Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 23:10 - ಕನ್ನಡ ಸಮಕಾಲಿಕ ಅನುವಾದ

10 ನಿಮ್ಮ ದೇವರಾದ ಯೆಹೋವ ದೇವರು ತಮ್ಮ ವಾಗ್ದಾನದಂತೆಯೇ ನಿಮಗೋಸ್ಕರ ಯುದ್ಧ ಮಾಡಿದ್ದರಿಂದ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವುದಕ್ಕೆ ಶಕ್ತನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನದಂತೆ ನಿಮಗೋಸ್ಕರ ಯುದ್ಧ ಮಾಡಿದ್ದರಿಂದ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವುದಕ್ಕೆ ಶಕ್ತನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ನಿಮ್ಮ ದೇವರಾದ ಸರ್ವೇಶ್ವರ ತಮ್ಮ ವಾಗ್ದಾನದಂತೆ ನಿಮ್ಮ ಪರವಾಗಿ ಯುದ್ಧಮಾಡಿದರು. ಆದ್ದರಿಂದಲೇ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವಷ್ಟು ಶಕ್ತನಾದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನದಂತೆಯೇ ನಿಮಗೋಸ್ಕರ ಯುದ್ಧಮಾಡಿದ್ದರಿಂದ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವದಕ್ಕೆ ಶಕ್ತನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಯೆಹೋವನ ಸಹಾಯದಿಂದ ನಿಮ್ಮಲ್ಲಿ ಒಬ್ಬ ಇಸ್ರೇಲಿಯು ಒಂದು ಸಾವಿರ ಮಂದಿ ಶತ್ರುಗಳನ್ನು ಸೋಲಿಸುವಂತಾಯಿತು; ಏಕೆಂದರೆ ನಿಮ್ಮ ದೇವರಾದ ಯೆಹೋವನು ನಿಮಗಾಗಿ ಯುದ್ಧ ಮಾಡುವುದಾಗಿ ಪ್ರಮಾಣ ಮಾಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 23:10
27 ತಿಳಿವುಗಳ ಹೋಲಿಕೆ  

ಇಸ್ರಾಯೇಲ್ ರಕ್ಷಣಾಬಂಡೆ ಅವರನ್ನು ಮಾರಿ, ಯೆಹೋವ ದೇವರು ಅವರನ್ನು ಕೈಬಿಟ್ಟ ಹೊರತು, ಒಬ್ಬನು ಹೇಗೆ ಸಾವಿರ ಮಂದಿಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು?


ನಿಮ್ಮಲ್ಲಿಯ ಐದು ಮಂದಿ ನೂರು ಮಂದಿಯನ್ನು ಹಿಂದಟ್ಟುವರು. ನಿಮ್ಮಲ್ಲಿಯ ನೂರು ಮಂದಿ, ಹತ್ತು ಸಾವಿರ ಮಂದಿಯನ್ನು ಅಟ್ಟಿಬಿಡುವರು. ನಿಮ್ಮ ಶತ್ರುಗಳು ಖಡ್ಗದಿಂದ ನಿಮ್ಮ ಮುಂದೆ ಬೀಳುವರು.


ನೀವು ಅವುಗಳಿಗೆ ಭಯಪಡಬೇಡಿರಿ, ನಿಮ್ಮ ದೇವರಾದ ಯೆಹೋವ ದೇವರೇ ನಿಮಗೋಸ್ಕರ ಯುದ್ಧಮಾಡುವರು,” ಎಂದೆನು.


ಯೆಹೋವ ದೇವರು ನಿಮಗೋಸ್ಕರ ಯುದ್ಧಮಾಡುವರು, ಆದರೆ ನೀವು ವಿಶ್ರಾಂತಿಯಿಂದಿರಿ,” ಎಂದನು.


ಯೆಹೋವ ದೇವರೇ, ನನ್ನ ಸಂಗಡ ವ್ಯಾಜ್ಯ ಮಾಡುವವರ ಸಂಗಡ ವ್ಯಾಜ್ಯ ಮಾಡಿರಿ; ನನಗೆ ವಿರೋಧವಾಗಿ ಯುದ್ಧ ಮಾಡುವವರ ಸಂಗಡ ಯುದ್ಧಮಾಡಿರಿ.


ಏಕೆಂದರೆ ನಿಮ್ಮ ಶತ್ರುಗಳ ವಿರೋಧವಾಗಿ ನಿಮಗೋಸ್ಕರ ಯುದ್ಧಮಾಡಿ, ನಿಮ್ಮನ್ನು ರಕ್ಷಿಸುವುದಕ್ಕೆ ನಿಮ್ಮ ದೇವರಾದ ಯೆಹೋವ ದೇವರೇ ನಿಮ್ಮ ಸಂಗಡ ಬರುತ್ತಾರೆ,” ಎಂದು ಹೇಳಬೇಕು.


ಹಾಗಾದರೆ, ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಪರವಾಗಿ ಇದ್ದರೆ ನಮ್ಮನ್ನು ವಿರೋಧಿಸುವವರು ಯಾರು?


ಸೇನಾಧೀಶ್ವರ ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ. ಯಾಕೋಬನ ದೇವರು ನಮಗೆ ಭದ್ರಕೋಟೆಯಾಗಿದ್ದಾರೆ.


ಆದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೋಸ್ಕರ ಈ ಸಕಲ ಜನಾಂಗಗಳಿಗೆ ಮಾಡಿದ ಎಲ್ಲವನ್ನೂ ನೋಡಿದ್ದೀರಿ. ನಿಮಗೋಸ್ಕರವಾಗಿ ಯುದ್ಧ ಮಾಡಿದವರು ನಿಮ್ಮ ದೇವರಾದ ಯೆಹೋವ ದೇವರು.


ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ಯುವಕನಿಗೆ, “ನಾವು ಈ ಸುನ್ನತಿ ಇಲ್ಲದವರ ಠಾಣಕ್ಕೆ ದಾಟಿ ಹೋಗೋಣ ಬಾ; ಒಂದು ವೇಳೆ ಯೆಹೋವ ದೇವರು ನಮಗೋಸ್ಕರ ಕಾರ್ಯವನ್ನು ನಡೆಸುವರು. ಏಕೆಂದರೆ ಅನೇಕ ಜನರಿಂದಲಾದರೂ, ಸ್ವಲ್ಪ ಜನರಿಂದಲಾದರೂ ರಕ್ಷಿಸುವುದಕ್ಕೆ ಯೆಹೋವ ದೇವರಿಗೆ ಅಸಾಧ್ಯವಲ್ಲ,” ಎಂದನು.


ಯೆಹೋಶುವನು ಈ ಸಮಸ್ತ ಅರಸರನ್ನೂ, ಅವರ ರಾಜ್ಯವನ್ನೂ ಏಕಕಾಲದಲ್ಲಿ ವಶಪಡಿಸಿಕೊಂಡನು. ಏಕೆಂದರೆ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಇಸ್ರಾಯೇಲಿಗೋಸ್ಕರ ಯುದ್ಧಮಾಡಿದರು.


ಅವನು ಒಂದು ಕತ್ತೆಯ ದವಡೆಯ ಹೊಸ ಎಲುಬನ್ನು ಕಂಡುಕೊಂಡು, ತನ್ನ ಕೈಯನ್ನು ಚಾಚಿ ತೆಗೆದುಕೊಂಡು, ಅದರಿಂದ ಸಾವಿರ ಜನರನ್ನು ವಧಿಸಿಬಿಟ್ಟನು.


ದಾವೀದನ ಪರಾಕ್ರಮಶಾಲಿಗಳ ಹೆಸರುಗಳು ಇವೇ: ಮೂರು ಜನ ಮುಖ್ಯಸ್ಥರಲ್ಲಿ ಒಬ್ಬನು ತಹ್ಕೆಮೋನ್ಯನಾದ ಯೋಷೆಬ್ ಬಷ್ಷೆಬೆತ ಎಂಬವನು; ಇವನು ತನ್ನ ಈಟಿಯಿಂದ ಎಂಟುನೂರು ಮಂದಿಗೆ ವಿರೋಧವಾಗಿ ಹೋರಾಡಿ ಅವರನ್ನು ಒಂದೇ ಕಾಳಗದಲ್ಲಿ ಕೊಂದುಹಾಕಿದನು.


ಏಹೂದನ ತರುವಾಯ ಅನಾತನ ಮಗ ಶಮ್ಗರನು ಎದ್ದನು. ಅವನು ಫಿಲಿಷ್ಟಿಯರಲ್ಲಿ ಆರುನೂರು ಜನರನ್ನು ಎತ್ತಿನ ಮುಳ್ಳುಗೋಲಿನಿಂದ ಹತಮಾಡಿದನು. ಅವನು ಸಹ ಇಸ್ರಾಯೇಲರನ್ನು ರಕ್ಷಿಸಿದನು.


“ಇಸ್ರಾಯೇಲರೇ ಕೇಳಿರಿ, ನೀವು ಈ ಹೊತ್ತು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಸಮೀಪ ಬಂದಿದ್ದೀರಿ. ನಿಮ್ಮ ಹೃದಯಗಳು ಕುಗ್ಗಬಾರದು. ನೀವು ಭಯಪಡಬೇಡಿರಿ, ನಡುಗಬೇಡಿರಿ, ಅವರಿಗೆ ಹೆದರಲೂ ಬೇಡಿರಿ.


ನಿಮಗೆ ವಿರೋಧವಾಗಿ ಏಳುವ ನಿಮ್ಮ ಶತ್ರುಗಳನ್ನು ಯೆಹೋವ ದೇವರು ನಿಮ್ಮ ಮುಂದೆಯೇ ಸೋಲಿಸಿಬಿಡುವರು. ಅವರು ಒಂದೇ ಮಾರ್ಗದಲ್ಲಿ ನಿಮಗೆ ವಿರೋಧವಾಗಿ ಹೊರಟು ಬಂದರೂ, ಏಳು ಮಾರ್ಗಗಳಿಂದ ಓಡಿಹೋಗುವರು.


ದೇವರು, “ನನ್ನ ಮುಖವನ್ನು ಅವರಿಗೆ ಮರೆಮಾಡುವೆನು, ಅವರ ಅಂತ್ಯವು ಏನೆಂದು ನೋಡುವೆನು. ಅವರು ಮೂರ್ಖ ಸಂತತಿಯೇ. ನಂಬಿಕೆಯಿಲ್ಲದ ಮಕ್ಕಳೇ.


ಹೀಗಿರುವುದರಿಂದ ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಂಡು ನಿಮ್ಮ ದೇವರಾದ ಯೆಹೋವ ದೇವರನ್ನೇ ಪ್ರೀತಿಸಿರಿ.


ಏಕೆಂದರೆ ಯುದ್ಧವು ದೇವರಿಂದ ಉಂಟಾದ ಕಾರಣ, ಅನೇಕ ಜನರು ಹತರಾದರು. ಇವರು ಸೆರೆಯಾಗಿ ಹೋಗುವ ಕಾಲದವರೆಗೂ ಅವರ ಸ್ಥಳದಲ್ಲಿ ವಾಸವಾಗಿದ್ದರು.


ಒಬ್ಬನ ಬೆದರಿಕೆಗೆ ಸಾವಿರ ಜನರು ಓಡುವರು, ಐವರು ಹೆದರಿಸುವುದರಿಂದ ನೀವೆಲ್ಲರೂ ಓಡಿಹೋಗುವಿರಿ, ಕಟ್ಟಕಡೆಗೆ ಬೆಟ್ಟದ ಶಿಖರದಲ್ಲಿನ ಸ್ತಂಭದ ಹಾಗೂ ಗುಡ್ಡದ ಮೇಲಣ ಕಂಬದಂತೆಯೂ ಒಂಟಿಯಾಗಿ ಉಳಿಯುವಿರಿ.”


ಆ ದಿನದಲ್ಲಿ ಯೆಹೋವ ದೇವರು ಯೆರೂಸಲೇಮಿನ ನಿವಾಸಿಗಳನ್ನು ಕಾಪಾಡುವರು. ಆ ದಿವಸಗಳಲ್ಲಿ ಅವರಲ್ಲಿ ಅತ್ಯಂತ ಬಲಹೀನನು ದಾವೀದನಂತೆ ಬಲಾಢ್ಯನಾಗುವನು. ದಾವೀದನ ವಂಶವು ದೇವರ ಹಾಗೆಯೂ, ಮುಂದಾಳಾಗಿ ಯೆಹೋವ ದೇವರ ದೂತನ ಹಾಗೆಯೂ ಇರುವುದು.


ನೀವು ನಿಮ್ಮ ಶತ್ರುಗಳನ್ನು ಹಿಂದಟ್ಟುವಾಗ, ಅವರು ಖಡ್ಗದಿಂದ ನಿಮ್ಮ ಮುಂದೆ ಬೀಳುವರು.


ಇವರು ಅವರಿಗೆ ವಿರೋಧವಾಗಿ ಸಹಾಯ ಹೊಂದಿದ್ದರಿಂದ, ಹಗ್ರೀಯರೂ, ಅವರ ಸಂಗಡ ಕೂಡಿದ್ದವರೆಲ್ಲರೂ ಇವರ ಕೈವಶವಾದರು. ಅವರು ಯುದ್ಧದಲ್ಲಿ ದೇವರಿಗೆ ಮೊರೆಯಿಟ್ಟು, ಅವರಲ್ಲಿ ಭರವಸೆ ಇಟ್ಟಿದ್ದರಿಂದ, ದೇವರು ಅವರ ಮನವಿಯನ್ನು ಕೇಳಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು