Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 23:1 - ಕನ್ನಡ ಸಮಕಾಲಿಕ ಅನುವಾದ

1 ಯೆಹೋವ ದೇವರು ಇಸ್ರಾಯೇಲರನ್ನು ಸುತ್ತಲಿರುವ ಎಲ್ಲಾ ಶತ್ರುಗಳಿಂದ ತಪ್ಪಿಸಿ, ಅವರಿಗೆ ವಿಶ್ರಾಂತಿಕೊಟ್ಟ ಬಹಳ ದಿವಸಗಳ ತರುವಾಯ ಯೆಹೋಶುವನ ದಿವಸಗಳು ಗತಿಸಿ ವೃದ್ಧನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೆಹೋವನು ಸುತ್ತಮುತ್ತಲಿನ ಶತ್ರುಗಳನ್ನು ನಿರ್ಮೂಲಮಾಡಿ ಇಸ್ರಾಯೇಲ್ಯರಿಗೆ ವಿಶ್ರಾಂತಿ ಕೊಟ್ಟನು. ತರುವಾಯ ಬಹು ದಿನಗಳಾದ ಮೇಲೆ ಯೆಹೋಶುವನು ದಿನತುಂಬಿದ ಮುದುಕನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಸರ್ವೇಶ್ವರಸ್ವಾಮಿ ಸುತ್ತಮುತ್ತಲಿನ ಶತ್ರುಗಳನ್ನು ನಿರ್ಮೂಲಮಾಡಿ ಇಸ್ರಯೇಲರಿಗೆ ನೆಮ್ಮದಿಯಿತ್ತರು. ಬಹಳ ದಿನಗಳಾದ ತರುವಾಯ ಯೆಹೋಶುವ ಹಣ್ಣುಹಣ್ಣು ಮುದುಕನಾದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಯೆಹೋವನು ಸುತ್ತಣ ವಿರೋಧಿಗಳನ್ನು ನಿರ್ಮೂಲಮಾಡಿ ಇಸ್ರಾಯೇಲ್ಯರಿಗೆ ವಿಶ್ರಾಂತಿ ಕೊಟ್ಟನು. ತರುವಾಯ ಬಹುದಿನಗಳು ಗತಿಸಿದ ಮೇಲೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಯೆಹೋವನು ಇಸ್ರೇಲರ ಶತ್ರುಗಳನ್ನು ಸದೆಬಡೆದು ಅವರಿಗೆ ವಿಶ್ರಾಂತಿಯನ್ನು ಕೊಟ್ಟನು. ಯೆಹೋವನು ಇಸ್ರೇಲನ್ನು ಸುರಕ್ಷಿತಗೊಳಿಸಿದನು. ಅನೇಕ ವರ್ಷಗಳು ಕಳೆದವು. ಯೆಹೋಶುವನು ಬಹಳ ಮುದುಕನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 23:1
15 ತಿಳಿವುಗಳ ಹೋಲಿಕೆ  

ಯೆಹೋಶುವನು ದಿನತುಂಬಿದ ಮುದುಕನಾಗಲು ಯೆಹೋವ ದೇವರು ಅವನಿಗೆ, “ನೀನು ಈಗ ಮುದುಕನಾದಿ, ಸ್ವಾಧೀನ ಮಾಡಿಕೊಳ್ಳತಕ್ಕ ದೇಶಗಳು ಇನ್ನೂ ಬಹಳ ಇವೆ.


ಯೆಹೋವ ದೇವರು ಅವರ ತಂದೆಗಳಿಗೆ ಆಣೆಯಿಟ್ಟ ಪ್ರಕಾರವೇ ಅವರ ಸುತ್ತಲೂ ಅವರಿಗೆ ವಿಶ್ರಾಂತಿಕೊಟ್ಟರು. ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ. ಅವರ ಶತ್ರುಗಳನ್ನೆಲ್ಲಾ ಯೆಹೋವ ದೇವರು ಅವರ ಕೈಗಳಿಗೆ ಒಪ್ಪಿಸಿದರು.


ಹೀಗೆ ಯೆಹೋಶುವನು ದೇಶವನ್ನೆಲ್ಲಾ ಯೆಹೋವ ದೇವರು ಮೋಶೆಗೆ ಹೇಳಿದ ಪ್ರಕಾರವೇ ಸ್ವಾಧೀನಮಾಡಿಕೊಂಡನು. ಅದನ್ನು ಇಸ್ರಾಯೇಲರಿಗೆ ಅವರ ಗೋತ್ರಗಳ ಭಾಗಗಳಿಗನುಸಾರ ಬಾಧ್ಯತೆಯಾಗಿ ಕೊಟ್ಟನು. ಆಗ ದೇಶವು ಯುದ್ಧವಿಲ್ಲದೆ ವಿಶ್ರಮಿಸಿಕೊಂಡಿತು.


ದೇವರು ಯುದ್ಧಗಳನ್ನು ಭೂಮಿಯ ಅಂತ್ಯದವರೆಗೆ ನಿಲ್ಲಿಸುತ್ತಾರೆ. ಬಿಲ್ಲನ್ನೂ ಭಲ್ಲೆಯನ್ನೂ ಮುರಿದು ಹಾಕಿದ್ದಾರೆ. ರಥಗಳನ್ನು ಬೆಂಕಿಯಿಂದ ಸುಡುತ್ತಾರೆ.


ಈಗ ನಿಮ್ಮ ದೇವರಾದ ಯೆಹೋವ ದೇವರು ಅವರಿಗೆ ವಾಗ್ದಾನ ಮಾಡಿದ ಪ್ರಕಾರ, ನಿಮ್ಮ ಸಹೋದರರಿಗೆ ವಿಶ್ರಾಂತಿ ಕೊಟ್ಟಿದ್ದಾರೆ. ಯೆಹೋವ ದೇವರ ಸೇವಕನಾದ ಮೋಶೆಯು ಯೊರ್ದನ್ ನದಿ ಆಚೆ ಕಡೆ ನಿಮಗೆ ಕೊಟ್ಟ ಸೊತ್ತಿನ ದೇಶದಲ್ಲಿರುವ ನಿಮ್ಮ ನಿವಾಸಗಳಿಗೆ ನೀವು ಹೊರಡಿರಿ.


“ನಾನು ಈ ಹೊತ್ತು ನೂರ ಇಪ್ಪತ್ತು ವರ್ಷದವನಾಗಿದ್ದೇನೆ. ಇನ್ನು ಮುಂದೆ ನಿಮ್ಮನ್ನು ಮುನ್ನಡೆಸಲು ನನಗೆ ಸಾಧ್ಯವಾಗುತ್ತಿಲ್ಲ. ಇದಲ್ಲದೆ ಯೆಹೋವ ದೇವರು ನನಗೆ, ‘ನೀನು ಈ ಯೊರ್ದನನ್ನು ದಾಟುವುದಿಲ್ಲ,’ ಎಂದು ಹೇಳಿದ್ದಾರೆ.


ಅವನು ಪೂರ್ಣಾಯುಷ್ಯನಾಗಿ ತುಂಬಾ ಮುದುಕನಾಗಿ ಮರಣಹೊಂದಿ ತನ್ನ ಪಿತೃಗಳ ಬಳಿಗೆ ಸೇರಿದನು.


ಪಶುವು ತಗ್ಗಿಗೆ ಇಳಿಯುವ ಪ್ರಕಾರ, ಯೆಹೋವ ದೇವರ ಆತ್ಮರು ಅವರಿಗೆ ವಿಶ್ರಾಂತಿಯನ್ನು ಕೊಟ್ಟರು. ಈ ಪ್ರಕಾರ ನೀವು ನಿಮಗೆ ಮಹಿಮೆಯುಳ್ಳ ಹೆಸರನ್ನು ಉಂಟುಮಾಡುವುದಕ್ಕಾಗಿ, ನಿಮ್ಮ ಜನರನ್ನು ನಡಿಸಿದಿರಿ.


ಈಗ ಆ ಅರಸನು ಇನ್ನು ಮುಂದೆ ನಿಮ್ಮನ್ನು ನಡಿಸುತ್ತಾನೆ. ನಾನು ವೃದ್ಧನಾಗಿ ನರೆ ಬಂದವನಾದೆನು. ನನ್ನ ಪುತ್ರರು ನಿಮ್ಮ ಸಂಗಡ ಇದ್ದಾರೆ. ನಾನು ನನ್ನ ಬಾಲ್ಯ ಮೊದಲ್ಗೊಂಡು ಈ ದಿನದವರೆಗೂ ನಿಮ್ಮ ಮುಂದೆ ನಾಯಕನಾಗಿ ನಡೆದುಕೊಂಡಿದ್ದೇನೆ.


ಅರಸನಾದ ದಾವೀದನು ವೃದ್ಧನಾಗಿಯೂ, ಬಹಳ ಪ್ರಾಯ ಹೋದವನಾಗಿಯೂ ಇರುವಾಗ, ಅವನ ಮೇಲೆ ಹೊದಿಕೆಗಳನ್ನು ಹಾಕಿದರೂ, ಅವನಿಗೆ ಬೆಚ್ಚಗಾಗುತ್ತಿರಲಿಲ್ಲ.


ದಾವೀದನು, “ಇಸ್ರಾಯೇಲಿನ ದೇವರಾದ ಯೆಹೋವ ದೇವರು, ಅವರು ಯುಗಯುಗಾಂತರಕ್ಕೂ ಯೆರೂಸಲೇಮಿನಲ್ಲಿ ವಾಸಿಸುವ ಹಾಗೆ ತಮ್ಮ ಜನರಿಗೆ ವಿಶ್ರಾಂತಿಯನ್ನು ಕೊಟ್ಟಿದ್ದಾರೆ,” ಎಂದು ಹೇಳಿ,


ಇಸ್ರಾಯೇಲರು ತಮ್ಮ ಲೆಕ್ಕದ ಪ್ರಕಾರವಾಗಿ ಹೀಗೆಯೇ ಇದ್ದರು. ಹೇಗೆಂದರೆ, ಕುಟುಂಬಗಳ ಮುಖ್ಯಸ್ಥರೂ ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ, ಅಧಿಪತಿಗಳೂ ವರ್ಷದ ಎಲ್ಲಾ ತಿಂಗಳುಗಳಲ್ಲಿ ಪ್ರತಿ ತಿಂಗಳು ಸರತಿಯಂತೆ ಬರುತ್ತಿದ್ದ ವರ್ಗಗಳ ಕಾರ್ಯಗಳಲ್ಲಿ ಅರಸನನ್ನು ಸೇವಿಸಿದ ಅವರ ಪಾರುಪತ್ಯಗಾರರೂ ಪ್ರತಿವರ್ಗದಲ್ಲಿ 24,000 ಮಂದಿಯಿದ್ದರು.


ಅಬೀಯನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು, ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಆಸನು ಅವನಿಗೆ ಬದಲಾಗಿ ಅರಸನಾದನು, ಅವನ ದಿವಸಗಳಲ್ಲಿ ಹತ್ತು ವರ್ಷ ದೇಶವು ಶಾಂತವಾಗಿತ್ತು.


ಇದಲ್ಲದೆ ಅವನು ಉನ್ನತ ಪೂಜಾಸ್ಥಳಗಳನ್ನೂ, ವಿಗ್ರಹಗಳನ್ನೂ ಯೆಹೂದದ ಸಮಸ್ತ ಪಟ್ಟಣಗಳಿಂದ ತೆಗೆದುಹಾಕಿದನು. ರಾಜ್ಯವು ಶಾಂತವಾಗಿತ್ತು.


ಹೀಗೆ ಯೆಹೋಷಾಫಾಟನ ರಾಜ್ಯವು ಶಾಂತವಾಗಿತ್ತು. ಅವನ ದೇವರು ಸುತ್ತಲೂ ಅವನಿಗೆ ವಿಶ್ರಾಂತಿಕೊಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು