Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 16:8 - ಕನ್ನಡ ಸಮಕಾಲಿಕ ಅನುವಾದ

8 ತಪ್ಪೂಹದಿಂದ ಪಶ್ಚಿಮದ ಮೇರೆಯೂ ಕಾನಾ ನದಿಗೆ ಹೋಗಿ ಮೆಡಿಟೆರೆನಿಯನ್ ಸಮುದ್ರದವರೆಗೆ ಮುಗಿಯುವುದು. ಇದು ಎಫ್ರಾಯೀಮನ ಮಕ್ಕಳ ಗೋತ್ರ ಅವರ ಕುಟುಂಬಗಳ ಪ್ರಕಾರವೇ ದೊರೆತ ಸೊತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅದರ ಮೇರೆಯು ತಪ್ಪೂಹದಿಂದ ಪಶ್ಚಿಮದ ಕಡೆಗೆ ಹೋಗುವ ಕಾನಾ ಹಳ್ಳವನ್ನು ಅನುಸರಿಸಿ ಸಮುದ್ರತೀರದಲ್ಲಿ ಮುಕ್ತಾಯಗೊಳ್ಳುತ್ತದೆ. ಎಫ್ರಾಯೀಮ್ ಗೋತ್ರಗಳಿಗೆ ಸಿಕ್ಕಿದ ಸ್ವತ್ತು ಇವುಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅದರ ಎಲ್ಲೆ ತಪ್ಪೊಹದಿಂದ ಪಶ್ಚಿಮ ಕಡೆಗೆ ಹೋಗುವ ಕಾನಾ ನದಿಯನ್ನು ಅನುಸರಿಸಿ ಸಮುದ್ರ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ. ಎಫ್ರಯಿಮ್ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತು ಇದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಅದರ ಮೇರೆಯು ತಪ್ಪೂಹದಿಂದ ಪಶ್ಚಿಮ ಕಡೆಗೆ ಹೋಗುವ ಕಾನಾ ಹಳ್ಳವನ್ನು ಅನುಸರಿಸಿ ಸಮುದ್ರತೀರದಲ್ಲಿ ಮುಗಿಯುತ್ತದೆ. ಎಫ್ರಾಯೀಮ್ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವಾಸ್ತ್ಯವು ಇದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆ ಮೇರೆಯು ತಪ್ಪೂಹದಿಂದ ಪಶ್ಚಿಮದ ಕಡೆಗೆ ಹೋಗುವ ಕಾನಾ ನದಿಗೆ ಹೋಗಿ ಸಮುದ್ರದಲ್ಲಿ ಕೊನೆಗೊಳ್ಳುತ್ತದೆ. ಈ ಪ್ರದೇಶವನ್ನು ಎಫ್ರಾಯೀಮ್ ಕುಲದವರಿಗೆ ಅವರ ಕುಟುಂಬಗಳಿಗನುಸಾರವಾಗಿ ಕೊಡಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 16:8
10 ತಿಳಿವುಗಳ ಹೋಲಿಕೆ  

ಅಲ್ಲಿಂದ ಅಬ್ದೋನ್, ರೆಹೋಬ್, ಹಮ್ಮೋನ್, ಕಾನಾ ಹಾಗೂ ಸೀದೋನ್ ಎಂಬ ಮಹಾನಗರಕ್ಕೆ ಹೋಗುತ್ತದೆ.


ತಪ್ಪೂಹದ ಅರಸನು. ಹೇಫೆರಿನ ಅರಸನು.


ಪಶ್ಚಿಮದಲ್ಲಿ ದೊಡ್ಡ ಸಮುದ್ರವೇ ನಿಮಗೆ ಮೇರೆಯಾಗಿರಬೇಕು. ಇದೇ ನಿಮ್ಮ ಪಶ್ಚಿಮ ಮೇರೆಯಾಗಿರುವುದು.


ಇದಲ್ಲದೆ ಎಫ್ರಾಯೀಮ್ ಹಾಗೂ ಮನಸ್ಸೆ ಗೋತ್ರದವರ ಮಧ್ಯೆ ಕೊಡಲಾದ ಎಲ್ಲಾ ಪಟ್ಟಣಗಳೂ ಅವುಗಳ ಗ್ರಾಮಗಳೂ ಪ್ರತ್ಯೇಕವಾಗಿ ಕೊಡಲಾಗಿತ್ತು.


ಮನಸ್ಸೆಯ ಮೇರೆ, ಆಶೇರಿನಿಂದ ಶೆಕೆಮಿನ ಮುಂದಿರುವ ಮಿಕ್ಮೆತಾತಿನವರೆಗೂ ಇತ್ತು. ಅಲ್ಲಿಂದ ದಕ್ಷಿಣ ಕಡೆಯಿರುವ ಎನ್ ತಪ್ಪೂಹದ ನಿವಾಸಗಳಿಗೆ ಹೋಗುತ್ತದೆ.


ಅಲ್ಲಿ ಅವನನ್ನು ಗಿಲ್ಯಾದ್, ಅಶೂರ್, ಇಜ್ರೆಯೇಲ್, ಎಫ್ರಾಯೀಮ್, ಬೆನ್ಯಾಮೀನ್ ಜನರ ಮೇಲೆಯೂ, ಇಸ್ರಾಯೇಲರೆಲ್ಲರ ಮೇಲೆಯೂ ಅರಸನನ್ನಾಗಿ ಮಾಡಿದನು.


ಅವರ ವಶಪಡಿಸಿಕೊಂಡು ನಿವಾಸಮಾಡಿದ ಬೇತೇಲೂ, ಅದರ ಗ್ರಾಮಗಳೂ ಪೂರ್ವದಿಕ್ಕಿನಲ್ಲಿ ನಾರಾನನೂ, ಪಶ್ಚಿಮ ದಿಕ್ಕಿನಲ್ಲಿ ಗೆಜೆರ್, ಅದರ ಗ್ರಾಮಗಳೂ ಒಳಗೊಂಡಿತ್ತು; ಶೆಕೆಮ್, ಅಯ್ಯಾ ಪಟ್ಟಣಗಳೂ ಅದರ ಗ್ರಾಮಗಳೂ ಇವೇ.


ಮನಸ್ಸೆಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಎಫ್ರಾಯೀಮಿಗೆ ಒಂದು ಭಾಗ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು