Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 21:3 - ಕನ್ನಡ ಸಮಕಾಲಿಕ ಅನುವಾದ

3 ಹಾಗೆಯೇ ಇಸ್ರಾಯೇಲರು ತಮ್ಮ ಬಾಧ್ಯತೆಯಲ್ಲಿ ಲೇವಿಯರಿಗೆ ಯೆಹೋವ ದೇವರ ಆಜ್ಞೆಯ ಪ್ರಕಾರ ಪಟ್ಟಣಗಳನ್ನೂ ಗೋಮಾಳಗಳನ್ನೂ ಕೊಟ್ಟರು. ಅವುಗಳ ವಿವರ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅವರು ಯೆಹೋವನ ಆಜ್ಞೆಯಂತೆ ತಮ್ಮ ಸ್ವತ್ತಿನಿಂದ ಕೆಳಗೆ ಬರೆದಷ್ಟು ಪಟ್ಟಣಗಳನ್ನೂ ಅವುಗಳಿಗೆ ಸೇರಿದ ಗೋಮಾಳಗಳನ್ನೂ ಅವರಿಗೆ ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಸರ್ವೇಶ್ವರನ ಆಜ್ಞೆಯಂತೆಯೇ ಅವರಿಗೆ ಸೊತ್ತಾಗಿ ಈ ಕೆಳಕಂಡ ನಗರಗಳನ್ನು ಅವುಗಳಿಗೆ ಸೇರಿದ ಗೋಮಾಳಗಳನ್ನೂ ಕೊಡಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅವರು ಯೆಹೋವನ ಆಜ್ಞೆಯಂತೆ ಅವರಿಗೆ ತಮ್ಮ ಸ್ವಾಸ್ತ್ಯದಿಂದ ಕೆಳಗೆ ಬರೆದಷ್ಟು ಪಟ್ಟಣಗಳನ್ನೂ ಅವುಗಳಿಗೆ ಸೇರಿದ ಗೋಮಾಳಗಳನ್ನೂ ಕೊಟ್ಟುಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಇಸ್ರೇಲರು ಯೆಹೋವನ ಈ ಆಜ್ಞೆಯನ್ನು ಪಾಲಿಸಿದರು. ಅವರು ಲೇವಿಯರಿಗೆ ಈ ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಅವುಗಳ ಸುತ್ತಮುತ್ತಲಿನ ಭೂಮಿಯನ್ನು ಕೊಟ್ಟರು:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 21:3
7 ತಿಳಿವುಗಳ ಹೋಲಿಕೆ  

ಅವರ ಕೋಪವು ಭಯಂಕರವಾಗಿಯೂ ಅವರ ರೌದ್ರವು ಕ್ರೂರವಾಗಿಯೂ ಇದ್ದು, ಅದಕ್ಕೆ ಶಾಪಗ್ರಸ್ತವಾಗಲಿ. ಯಾಕೋಬನ ಕುಟುಂಬದಲ್ಲಿ ಅವರನ್ನು ವಿಭಾಗಿಸಿ ಇಸ್ರಾಯೇಲಿನಲ್ಲಿ ಅವರನ್ನು ಚದರಿಸಿಬಿಡುವೆನು.


ಅವರು ಕಾನಾನ್ ದೇಶದ ಶೀಲೋವಿನಲ್ಲಿ ಅವರನ್ನು ಸಂಧಿಸಿ, “ನಾವು ವಾಸವಾಗಿರುವ ಪಟ್ಟಣಗಳನ್ನು ನಮ್ಮ ಪಶುಗಳಿಗೋಸ್ಕರ ಅವುಗಳ ಉಪನಗರಗಳೊಂದಿಗೆ ನಮಗೆ ಕೊಡಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ್ದಾರೆ,” ಎಂದರು.


ಕೊಹಾತ್ಯರ ಗೋತ್ರಗಳಿಗೆ ಚೀಟು ಬಂದಾಗ ಲೇವಿಯರಲ್ಲಿ ಯಾಜಕನಾದ ಆರೋನನ ಮಕ್ಕಳಿಗೆ ಯೆಹೂದದ ಗೋತ್ರದಲ್ಲಿಯೂ, ಸಿಮೆಯೋನನ ಗೋತ್ರದಲ್ಲಿಯೂ, ಬೆನ್ಯಾಮೀನನ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ಚೀಟಿಯಿಂದ ದೊರಕಿದವು.


ನೀವು ಲೇವಿಯರಿಗೆ ಕೊಡಬೇಕಾದ ಸಮಸ್ತ ಪಟ್ಟಣಗಳು, ಅವುಗಳ ಉಪನಗರಗಳ ಸಂಗಡ ನಲವತ್ತೆಂಟು ಪಟ್ಟಣಗಳಾಗಿರಬೇಕು.


ಇಸ್ರಾಯೇಲರ ನಡುವೆ ಲೇವಿಯರಿಗೆ ಒಟ್ಟು ನಾಲ್ವತ್ತೆಂಟು ಪಟ್ಟಣಗಳು ಅವುಗಳ ಗೋಮಾಳ ಸಹಿತವಾಗಿ ದೊರಕಿದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು