ಯೆಹೋಶುವ 22:16 - ಕನ್ನಡ ಸಮಕಾಲಿಕ ಅನುವಾದ16 “ಯೆಹೋವ ದೇವರ ಸರ್ವ ಸಮೂಹವು ಹೇಳುವುದೇನೆಂದರೆ: ‘ನೀವು ಈ ಹೊತ್ತು ಯೆಹೋವ ದೇವರ ಕಡೆಗೆ ತಿರುಗದೆ, ಅವರಿಗೆ ವಿರೋಧವಾಗಿ ತಿರುಗಿಬೀಳುವ ಹಾಗೆ ನಿಮಗೆ ಒಂದು ಬಲಿಪೀಠವನ್ನು ಕಟ್ಟಿಕೊಂಡು, ಇಸ್ರಾಯೇಲ್ ದೇವರಿಗೆ ಮಾಡಿದ ಈ ಅಪರಾಧವೇನು? ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 “ಯೆಹೋವನ ಸರ್ವ ಸಭೆಯ ಮಾತನ್ನು ಕೇಳಿರಿ; ನೀವು ಇಸ್ರಾಯೇಲಿನ ದೇವರಿಗೆ ವಿರುದ್ಧವಾಗಿ ಇಂಥ ದ್ರೋಹ ಮಾಡಿದ್ದೇಕೆ? ನಿಮಗೋಸ್ಕರ ಯಜ್ಞವೇದಿಯನ್ನು ಕಟ್ಟಿಕೊಂಡದ್ದರಿಂದ ನೀವು ಯೆಹೋವನಿಗೆ ದ್ರೋಹ ಮಾಡಿದಂತಾಯಿತು; ನೀವು ಈ ಹೊತ್ತು ಯೆಹೋವನಿಗೆ ವಿರೋಧವಾಗಿ ತಿರುಗಿ ಬಿದ್ದಂತಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 “ಸರ್ವೇಶ್ವರನ ಸರ್ವಸಭೆ ಹೇಳುವ ಮಾತಿದು: ನೀವು ಇಸ್ರಯೇಲ್ ದೇವರಿಗೆ ವಿರುದ್ಧ ಇಂಥ ದ್ರೋಹ ಮಾಡಿದ್ದೇಕೆ? ನೀವು ನಿಮಗಾಗಿಯೇ ಒಂದು ಬಲಿಪೀಠವನ್ನು ಕಟ್ಟಿಕೊಂಡಿದ್ದೀರಿ. ಇದರಿಂದ ನೀವು ಸರ್ವೇಶ್ವರನಿಗೆ ವಿಮುಖವಾದಂತಾಯಿತು; ನೀವು ಇಂದು ಸರ್ವೇಶ್ವರನಿಗೆ ವಿರುದ್ಧ ತಿರುಗಿಬಿದ್ದಂತಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಯೆಹೋವನ ಸರ್ವಸಭೆಯ ಮಾತನ್ನು ಕೇಳಿರಿ - ನೀವು ಇಸ್ರಾಯೇಲ್ ದೇವರಿಗೆ ವಿರುದ್ಧವಾಗಿ ಇಂಥ ದ್ರೋಹ ಮಾಡಿದ್ದೇಕೆ? ನಿಮಗೋಸ್ಕರ ವೇದಿಯನ್ನು ಕಟ್ಟಿಕೊಂಡದರಿಂದ ನೀವು ಯೆಹೋವನಿಗೆ ವಿಮುಖರಾದ ಹಾಗಾಯಿತಲ್ಲವೇ. ನೀವು ಈ ಹೊತ್ತು ಯೆಹೋವನಿಗೆ ವಿರುದ್ಧವಾಗಿ ತಿರುಗಿಬಿದ್ದಂತಾಯಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 “ಇಸ್ರೇಲರೆಲ್ಲರೂ ನಿಮ್ಮನ್ನು ಕೇಳುವುದೇನೆಂದರೆ, ‘ಇಸ್ರೇಲಿನ ದೇವರ ವಿರುದ್ಧವಾಗಿ ನೀವು ಹೀಗೆ ಮಾಡಿದ್ದೇಕೆ? ನೀವು ಯೆಹೋವನ ವಿರುದ್ಧವಾಗಿ ತಿರುಗಿದ್ದೇಕೆ? ನಿಮಗಾಗಿ ಯಜ್ಞವೇದಿಕೆಯನ್ನು ಕಟ್ಟಿಕೊಂಡದ್ದೇಕೆ? ಇದು ದೇವರ ಉಪದೇಶಗಳಿಗೆ ವಿರುದ್ಧವಾಗಿದೆ ಎಂಬುದನ್ನು ನೀವು ಬಲ್ಲಿರಿ. ಅಧ್ಯಾಯವನ್ನು ನೋಡಿ |