ಯೆಹೋಶುವ 22:28 - ಕನ್ನಡ ಸಮಕಾಲಿಕ ಅನುವಾದ28 “ಇದಲ್ಲದೆ ನಾವು, ‘ಒಂದು ವೇಳೆ ಅವರು ಮುಂದೆ ನಮಗಾಗಲಿ, ನಮ್ಮ ಸಂತತಿಯವರಿಗಾಗಲಿ ಈ ಪ್ರಕಾರ ಹೇಳಿದ್ದೇ ಆದರೆ ನಾವು ಅವರಿಗೆ: ಯೆಹೋವ ದೇವರ ಬಲಿಪೀಠವನ್ನು ಹೋಲುವ ಈ ವೇದಿಕೆಯನ್ನು ನೋಡಿರಿ, ನಮ್ಮ ಪೂರ್ವಜರು ಇದನ್ನು ದಹನಬಲಿ, ಸಮರ್ಪಣ ಬಲಿಗಳನ್ನು ಅರ್ಪಿಸುವುದಕ್ಕಾಗಿ ಕಟ್ಟಲಿಲ್ಲ. ಇದು ನಮಗೂ ನಿಮಗೂ ಮಧ್ಯೆ ಸಾಕ್ಷಿಯಾಗಿದೆಯಷ್ಟೆ,’ ಎಂದು ಹೇಳುವೆವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201928 ಅವರು ಮುಂದೆ ನಮಗಾಗಲಿ, ನಮ್ಮ ಸಂತಾನದವರಿಗಾಗಲಿ ಈ ರೀತಿಯಾಗಿ ಹೇಳಿದರೆ ನಾವು ಅವರಿಗೆ ‘ಯೆಹೋವನ ಯಜ್ಞವೇದಿಯ ಮಾದರಿಯನ್ನು ನೋಡಿರಿ: ನಮ್ಮ ಪೂರ್ವಿಕರು ಇದನ್ನು ಸರ್ವಾಂಗಹೋಮ ಯಜ್ಞಗಳನ್ನು ಸಮರ್ಪಿಸುವುದಕ್ಕೋಸ್ಕರ ಕಟ್ಟಲಿಲ್ಲ; ಇದು ನಮ್ಮ ನಿಮ್ಮ ಮಧ್ಯದಲ್ಲಿ ಒಂದು ಸಾಕ್ಷಿಯಾಗಿದೆಯಷ್ಟೆ’ ಎಂದು ಹೇಳುವೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)28 ಒಂದು ವೇಳೆ ಅವರು ಮುಂದೆ ನಮಗಾಗಲಿ, ನಮ್ಮ ಸಂತಾನದವರಿಗಾಗಲಿ ಈ ಪ್ರಕಾರ ಹೇಳಿದ್ದೇ ಆದರೆ ನಾವು ಅವರಿಗೆ ‘ಸರ್ವೇಶ್ವರನ ಬಲಿಪೀಠವನ್ನು ಹೋಲುವ ಈ ವೇದಿಕೆಯನ್ನು ನೋಡಿ: ನಮ್ಮ ಪೂರ್ವಜರು ಇದನ್ನು ದಹನಬಲಿ, ಸಮರ್ಪಣ ಬಲಿಗಳನ್ನು ಅರ್ಪಿಸುವುದಕ್ಕಾಗಿ ಕಟ್ಟಲಿಲ್ಲ; ಇದು ನಮಗೂ ನಿಮಗೂ ಮಧ್ಯೆ ಸಾಕ್ಷಿಯಾಗಿದೆಯಷ್ಟೆ,’ ಎಂದು ಹೇಳುವೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)28 ಅವರು ಮುಂದೆ ನಮಗಾಗಲಿ ನಮ್ಮ ಸಂತಾನದವರಿಗಾಗಲಿ ಈ ಪ್ರಕಾರ ಹೇಳಿದರೆ ನಾವು ಅವರಿಗೆ - ಈ ಯೆಹೋವವೇದಿಯ ಮಾದರಿಯನ್ನು ನೋಡಿರಿ; ನಮ್ಮ ಪಿತೃಗಳು ಇದನ್ನು ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸುವದಕ್ಕೋಸ್ಕರ ಕಟ್ಟಲಿಲ್ಲ; ಇದು ನಮಗೂ ನಿಮಗೂ ಮಧ್ಯದಲ್ಲಿ ಸಾಕ್ಷಿಯಾಗಿರುತ್ತದೆಯಷ್ಟೆ ಎಂದು ಹೇಳುವೆವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್28 ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳಿಗೆ ‘ನೀವು ಇಸ್ರೇಲಿಗೆ ಸಂಬಂಧಪಟ್ಟವರಲ್ಲ’ ಎಂದು ಹೇಳಿದರೆ, ನಮ್ಮ ಮಕ್ಕಳು ‘ಇಲ್ಲಿ ನೋಡಿ! ಗತಿಸಿಹೋದ ನಮ್ಮ ಪೂರ್ವಿಕರು ಒಂದು ಯಜ್ಞವೇದಿಕೆಯನ್ನು ಕಟ್ಟಿದ್ದಾರೆ. ಆ ಯಜ್ಞವೇದಿಕೆಯು ಪವಿತ್ರ ಗುಡಾರದಲ್ಲಿರುವ ಯಜ್ಞವೇದಿಕೆಯಂತಿದೆ. ನಾವು ಈ ಯಜ್ಞವೇದಿಕೆಯನ್ನು ಸರ್ವಾಂಗಹೋಮಗಳಿಗಾಗಲಿ ಯಜ್ಞಗಳಿಗಾಗಲಿ ಬಳಸುವುದಿಲ್ಲ. ನಾವು ಇಸ್ರೇಲಿಗೆ ಸೇರಿದವರೆಂಬುದಕ್ಕೆ ಈ ಯಜ್ಞವೇದಿಕೆ ಸಾಕ್ಷಿಯಾಗಿದೆ’ ಎಂದು ಹೇಳುವರು. ಅಧ್ಯಾಯವನ್ನು ನೋಡಿ |
ನಮಗೂ ನಿಮಗೂ ನಮ್ಮ ತರುವಾಯ ನಮ್ಮ ಸಂತತಿಯವರಿಗೂ ಮಧ್ಯದಲ್ಲಿ ಒಂದು ಸಾಕ್ಷಿ ಉಂಟಾಗಿರುವಂತೆಯೂ ನಾವು ಯೆಹೋವ ದೇವರ ಸನ್ನಿಧಿಯಲ್ಲಿ ದಹನಬಲಿ, ಸಮಾಧಾನದ ಬಲಿ ಮುಂತಾದವುಗಳನ್ನು ಅರ್ಪಿಸಿ ಆರಾಧಿಸುವುದಕ್ಕೆ ನಿಮಗೆ ಗುರುತಾಗಿರುವಂತೆಯೂ, ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ, ‘ಯೆಹೋವ ದೇವರಲ್ಲಿ ನಿಮಗೆ ಭಾಗವಿಲ್ಲ,’ ಎಂದು ಹೇಳದೆ ಇರುವಂತೆಯೂ ಸಾಕ್ಷಿಗಾಗಿ ಕಟ್ಟಿದ್ದೇವೆ ಅಷ್ಟೇ.