Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 20:6 - ಕನ್ನಡ ಸಮಕಾಲಿಕ ಅನುವಾದ

6 ಇದಲ್ಲದೆ ಅವನು ನ್ಯಾಯ ವಿಚಾರಣೆಗೋಸ್ಕರ ಸಭೆಯ ಮುಂದೆ ಬಂದು ನಿಲ್ಲುವವರೆಗೂ ಆ ದಿವಸಗಳಲ್ಲಿ ಇರುವ ಮಹಾಯಾಜಕನು ಮರಣ ಹೊಂದುವವರೆಗೂ ಆ ಪಟ್ಟಣದಲ್ಲೇ ವಾಸವಾಗಿರಬೇಕು. ತರುವಾಯ ಕೊಂದವನು ತಾನು ಬಿಟ್ಟು ಓಡಿ ಹೋದ ತನ್ನ ಪಟ್ಟಣಕ್ಕೂ, ತನ್ನ ಮನೆಗೂ ತಿರುಗಿಬರಬಹುದು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಒಂದು ಸಭೆಯನ್ನು ಸೇರಿಸಿ ಅಂಥವನನ್ನು ವಿಚಾರಿಸಬೇಕು; ಮತ್ತು ಅವನು ಆಗಿನ ಮಹಾಯಾಜಕನ ಜೀವಮಾನವೆಲ್ಲಾ ಅದೇ ಪಟ್ಟಣದಲ್ಲಿ ಇರಬೇಕು. ಆ ನಂತರ ತಾನು ಬಿಟ್ಟು ಬಂದ ಪಟ್ಟಣದಲ್ಲಿರುವ ಮನೆಗೆ ಹಿಂತಿರುಗಿ ಹೋಗಬಹುದು’ ಎಂದು ಹೇಳು” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಅಂಥವನನ್ನು ಒಂದು ಸಭೆಸೇರಿಸಿ ವಿಚಾರಿಸಬೇಕು. ಅವನು ಆಗಿನ ಪ್ರಧಾನ ಯಾಜಕನ ಜೀವಮಾನವೆಲ್ಲಾ ಅದೇ ನಗರದಲ್ಲಿರಬೇಕು. ಆಮೇಲೆ ತಾನು ಬಿಟ್ಟುಬಂದ ಊರಿಗೆ, ಮನೆಗೆ ಹಿಂದಿರುಗಬಹುದು’ ಎಂದು ತಿಳಿಸು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಒಂದು ಸಭೆಯನ್ನು ಸೇರಿಸಿ ಅಂಥವನನ್ನು ವಿಚಾರಿಸಬೇಕು; ಮತ್ತು ಅವನು ಆಗಿನ ಮಹಾಯಾಜಕನ ಜೀವಮಾನವೆಲ್ಲಾ ಅದೇ ಪಟ್ಟಣದಲ್ಲಿರಬೇಕು. ಆಮೇಲೆ ತಾನು ಬಿಟ್ಟುಬಂದ ಪಟ್ಟಣದಲ್ಲಿರುವ ಮನೆಗೆ ಹಿಂದಿರುಗಿ ಹೋಗಬಹುದು ಎಂದು ಹೇಳು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆ ನಗರದ ನ್ಯಾಯಾಸ್ಥಾನದಲ್ಲಿ ನ್ಯಾಯನಿರ್ಣಯವಾಗುವವರೆಗೂ ಮತ್ತು ಮಹಾಯಾಜಕನು ಜೀವದಿಂದ ಇರುವವರೆಗೂ ಅವನು ಅಲ್ಲಿಯೇ ಇರಬೇಕು. ತರುವಾಯ ಅವನು ತಾನು ಬಿಟ್ಟುಬಂದ ಊರಿನ ತನ್ನ ಮನೆಗೆ ಹೋಗಬಹುದು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 20:6
3 ತಿಳಿವುಗಳ ಹೋಲಿಕೆ  

ಕೊಂದವನು ಸಭೆಯ ಮುಂದೆ ನ್ಯಾಯತೀರ್ಪಿಗೆ ನಿಲ್ಲುವವರೆಗೂ ಸೇಡು ತೀರಿಸುವವನ ದೆಸೆಯಿಂದ ಸಾಯದಂತೆ ಅವು ನಿಮಗೆ ಆಶ್ರಯದ ಪಟ್ಟಣಗಳಾಗಿರಬೇಕು.


ಹಾಗಿದ್ದರೆ, ಕ್ರಿಸ್ತ ಯೇಸುವು ಲೋಕದ ಅಸ್ತಿವಾರದಿಂದ ಅನೇಕ ಸಾರಿ ಬಾಧೆಪಡಬೇಕಾಗಿತ್ತು. ಆದರೆ ಈಗ ಅವರು ಒಂದೇ ಸಾರಿ ಲೋಕಾಂತ್ಯದಲ್ಲಿ ಪಾಪ ನಿವಾರಣೆ ಮಾಡುವುದಕ್ಕೆ ತಮ್ಮನ್ನು ತಾವೇ ಯಜ್ಞ ಮಾಡಿಕೊಳ್ಳುವವರಾಗಿ ಪ್ರತ್ಯಕ್ಷರಾದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು