ಯೆಹೋಶುವ 22:25 - ಕನ್ನಡ ಸಮಕಾಲಿಕ ಅನುವಾದ25 ರೂಬೇನ್ಯರೇ, ಗಾದ್ಯರೇ ಯೆಹೋವ ದೇವರು ನಿಮಗೂ ನಮಗೂ ನಡುವೆ ಯೊರ್ದನ್ ನದಿಯನ್ನು ಮೇರೆಯಾಗಿ ಇಟ್ಟಿದ್ದರಿಂದ ಯೆಹೋವ ದೇವರ ಕಾರ್ಯಗಳಲ್ಲಿ ನಿಮಗೆ ಭಾಗವು ಇಲ್ಲ,’ ಎಂದು ಹೇಳಿ, ನಮ್ಮ ಮಕ್ಕಳನ್ನು ಯೆಹೋವ ದೇವರಿಗೆ ಭಯಪಡದ ಹಾಗೆ ಮಾಡುವರೆಂದು ಅಂಜಿಕೊಂಡು ಇದನ್ನು ಮಾಡಿದೆವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ರೂಬೇನ್ಯರೇ, ಗಾದ್ಯರೇ, ಯೆಹೋವನು ನಿಮಗೂ ನಮಗೂ ನಡುವೆ ಈ ಯೊರ್ದನ್ ನದಿಯನ್ನು ಮೇರೆಯಾಗಿ ಇಟ್ಟಿದ್ದಾನೆ. ಯೆಹೋವನಲ್ಲಿ ನಿಮಗೆ ಯಾವ ಪಾಲೂ ಇಲ್ಲ ಎಂದು ಹೇಳಿ ನಿಮ್ಮ ಮಕ್ಕಳು ನಮ್ಮ ಮಕ್ಕಳನ್ನು ದೈವಭಕ್ತಿಯಿಂದ ಬೇರ್ಪಡಿಸಿಯಾರೆಂದು ಭಯಪಟ್ಟೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ರೂಬೇನ್ಯರೇ, ಗಾದ್ಯರೇ, ಸರ್ವೇಶ್ವರ ನಿಮಗೂ ನಮಗೂ ನಡುವೆ ಈ ಜೋರ್ಡನ್ ನದಿಯನ್ನು ಸರಹದ್ದಾಗಿ ಇಟ್ಟಿದ್ದಾರೆ. ಸರ್ವೇಶ್ವರನಲ್ಲಿ ನಿಮಗೆ ಯಾವ ಪಾಲೂ ಇಲ್ಲ, ಎಂದು ಹೇಳಿ ನಿಮ್ಮ ಮಕ್ಕಳು ನಮ್ಮ ಮಕ್ಕಳನ್ನು ದೇವಭಕ್ತಿಯಿಂದ ಬೇರ್ಪಡಿಸಿಯಾರೆಂದು ಭಯಪಟ್ಟೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 ರೂಬೇನ್ಯರೇ, ಗಾದ್ಯರೇ, ಯೆಹೋವನು ನಮಗೂ ನಿಮಗೂ ನಡುವೆ ಯೊರ್ದನ್ ಹೊಳೆಯನ್ನು ಮೇರೆಯಾಗಿಟ್ಟಿದ್ದಾನೆ. ಆತನಲ್ಲಿ ನಿಮಗೇನೂ ಪಾಲಿಲ್ಲ ಎಂದು ಹೇಳಿ ಅವರನ್ನು ದೇವಭಕ್ತಿಯಿಂದ ತೊಲಗಿಸಿ ಬಿಟ್ಟಾರು ಎಂಬ ಭಯದಿಂದ ನಾವು - ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್25 ದೇವರು ನಮಗೆ ಜೋರ್ಡನ್ ನದಿಯ ಮತ್ತೊಂದು ದಡದಲ್ಲಿ ಭೂಮಿಯನ್ನು ಕೊಟ್ಟಿದ್ದಾನೆ. ಅಂದರೆ ಜೋರ್ಡನ್ ನದಿಯು ನಮ್ಮನ್ನು ಬೇರ್ಪಡಿಸುತ್ತದೆ. ನಿಮ್ಮ ಮಕ್ಕಳು ದೊಡ್ಡವರಾಗಿ ನಿಮ್ಮ ಭೂಮಿಯನ್ನು ಆಳುವಾಗ, ನಾವು ನಿಮ್ಮ ಜನರೆಂಬುದನ್ನು ಮರೆತುಬಿಡಬಹುದು. ‘ರೂಬೇನ್ಯರು, ಗಾದ್ಯರು ಆದ ನೀವು ಇಸ್ರೇಲಿನ ಅಂಗವಾಗಿಲ್ಲ’ ಎಂದು ಹೇಳಿ ನಮ್ಮ ಮಕ್ಕಳು ಯೆಹೋವನನ್ನು ಆರಾಧಿಸದಂತೆ ನಿಮ್ಮ ಮಕ್ಕಳು ತಡೆಯಬಹುದು. ಅಧ್ಯಾಯವನ್ನು ನೋಡಿ |
ನನ್ನ ಕೈಯಲ್ಲಿ ಏನು ಕೆಟ್ಟತನವಿದೆ? ಈಗ ಅರಸನಾದ ನನ್ನ ಒಡೆಯನು ದಯಮಾಡಿ ತನ್ನ ಸೇವಕನ ಮಾತುಗಳನ್ನು ಕೇಳಲಿ. ಯೆಹೋವ ದೇವರು ನಿನ್ನನ್ನು ನನಗೆ ವಿರೋಧವಾಗಿ ಪ್ರೇರೇಪಿಸಿದರೆ, ಕಾಣಿಕೆಯನ್ನು ಅಂಗೀಕರಿಸಲಿ. ಆದರೆ ಮಾನವರು ಇದನ್ನು ಮಾಡಿದರೆ, ಅವರು ಯೆಹೋವ ದೇವರ ಮುಂದೆ ಶಾಪಗ್ರಸ್ತರಾಗಿರಲಿ. ಏಕೆಂದರೆ, ‘ನೀನು ಹೋಗಿ? ಅನ್ಯದೇವರುಗಳನ್ನು ಸೇವಿಸು,’ ಎಂದು ಹೇಳಿ ಅವರು ಈ ಹೊತ್ತು ನನ್ನನ್ನು ಯೆಹೋವ ದೇವರ ಬಾಧ್ಯತೆಯಲ್ಲಿ ಇರದ ಹಾಗೆ ಓಡಿಸಿಬಿಟ್ಟರು.
ನಮಗೂ ನಿಮಗೂ ನಮ್ಮ ತರುವಾಯ ನಮ್ಮ ಸಂತತಿಯವರಿಗೂ ಮಧ್ಯದಲ್ಲಿ ಒಂದು ಸಾಕ್ಷಿ ಉಂಟಾಗಿರುವಂತೆಯೂ ನಾವು ಯೆಹೋವ ದೇವರ ಸನ್ನಿಧಿಯಲ್ಲಿ ದಹನಬಲಿ, ಸಮಾಧಾನದ ಬಲಿ ಮುಂತಾದವುಗಳನ್ನು ಅರ್ಪಿಸಿ ಆರಾಧಿಸುವುದಕ್ಕೆ ನಿಮಗೆ ಗುರುತಾಗಿರುವಂತೆಯೂ, ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ, ‘ಯೆಹೋವ ದೇವರಲ್ಲಿ ನಿಮಗೆ ಭಾಗವಿಲ್ಲ,’ ಎಂದು ಹೇಳದೆ ಇರುವಂತೆಯೂ ಸಾಕ್ಷಿಗಾಗಿ ಕಟ್ಟಿದ್ದೇವೆ ಅಷ್ಟೇ.