Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 18:13 - ಕನ್ನಡ ಸಮಕಾಲಿಕ ಅನುವಾದ

13 ಆ ಮೇರೆಯು ಅಲ್ಲಿಂದ ಬೇತೇಲೆಂಬ ಲೂಜಿಗೆ ಹಾದು, ಲೂಜಿನ ದಕ್ಷಿಣದ ಕಡೆಗೆ ಹೋಗಿ, ಅಟಾರೋತ್ ಅದ್ದಾರಿನ ಕೆಳಗಿನ ಬೇತ್ ಹೋರೋನಿಗೆ ದಕ್ಷಿಣದಲ್ಲಿರುವ ಬೆಟ್ಟಕ್ಕೆ ಹೋಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅಲ್ಲಿಂದ ದಕ್ಷಿಣಕ್ಕೆ ತಿರುಗಿಕೊಂಡು ಈಗ ಬೇತೇಲ್ ಎನ್ನಿಸಿಕೊಳ್ಳುವ ಲೂಜ್ ಊರಿರುವ ಬೆಟ್ಟಕ್ಕೆ ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅಲ್ಲಿಂದ ದಕ್ಷಿಣಕ್ಕೆ ತಿರುಗಿಕೊಂಡು ಈಗ ಬೇತೇಲ್ ಎನಿಸಿಕೊಳ್ಳುವ ಲೂಜ್ ಊರಿರುವ ಬೆಟ್ಟಕ್ಕೆ ಹೋಗಿ ಅಲ್ಲಿಂದ ಇಳಿದು ಅಟಾರೋತದ್ದಾರಿನ ಮೇಲೆ ಕೆಳಗಿನ ಬೇತ್ ಹೋರೋನಿನ ಬಳಿಯಲ್ಲಿರುವ ಬೆಟ್ಟಕ್ಕೆ ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಅಲ್ಲಿಂದ ದಕ್ಷಿಣಕ್ಕೆ ತಿರುಗಿಕೊಂಡು ಈಗ ಬೇತೇಲ್ ಅನ್ನಿಸಿಕೊಳ್ಳುವ ಲೂಜ್ ಊರಿರುವ ಬೆಟ್ಟಕ್ಕೆ ಹೋಗಿ ಅಲ್ಲಿಂದ ಇಳಿದು ಅಟಾರೋತದ್ದಾರಿನ ಮೇಲೆ ಕೆಳಗಿನ ಬೇತ್‍ಹೋರೋನಿನ ಬಳಿಯಲ್ಲಿರುವ ಬೆಟ್ಟಕ್ಕೆ ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ದಕ್ಷಿಣದಲ್ಲಿರುವ ಬೇತೇಲ್ ಎಂಬ ಲೂಜಿಗೆ ಹೋಗುತ್ತದೆ. ಅಲ್ಲಿಂದ ಇಳಿದು ಅಟಾರೋತದ್ದಾರ್‌ಗೆ ಹೋಗುತ್ತದೆ. ಅಟಾರೋತದ್ದಾರ್ ಕೆಳಗಿನ ಬೇತ್‌ಹೋರೋನಿನ ದಕ್ಷಿಣದಲ್ಲಿರುವ ಬೆಟ್ಟದ ಮೇಲೆ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 18:13
10 ತಿಳಿವುಗಳ ಹೋಲಿಕೆ  

ಇದಲ್ಲದೆ ಅವನು ಆ ಸ್ಥಳಕ್ಕೆ, ಬೇತೇಲ್, ಎಂದು ಹೆಸರಿಟ್ಟನು. ಅದಕ್ಕಿಂತ ಮೊದಲು ಆ ಸ್ಥಳಕ್ಕೆ, ಲೂಜ್ ಎಂದು ಹೆಸರಿತ್ತು.


ಕಿಬ್‌ಚೈಮ್ ಮತ್ತು ಬೇತ್ ಹೋರೋನ್ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.


ಅವರ ಕುಟುಂಬಗಳ ಪ್ರಕಾರ ಎಫ್ರಾಯೀಮ್ ಗೋತ್ರದ ಪ್ರದೇಶ ಹೀಗಿತ್ತು: ಪೂರ್ವದಿಕ್ಕಿನ ಅಟಾರೋತ್ ಅದ್ದಾರಿನಿಂದ ಪ್ರಾರಂಭಿಸಿ, ಮೇಲಿನ ಬೇತ್ ಹೋರೋನಿನವರೆಗೂ ಇತ್ತು.


ಅವರು ಬೇತ್ ಹೋರೋನಿನಿಂದ ಇಳಿದು ಅಜೇಕದವರೆಗೆ ಇಸ್ರಾಯೇಲಿನ ಮುಂದೆ ಓಡಿ ಹೋಗುವಾಗ, ಅವರ ಮೇಲೆ ಯೆಹೋವ ದೇವರು ಆಕಾಶದಿಂದ ದೊಡ್ಡ ಕಲ್ಮಳೆಯನ್ನು ಸುರಿಸಿದರು. ಇಸ್ರಾಯೇಲರ ಖಡ್ಗದ ದಾಳಿಗಿಂತ ಕಲ್ಮಳೆಯಿಂದ ನಾಶವಾದವರೇ ಹೆಚ್ಚು ಮಂದಿಯಾಗಿದ್ದರು.


ಇದಲ್ಲದೆ ಆ ಮೇರೆಯು ದಕ್ಷಿಣ ಎಲ್ಲೆಗೆ ಎದುರಾಗಿರುವ ಬೇತ್ ಹೋರೋನಿಗೆ ಎದುರಾಗಿ ಬೆಟ್ಟವನ್ನು ಹಿಡಿದು, ದಕ್ಷಿಣವಾಗಿ ಸುತ್ತಿಕೊಂಡು ಕಿರ್ಯತ್ ಯಾರೀಮ್ ಎಂಬ ಯೆಹೂದ ಗೋತ್ರದ ಪಟ್ಟಣವಾದ ಕಿರ್ಯತ್ ಬಾಳದ ಬಳಿಗೆ ಹೋಗಿ ಮುಗಿಯುವುದು. ಇದು ಪಶ್ಚಿಮ ಎಲ್ಲೆಯಾಗಿತ್ತು.


ಮತ್ತೊಂದು ಗುಂಪು ಬೇತ್ ಹೋರೋನಿನ ಮಾರ್ಗವಾಗಿ ಹೋಯಿತು. ಬೇರೊಂದು ಗುಂಪು ಮರುಭೂಮಿಗೆ ಎದುರಾಗಿರುವ ಜೆಬೋಯಿಮ್ ತಗ್ಗಿಗೆದುರಾದ ಮೇರೆಯ ಮಾರ್ಗವಾಗಿ ಹೋಯಿತು.


ಬೇತ್ ಅರಾಬಾ, ಚೆಮಾರಯಿಮ್, ಬೇತೇಲ್,


ಇದಲ್ಲದೆ ಬೆನ್ಯಾಮೀನ್ಯರು ಗೆಬ ಮೊದಲುಗೊಂಡು ಮಿಕ್ಮಾಷಿನವರೆಗೂ ವಾಸವಾಗಿದ್ದರು. ಅಯ್ಯಾ, ಬೇತೇಲ್ ಇವುಗಳ ಗ್ರಾಮಗಳೂ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು