Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 19:51 - ಕನ್ನಡ ಸಮಕಾಲಿಕ ಅನುವಾದ

51 ಯಾಜಕನಾದ ಎಲಿಯಾಜರನೂ ನೂನನ ಮಗ ಯೆಹೋಶುವನೂ ಇಸ್ರಾಯೇಲರ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ದೇವದರ್ಶನ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಸಮ್ಮುಖದಲ್ಲಿ ಚೀಟುಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಹಂಚಿಕೊಳ್ಳುವ ಕೆಲಸವನ್ನು ಪೂರೈಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

51 ಯಾಜಕನಾದ ಎಲಿಯಾಜರನೂ, ನೂನನ ಮಗ ಯೆಹೋಶುವನೂ, ಇಸ್ರಾಯೇಲ್ಯರ ಕುಲಮುಖ್ಯಸ್ಥರೂ ಸೇರಿ ಇಸ್ರಾಯೇಲ್ಯರಿಗೆ ಶೀಲೋವಿನಲ್ಲಿದ್ದ ದೇವದರ್ಶನ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲೇ ಚೀಟು ಹಾಕಿ ಹಂಚಿಕೊಟ್ಟ ಪ್ರಾಂತ್ಯಗಳು ಇವೇ. ಹೀಗೆ ದೇಶ ವಿಭಜನೆಯ ಕಾರ್ಯವು ಪೂರ್ಣಗೊಂಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

51 ಹೀಗೆ ಯಾಜಕ ಎಲ್ಲಾಜಾರನು, ನೂನನ ಮಗ ಯೆಹೋಶುವ ಮತ್ತು ಇಸ್ರಯೇಲ್ ಕುಲ ಮುಖ್ಯಸ್ಥರೂ ಶೀಲೋವಿನಲ್ಲಿದ್ದ ದೇವದರ್ಶನದ ಗುಡಾರದ ದ್ವಾರದಲ್ಲಿ ಸರ್ವೇಶ್ವರನ ಸನ್ನಿಧಿಯಲ್ಲೇ ಚೀಟುಹಾಕಿ ಪ್ರಾಂತ್ಯಗಳನ್ನು ಹಂಚಿಕೊಟ್ಟರು; ನಾಡಿನ ವಿಭಜನಾಕಾರ್ಯ ಮುಗಿಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

51 ಮಹಾಯಾಜಕ ಎಲ್ಲಾಜಾರನೂ ನೂನನ ಮಗ ಯೆಹೋಶುವನೂ ಇಸ್ರಾಯೇಲ್ ಕುಲಪ್ರಧಾನರೂ ಶೀಲೋವಿನಲ್ಲಿದ್ದ ದೇವದರ್ಶನದ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲೇ ಚೀಟುಹಾಕಿ ಹಂಚಿಕೊಟ್ಟ ಪ್ರಾಂತಗಳು ಇವೇ. ಹೀಗೆ ದೇಶ ವಿಭಾಗಕಾರ್ಯವು ಪೂರೈಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

51 ಯಾಜಕನಾದ ಎಲ್ಲಾಜಾರನೂ ನೂನನ ಮಗನಾದ ಯೆಹೋಶುವನೂ ಇಸ್ರೇಲಿನ ಕುಲಪ್ರಧಾನರೂ ಶೀಲೋವಿನಲ್ಲಿ ಸೇರಿಬಂದು ದೇವದರ್ಶನಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲೇ ಚೀಟುಹಾಕಿ ಹಂಚಿಕೊಟ್ಟ ಪ್ರಾಂತ್ಯಗಳೇ ಇವು. ಹೀಗೆ ದೇಶ ವಿಭಾಗ ಕಾರ್ಯವು ಪೂರ್ಣಗೊಂಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 19:51
18 ತಿಳಿವುಗಳ ಹೋಲಿಕೆ  

ಆಗ ಯೆಹೋಶುವನು ಅವರಿಗೆ ಶೀಲೋವಿನಲ್ಲಿ ಯೆಹೋವ ದೇವರ ಮುಂದೆ ಚೀಟುಗಳನ್ನು ಹಾಕಿದನು. ಅಲ್ಲಿ ಯೆಹೋಶುವನು ಇಸ್ರಾಯೇಲರಿಗೆ ನಾಡನ್ನು ಅವರ ಗೋತ್ರಗಳ ಪ್ರಕಾರ ಪಾಲುಗಳನ್ನು ಹಂಚಿಕೊಟ್ಟನು.


ಯಾಜಕನಾದ ಎಲಿಯಾಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲರ ಗೋತ್ರಗಳ ಮುಖ್ಯಸ್ಥರೂ ಜನರಿಗೆ ಸೊತ್ತಾಗಿ ಕೊಡಲು ಕಾನಾನ್ ದೇಶದಲ್ಲಿ ಇಸ್ರಾಯೇಲರು ಬಾಧ್ಯವಾಗಿ ಪ್ರದೇಶಗಳನ್ನು ಹೊಂದಿದರು.


ಇಸ್ರಾಯೇಲರ ಸಮೂಹವೆಲ್ಲಾ ಶೀಲೋವಿನಲ್ಲಿ ಒಟ್ಟು ಕೂಡಿ ಅಲ್ಲಿ ದೇವದರ್ಶನ ಗುಡಾರವನ್ನು ನಿಲ್ಲಿಸಿದರು. ದೇಶವು ಅವರ ವಶವಾಯಿತು.


ನೀವು ಎಲ್ಲರಿಗೂ ನಿತ್ಯಜೀವವನ್ನು ಕೊಡಬೇಕೆಂದು ಆತನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿರುವಿರಿ.


“ಆಗ ನಾನು ನನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ಬನ್ನಿರಿ, ಭೂಲೋಕಕ್ಕೆ ಅಸ್ತಿವಾರ ಹಾಕಿದ ದಿನದಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಆಸ್ತಿಯನ್ನಾಗಿ ಹೊಂದಿರಿ.


ಅದಕ್ಕೆ ಯೇಸು, “ನನ್ನ ಪಾತ್ರೆಯಿಂದ ನೀವು ಕುಡಿಯುವಿರಿ, ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವಂತೆ ಅನುಗ್ರಹಿಸುವುದು ನನ್ನದಲ್ಲ, ನನ್ನ ತಂದೆಯಿಂದ ಅದು ಯಾರಿಗೋಸ್ಕರ ಸಿದ್ಧವಾಗಿದೆಯೋ ಅವರಿಗೇ ಕೊಡಲಾಗುವುದು,” ಎಂದು ಹೇಳಿದರು.


ದೇವರು ಸಿಲೋವಿನ ಗುಡಾರನ್ನೂ ಜನರೊಳಗೆ ಹಾಕಿದ ಗುಡಾರವನ್ನೂ ತಳ್ಳಿಬಿಟ್ಟರು.


ಅವನು ಶೀಲೋವಿನಲ್ಲಿ ಸೇನಾಧೀಶ್ವರ ಯೆಹೋವ ದೇವರನ್ನು ಆರಾಧಿಸಲೂ, ಅವರಿಗೆ ಬಲಿಯನ್ನು ಅರ್ಪಿಸಲೂ ಪ್ರತಿವರ್ಷ ಪಟ್ಟಣದಿಂದ ಹೋಗುತ್ತಿದ್ದನು. ಯೆಹೋವ ದೇವರ ಯಾಜಕ ಏಲಿಯ ಮಕ್ಕಳಿಬ್ಬರಾದ ಹೊಫ್ನಿಯೂ, ಫೀನೆಹಾಸನೂ ಅಲ್ಲಿ ಇದ್ದರು.


ಶೀಲೋವಿನ ಪುತ್ರಿಯರು ನಾಟ್ಯವಾಡುತ್ತಾ ಹೊರಟು ಬರುವರು. ನೀವು ಅವರನ್ನು ಕಂಡಾಗ, ದ್ರಾಕ್ಷಿ ತೋಟಗಳಿಂದ ಹೊರಟು, ಶೀಲೋವಿನ ಪುತ್ರಿಯರಲ್ಲಿ ನಿಮ್ಮಲ್ಲಿ ಅವನವನು ತನಗೆ ಹೆಂಡತಿಯಾಗಿ ಒಬ್ಬೊಬ್ಬಳನ್ನು ಹಿಡಿದುಕೊಂಡು, ಬೆನ್ಯಾಮೀನನ ದೇಶಕ್ಕೆ ಹೋಗಿರಿ,” ಎಂದು ಆಜ್ಞಾಪಿಸಿದರು.


ಅವರು ಬೇತೇಲಿಗೆ ಉತ್ತರದಲ್ಲಿಯೂ, ಬೇತೇಲಿನಿಂದ ಶೆಕೆಮಿಗೆ ಹೋಗುವ ಹೆದ್ದಾರಿಯ ಮೂಡಲಲ್ಲಿಯೂ ಲೆಬೋನಕ್ಕೆ ದಕ್ಷಿಣದಲ್ಲಿರುವ ಶೀಲೋವಿನಲ್ಲಿ ಪ್ರತಿವರ್ಷ ಯೆಹೋವ ದೇವರ ಹಬ್ಬವುಂಟೆಂದು ಹೇಳಿದರು.


ರಾಜದಂಡವನ್ನು ಹಿಡಿಯತಕ್ಕವನು ಶೀಲೋವಿನಿಂದ ಬರುವ ತನಕ, ಯೆಹೂದನ ಕೈಯಿಂದ ರಾಜದಂಡವಾಗಲೀ, ಆಡಳಿತಗಾರನ ಅಧಿಕಾರವಾಗಲೀ ಬಿಟ್ಟು ಹೋಗುವುದಿಲ್ಲ. ಎಲ್ಲಾ ಜನಾಂಗಗಳು ಅವನಿಗೆ ವಿಧೇಯವಾಗುವುವು.


ಕಾನಾನ್ ದೇಶದಲ್ಲಿದ್ದ ಏಳು ರಾಜ್ಯಗಳನ್ನು ಜಯಿಸಿ, ಅವರ ದೇಶವನ್ನು ತಮ್ಮ ಜನರಿಗೆ ಬಾಧ್ಯವಾಗಿ ದಯಪಾಲಿಸಿದರು.


ಯೆಹೋವ ದೇವರು ಯೆಹೋಶುವನಿಗೆ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು