ಯೆಹೋಶುವ 21:27 - ಕನ್ನಡ ಸಮಕಾಲಿಕ ಅನುವಾದ27 ಲೇವಿ ಗೋತ್ರದ ಗೇರ್ಷೋನ್ಯರಿಗೆ ಮನಸ್ಸೆಯ ಅರ್ಧಗೋತ್ರದಲ್ಲಿ ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಬಾಷಾನಿನಲ್ಲಿರುವ ಗೋಲಾನನ್ನೂ ಬೆಯೆಷ್ಟೆರಾವನ್ನೂ ಹೀಗೆ ಎರಡು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಗೆರ್ಷೋನ್ಯರ ಕುಟುಂಬಗಳಿಗೆ ಅರ್ಧ ಮನಸ್ಸೆಯವರ ಸ್ವತ್ತಿನಿಂದ ದೊರಕಿದ ಪಟ್ಟಣಗಳು ಇವು: ಕೊಲೆ ಮಾಡಿದವನಿಗೆ ಆಶ್ರಯ ನಗರವಾದ ಬಾಷಾನಿನ ಗೋಲಾನ್, ಬೆಯೆಷ್ಟೆರಾ ಎಂಬ ಗೋಮಾಳ ಸಹಿತವಾದ ಎರಡು ಪಟ್ಟಣಗಳು; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ಗೇರ್ಷೋನ್ಯರ ಕುಟುಂಬ಼ಗಳಿಗೆ ಅರ್ಧ ಮನಸ್ಸೆಯವರ ಸೊತ್ತಿನಿಂದ ದೊರಕಿದವುಗಳು ಇವು: ಕೊಲೆ ಮಾಡಿದವನಿಗೆ ಆಶ್ರಯನಗರವಾದ ಬಾಷಾನಿನ ಗೋಲಾನ್, ಬೆಯೆಷ್ಟೆರಾ ಎಂಬ ಗೋಮಾಳ ಸಹಿತವಾದ ಎರಡು ನಗರಗಳು; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ಗೇರ್ಷೋನ್ಯರ ಕುಟುಂಬಗಳಿಗೆ ಅರ್ಧಮನಸ್ಸೆಯವರ ಸ್ವಾಸ್ತ್ಯದಿಂದ ಕೊಲೆಮಾಡಿದವನ ಆಶ್ರಯನಗರವಾದ ಬಾಷಾನಿನ ಗೋಲಾನ್, ಬೆಯೆಷ್ಟೆರಾ ಎಂಬ ಗೋಮಾಳ ಸಹಿತವಾದ ಎರಡು ಪಟ್ಟಣಗಳೂ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ಲೇವಿಯ ಸಂತತಿಯವರಾದ ಗೇರ್ಷೋನ್ಯರಿಗೆ ಈ ಊರುಗಳನ್ನು ಕೊಡಲಾಯಿತು: ಮನಸ್ಸೆಕುಲದ ಅರ್ಧಜನರು ಅವರಿಗೆ ಬಾಷಾನಿನಲ್ಲಿದ್ದ ಆಶ್ರಯನಗರವಾದ ಗೋಲಾನ್ ನಗರವನ್ನು ಕೊಟ್ಟರು. ಮನಸ್ಸೆಯವರು ಬೆಯೆಷ್ಟೆರಾವನ್ನು ಸಹ ಅವರಿಗೆ ಕೊಟ್ಟರು. ಒಟ್ಟಿನಲ್ಲಿ ಈ ಮನಸ್ಸೆಕುಲದ ಅರ್ಧಜನರು ಎರಡು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. ಅಧ್ಯಾಯವನ್ನು ನೋಡಿ |