂ ಯೆಹೋವ ದೇವರ ಕೈಯಿಂದ ಎರಡರಷ್ಟು ಹೊಂದಿದ್ದಾಯಿತು.


ಅವುಗಳನ್ನು ಬೆನ್ಯಾಮೀನನ ದೇಶದ ಚೇಲದಲ್ಲಿರುವ ಸೌಲನ ತಂದೆಯಾದ ಕೀಷನ ಸಮಾಧಿಯಲ್ಲಿ ಹೂಳಿಟ್ಟರು. ಅವರು ಅರಸನು ಆಜ್ಞಾಪಿಸಿದ್ದನ್ನೆಲ್ಲಾ ತೀರಿಸಿದ ತರುವಾಯ, ದೇವರು ದೇಶಕ್ಕೋಸ್ಕರ ಮಾಡಿದ ಬಿನ್ನಹವನ್ನು ಕೇಳಿದರು.


ಆದರೆ ಸೂರ್ಯನು ಅಸ್ತಮಿಸುವಾಗ ಯೆಹೋಶುವನು ಆಜ್ಞಾಪಿಸಲು, ಶವವನ್ನು ಮರಗಳಿಂದ ಇಳಿಸಿ ಅವರು ಬಚ್ಚಿಟ್ಟುಕೊಂಡಿದ್ದ ಗವಿಯಲ್ಲಿಯೇ ಅವರನ್ನು ಹಾಕಿ, ಈವರೆಗೂ ಇರುವ ಹಾಗೆ ದೊಡ್ಡ ಕಲ್ಲುಗಳನ್ನು ಅದರ ಬಾಯಿಗೆ ಮುಚ್ಚಿದರು.


‘ಕೇಡಿನ ನಿಮಿತ್ತವೂ ಬೆಟ್ಟಗಳಲ್ಲಿ ಅವರನ್ನು ಸಾಯಿಸಿ, ಭೂಮಿಯ ಮೇಲಿನಿಂದ ಅವರನ್ನು ಅಳಿಸಿಬಿಡುವುದಕ್ಕೂ, ದೇವರು ಅವರನ್ನು ಹೊರಗೆ ಬರಮಾಡಿದ್ದಾರೆ,’ ಎಂದು ಈಜಿಪ್ಟಿನವರು ಏಕೆ ಹೇಳಬೇಕು? ತಾವು ಕೋಪಾಗ್ನಿಯನ್ನು ಬಿಟ್ಟು ತಿರುಗಿಕೊಳ್ಳಿ. ನಿಮ್ಮ ಜನರಿಗೆ ವಿರೋಧವಾದ ಈ ಕೇಡಿನ ವಿಷಯದಲ್ಲಿ ತಮ್ಮ ಮನಸ್ಸನ್ನು ಬದಲಾಯಿಸಿರಿ.


ಇಸ್ರಾಯೇಲಿನವನಾದ ಆ ಮನುಷ್ಯನ ಹಿಂದೆ ಡೇರೆಯೊಳಗೆ ಪ್ರವೇಶಿಸಿ, ಇಸ್ರಾಯೇಲಿನವನನ್ನೂ ಆ ಮಹಿಳೆಯನ್ನೂ ಒಂದೇ ಬಾರಿಗೆ ಇಬ್ಬರ ಹೊಟ್ಟೆಯನ್ನು ತಿವಿದನು. ಹೀಗೆ ಇಸ್ರಾಯೇಲರಿಗೆ ಉಂಟಾಗಿದ್ದ ವ್ಯಾಧಿಯು ನಿಂತುಹೋಯಿತು.


ನಿಮ್ಮ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದಾಗ ಯೆಹೋವ ದೇವರು ತಮ್ಮ ಕೋಪವನ್ನು ಬಿಟ್ಟು, ತಿರುಗಿ ನಿಮಗೆ ದಯೆಯನ್ನು ತೋರಿಸಿ, ನಿಮ್ಮ ಮೇಲೆ ಕನಿಕರಪಟ್ಟು, ಅವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದಂತೆ ನಿಮ್ಮನ್ನು ಅಭಿವೃದ್ಧಿಪಡಿಸುವರು.


ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಉಗ್ರಕೋಪವು ನಮ್ಮನ್ನು ಬಿಟ್ಟುಹೋಗುವ ಹಾಗೆ, ನಾನು ಅವರ ಸಂಗಡ ಒಡಂಬಡಿಕೆಯನ್ನು ಮಾಡಲು ಮನಸ್ಸುಳ್ಳವನಾಗಿದ್ದೇನೆ.


ಆದಕಾರಣ ದಯಮಾಡಿ ಸಭೆಯ ಎಲ್ಲಾದರಲ್ಲಿ ನಮ್ಮ ಪ್ರಧಾನರು ನಿಲ್ಲಲಿ. ಈ ಕಾರ್ಯದ ನಿಮಿತ್ತ ನಮ್ಮ ದೇವರ ಕಠಿಣ ಕೋಪವು ನಮ್ಮನ್ನು ಬಿಟ್ಟು ಹೋಗುವವರೆಗೆ, ನಮ್ಮ ಪಟ್ಟಣಗಳಲ್ಲಿ ಯಹೂದ್ಯರಲ್ಲದ ಸ್ತ್ರೀಯರನ್ನು ತೆಗೆದುಕೊಂಡವರು, ನೇಮಿಸಿದ ಕಾಲದಲ್ಲಿ ಬಂದು, ಅವರ ಸಂಗಡ ಪ್ರತಿ ಪಟ್ಟಣದ ಹಿರಿಯರೂ, ಅದರ ನ್ಯಾಯಾಧಿಪತಿಗಳೂ ಇರಲಿ,” ಎಂದರು.


ನಮ್ಮ ರಕ್ಷಕ ಆಗಿರುವ ದೇವರೇ, ನಮ್ಮನ್ನು ಪುನಃ ಸ್ಥಾಪಿಸಿರಿ, ನಮ್ಮ ಮೇಲಿರುವ ನಿಮ್ಮ ಅಸಂತೋಷವನ್ನು ತೊಲಗಿಸಿರಿ.


ನಾನು ಬಾಳ್ ದೇವತೆಗಳ ಹೆಸರುಗಳನ್ನು ಅವಳ ಬಾಯಿಯಿಂದ ತೆಗೆದುಹಾಕುವೆನು. ಇನ್ನು ಮುಂದೆ ಅವರ ಹೆಸರನ್ನು ಕರೆಯಲಾಗುವುದಿಲ್ಲ.


ಆಗ ಅವರು ಯೋನನನ್ನು ಎತ್ತಿ ಸಮುದ್ರದಲ್ಲಿ ಹಾಕಿದರು. ಆಗ ಸಮುದ್ರವು ತನ್ನ ಉಗ್ರವನ್ನು ನಿಲ್ಲಿಸಿಬಿಟ್ಟಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು