Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 18:25 - ಕನ್ನಡ ಸಮಕಾಲಿಕ ಅನುವಾದ

25 ಇದಲ್ಲದೆ ಗಿಬ್ಯೋನ್, ರಾಮಾ, ಬೇರೋತ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಗಿಬ್ಯೋನ್, ರಾಮಾ, ಬೇರೋತ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಗಿಬ್ಯೋನ್, ರಾಮಾ, ಬೇರೋತ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಮತ್ತು ಗಿಬ್ಯೋನ್, ರಾಮಾ, ಬೇರೋತ್, ವಿುಚ್ಪೆ, ಕೆಫೀರಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಬೆನ್ಯಾಮೀನ್ ಗೋತ್ರದವರು ಹದಿನಾಲ್ಕು ಊರುಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲಾ ಹೊಲಗದ್ದೆಗಳನ್ನು ಪಡೆದುಕೊಂಡರು. ಆ ಊರುಗಳು ಇಂತಿವೆ: ಗಿಬ್ಯೋನ್, ರಾಮಾ, ಬೇರೋತ್,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 18:25
25 ತಿಳಿವುಗಳ ಹೋಲಿಕೆ  

ಆಗ ಇಸ್ರಾಯೇಲರು ಪ್ರಯಾಣ ಮಾಡುವಾಗ ಮೂರನೆಯ ದಿವಸದಲ್ಲಿ ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ ಯಾರೀಮ್ ಎಂಬ ಅವರ ಪಟ್ಟಣಗಳಿಗೆ ಬಂದರು.


ಸಂಜೆಯಾದಾಗ, ಅರಿಮಥಾಯ ಊರಿನ ಯೋಸೇಫನೆಂಬ ಹೆಸರುಳ್ಳ ಧನವಂತನಾದ ಒಬ್ಬ ಮನುಷ್ಯನು ಅಲ್ಲಿಗೆ ಬಂದನು. ಅವನು ಸಹ ಯೇಸುವಿನ ಶಿಷ್ಯನಾಗಿದ್ದನು.


ಯೆಹೋವ ದೇವರು ಮತ್ತೆ ಹೀಗೆ ಹೇಳುತ್ತಾರೆ: “ರಾಮದಲ್ಲಿ ರೋದನೆಯೂ, ಗೋಳಾಟವೂ ಅಘೋರವಾದ ಅಳುವಿಕೆಯೂ ಕೇಳಿಸುತ್ತಿದೆ. ರಾಹೇಲಳು ತನ್ನ ಮಕ್ಕಳಿಗಾಗಿ ಗೋಳಾಡುತ್ತಾ, ಆದರಣೆ ಹೊಂದದೆ ಹೋಗಿದ್ದಾಳೆ. ಏಕೆಂದರೆ ಅವಳ ಮಕ್ಕಳು ಇನ್ನಿಲ್ಲ.”


ಯೆಹೋವ ದೇವರು ಪೆರಾಚೀಮ್ ಪರ್ವತದಲ್ಲಿ ಎದ್ದಂತೆ ಏಳುವರು. ಹಾಗೆ ಎದ್ದು ಗಿಬ್ಯೋನ್ ತಗ್ಗಿನಲ್ಲಿ ಆದ ಹಾಗೆ ಕೋಪಿಸಿ, ಅಪರೂಪವಾದ ತಮ್ಮ ಕೆಲಸವನ್ನು ನಡಿಸಿ, ಅಪೂರ್ವವಾದ ತಮ್ಮ ಕಾರ್ಯವನ್ನು ನೆರವೇರಿಸುವನು.


ಅನಂತರ ಯೆಹೋವ ದೇವರು ಸೊಲೊಮೋನನಿಗೆ ಗಿಬ್ಯೋನಿನಲ್ಲಿ ಪ್ರತ್ಯಕ್ಷರಾದಂತೆ, ಅವನಿಗೆ ಎರಡನೆಯ ಸಾರಿ ಪ್ರತ್ಯಕ್ಷರಾದರು.


ಎಫ್ರಾಯೀಮ್ ಬೆಟ್ಟದ ಪ್ರದೇಶ ರಾಮತಾಯೀಮ್ ಚೋಫಿಮಿನಲ್ಲಿ ಎಲ್ಕಾನ ಎಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. ಅವನು ಎಫ್ರಾಯೀಮ್ಯನಾದ ಚೂಫನ ಮೊಮ್ಮಗನೂ ತೋಹುವಿನ ಮಗನೂ ಆದ ಎಲೀಹುವಿನ ಮಗನಾದ ಯೆರೋಹಾಮನ ಮಗನಾಗಿದ್ದನು.


ಜಾನೋಹ, ಏಂಗನ್ನೀಮ್, ತಪ್ಪೂಹ, ಏನಾಮ್,


ಅದೋನೀಚೆದೆಕನು ಅವನ ಜನರೂ ಬಹು ಭಯಪಟ್ಟರು. ಏಕೆಂದರೆ ಗಿಬ್ಯೋನ್ ಒಂದು ರಾಜಧಾನಿಯಷ್ಟು ಶ್ರೇಷ್ಠ ಪಟ್ಟಣವೂ ಅದು ಆಯಿ ಪಟ್ಟಣಕ್ಕಿಂತಲೂ ದೊಡ್ಡದಾಗಿತ್ತು. ಇದಲ್ಲದೆ ಅದರಲ್ಲಿರುವ ಜನರು ಪರಾಕ್ರಮಶಾಲಿಗಳಾಗಿದ್ದರು.


ಅವನು ಯೆಹೂದ ಕುಟುಂಬವನ್ನು ಕರೆದಾಗ, ಜೆರಹನ ಗೋತ್ರ ಸಿಕ್ಕಿಕೊಂಡಿತು. ಜೆರಹನ ಗೋತ್ರವನ್ನು ಕರೆದಾಗ ಜಿಮ್ರಿಯು ಸಿಕ್ಕಿಕೊಂಡಿತು.


ಕೆಫೆರ್ ಅಮ್ಮೋನಿ, ಒಫ್ನೀ, ಗೆಬಾ ಎಂಬ ಹನ್ನೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ ಆಗಿರುತ್ತವೆ.


ಮಿಚ್ಪೆ, ಕೆಫೀರಾ, ಮೋಚಾ,


ಇದಲ್ಲದೆ ಬೆನ್ಯಾಮೀನನ ಗೋತ್ರದಲ್ಲಿ ಗಿಬ್ಯೋನನ್ನೂ ಗೆಬಾನನ್ನೂ


ನೇರನ ಮಗನಾಗಿರುವ ಅಬ್ನೇರನೂ, ಸೌಲನ ಮಗ ಈಷ್ಬೋಶೆತನ ಸೇವಕರೂ ಮಹನಯಿಮಿನಿಂದ ಹೊರಟು ಗಿಬ್ಯೋನಿಗೆ ಬಂದನು.


ಆದರೆ ಸೌಲನ ಮಗನಿಗೆ ಸೇನಾಪತಿಗಳು ಇಬ್ಬರಿದ್ದರು. ಒಬ್ಬನ ಹೆಸರು ಬಾಣನು. ಮತ್ತೊಬ್ಬನ ಹೆಸರು ರೇಕಾಬನು. ಇವರು ಬೆನ್ಯಾಮೀನ್ ಗೋತ್ರದಲ್ಲಿ ಬೇರೋತ್ ಗ್ರಾಮದವನಾದ ರಿಮ್ಮೋನನ ಮಕ್ಕಳು. ಏಕೆಂದರೆ ಬೇರೋತ್ ಬೆನ್ಯಾಮೀನ್ಯರಿಗೆ ಸೇರಿದ ಗ್ರಾಮ.


ಆಗ ಇಸ್ರಾಯೇಲಿನ ಅರಸನಾದ ಬಾಷನು ಯೆಹೂದಕ್ಕೆ ವಿರೋಧವಾಗಿ ಬಂದು ಯೆಹೂದದ ಅರಸನಾದ ಆಸನ ಬಳಿಗೆ ಒಳಗಾಗಲೀ, ಹೊರಗಾಗಲೀ ಯಾರೂ ಹೋಗದ ಹಾಗೆ ಸುತ್ತಲೂ ರಾಮ ಎಂಬ ಕೋಟೆಯನ್ನು ಕಟ್ಟಿಸಿದನು.


ರಾಮಾ ಗೆಬ ಎಂಬ ಪಟ್ಟಣದವರು 621


ಅವರು ಕಣಿವೆಯನ್ನು ದಾಟಿದ್ದಾರೆ; ಗಿಬೆಯದಲ್ಲಿ ಇಳುಕೊಂಡಿದ್ದಾರೆ. ರಾಮಾ ಜನತೆ ಹೆದರುತ್ತಿದೆ; ಸೌಲನ ಗಿಬೆಯದ ಜನತೆ ಓಡಿಹೋಗಿದೆ.


ಆದರೆ ಗಿಬ್ಯೋನಿನ ನಿವಾಸಿಗಳು ಯೆಹೋಶುವನು ಯೆರಿಕೋವಿಗೂ ಆಯಿಗೂ ಮಾಡಿದ್ದನ್ನು ಕೇಳಿದಾಗ,


ಅಲ್ಲಿಂದ ರಾಮಾ, ಟೈರ್ ಎಂಬ ಕೋಟೆಪಟ್ಟಣದವರೆಗೂ ಹೋಗುತ್ತದೆ. ಅಲ್ಲಿಂದ ಹೋಸಾ ಕಡೆ ಹೊರಟು ಮೆಡಿಟೆರಿಯನ್ ಸಮುದ್ರದ ಬಳಿ ಅಕ್ಜೀಬ್ ಮೇರೆಯ ಅಂಚಿಗೆ ಮುಗಿಯುತ್ತದೆ.


ಆದರೆ ಅವನ ಯಜಮಾನನು ಅವನಿಗೆ, “ನಾವು ಇಲ್ಲಿ ಇಸ್ರಾಯೇಲರಲ್ಲದವರ ಪಟ್ಟಣದಲ್ಲಿ ತಂಗಬಾರದು; ಗಿಬೆಯ ಪಟ್ಟಣಕ್ಕೆ ಹೋಗೋಣ,” ಎಂದನು.


ಅವನು ಸೇವಕನಿಗೆ, “ಗಿಬೆಯದಲ್ಲಾದರೂ, ರಾಮಾದಲ್ಲಾದರೂ ಇಳಿದುಕೊಳ್ಳುವುದಕ್ಕೆ ಆ ಸ್ಥಳಗಳಲ್ಲಿ ಒಂದಕ್ಕೆ ಸೇರೋಣ ಬಾ,” ಎಂದನು.


ಅವರು ಉದಯದಲ್ಲಿ ಎದ್ದು, ಯೆಹೋವ ದೇವರನ್ನು ಆರಾಧಿಸಿ, ಹಿಂದಿರುಗಿಕೊಂಡು ರಾಮದಲ್ಲಿರುವ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಳನ್ನು ಸಂಗಮಿಸಲು, ಆಗ ಯೆಹೋವ ದೇವರು ಅವಳನ್ನು ಜ್ಞಾಪಕಮಾಡಿಕೊಂಡರು.


ಗಿಬ್ಯೋನನ ಮೂಲಪುರುಷನಾದ ಯೆಹಿಯೇಲನು ಗಿಬ್ಯೋನಿನಲ್ಲಿ ವಾಸವಾಗಿದ್ದನು. ಅವನ ಹೆಂಡತಿಯ ಹೆಸರು ಮಾಕಳು.


ಹಾಚೋರ್, ರಾಮಾ, ಗಿತ್ತಯಿಮ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು