Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 16:3 - ಕನ್ನಡ ಸಮಕಾಲಿಕ ಅನುವಾದ

3 ಪಶ್ಚಿಮಕ್ಕೆ ಯಫ್ಲೇಟ್ಯರ ಮೇರೆಗೂ ಕೆಳಗಡೆಯಾದ ಬೇತ್ ಹೋರೋನ್ ಮೇರೆಯವರೆಗೂ ಅಲ್ಲಿಂದ ಗೆಜೆರಿನವರೆಗೂ ಹೋಗಿ ಮೆಡಿಟೆರಿಯನ್ ಸಮುದ್ರ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅಲ್ಲಿಂದ ಇಳಿದು ಪಶ್ಚಿಮ ದಿಕ್ಕಿನಲ್ಲಿರುವ ಯಫ್ಲೇಟ್ಯರ ಪ್ರಾಂತ್ಯವನ್ನು ಮುಟ್ಟಿ ಕೆಳಗಿನ ಬೇತ್ ಹೋರೋನ್ ಮೇಲೆ ಗೆಜೆರಿಗೆ ಹೋಗಿ ಸಮುದ್ರ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಅಲ್ಲಿಂದ ಇಳಿದು ದಶ್ಚಿಮ ದಿಕ್ಕಿನಲ್ಲಿರುವ ಯಫ್ಲೇಟ್ಯರ ಪ್ರಾಂತ್ಯವನ್ನು ಮುಟ್ಟಿ ಕೆಳಗಿನ ಬೇತ್ ಹೋರೋನಿನ ಮೇಲೆ ಗೆಜೆರಿಗೆ ಹೋಗಿ ಸಮುದ್ರ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅಲ್ಲಿಂದ ಇಳಿದು ಪಶ್ಚಿಮದಿಕ್ಕಿನಲ್ಲಿರುವ ಯಫ್ಲೇಟ್ಯರ ಪ್ರಾಂತವನ್ನು ಮುಟ್ಟಿ ಕೆಳಗಿನ ಬೇತ್‍ಹೋರೋನಿನ ಮೇಲೆ ಗೆಜೆರಿಗೆ ಹೋಗಿ ಸಮುದ್ರತೀರದಲ್ಲಿ ಮುಗಿಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಅಲ್ಲಿಂದ ಪಶ್ಚಿಮದಿಕ್ಕಿನಲ್ಲಿರುವ ಯಪ್ಲೇಟ್ಯರ ಪ್ರಾಂತ್ಯದ ಸೀಮೆಗೆ ಮುಟ್ಟಿ ಅಲ್ಲಿಂದ ಕೆಳಗಿನ ಬೇತ್‌ಹೋರೋನ್ ಕಡೆಗೆ ಮುಂದುವರೆಯುತ್ತದೆ. ಅಲ್ಲಿಂದ ಗೆಜೆರಿಗೆ ಹೋಗಿ ಮೆಡಿಟರೆನಿಯನ್ ಸಮುದ್ರದತ್ತ ಮುಂದುವರೆಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 16:3
9 ತಿಳಿವುಗಳ ಹೋಲಿಕೆ  

ಇವುಗಳಲ್ಲದೆ, ಮೇಲಿನ ಬೇತ್ ಹೋರೋನ್ ಮತ್ತು ಕೆಳಗಿನ ಬೇತ್ ಹೋರೋನ್ ಪಟ್ಟಣಗಳನ್ನು ಪುನಃ ನಿರ್ಮಿಸಿದನು. ಈ ಪಟ್ಟಣಗಳು ಬಲವಾದ ಗೋಡೆಗಳು, ಬಾಗಿಲುಗಳು ಮತ್ತು ಅಗುಳಿಗಳು ಉಳ್ಳ ಕೋಟೆ ಪಟ್ಟಣಗಳಾಗಿ ಸೊಲೊಮೋನನು ಕಟ್ಟಿಸಿದನು.


ಆ ಮೇರೆಯು ಅಲ್ಲಿಂದ ಬೇತೇಲೆಂಬ ಲೂಜಿಗೆ ಹಾದು, ಲೂಜಿನ ದಕ್ಷಿಣದ ಕಡೆಗೆ ಹೋಗಿ, ಅಟಾರೋತ್ ಅದ್ದಾರಿನ ಕೆಳಗಿನ ಬೇತ್ ಹೋರೋನಿಗೆ ದಕ್ಷಿಣದಲ್ಲಿರುವ ಬೆಟ್ಟಕ್ಕೆ ಹೋಗುವುದು.


ಆಗ ಗೆಜೆರಿನ ಅರಸನಾದ ಹೋರಾಮನು ಲಾಕೀಷಿಗೆ ಸಹಾಯಮಾಡಲು ಬಂದನು. ಆದರೆ ಯೆಹೋಶುವನು ಒಬ್ಬರೂ ಉಳಿಯದಂತೆ ಅವನನ್ನೂ, ಅವನ ಜನರನ್ನೂ ಸದೆಬಡಿದನು.


ಅವರ ವಶಪಡಿಸಿಕೊಂಡು ನಿವಾಸಮಾಡಿದ ಬೇತೇಲೂ, ಅದರ ಗ್ರಾಮಗಳೂ ಪೂರ್ವದಿಕ್ಕಿನಲ್ಲಿ ನಾರಾನನೂ, ಪಶ್ಚಿಮ ದಿಕ್ಕಿನಲ್ಲಿ ಗೆಜೆರ್, ಅದರ ಗ್ರಾಮಗಳೂ ಒಳಗೊಂಡಿತ್ತು; ಶೆಕೆಮ್, ಅಯ್ಯಾ ಪಟ್ಟಣಗಳೂ ಅದರ ಗ್ರಾಮಗಳೂ ಇವೇ.


ಇವನ ಪುತ್ರಿಯ ಹೆಸರು ಶೇರಳು. ಇವಳು ಕೆಳಗಿನ ಬೇತ್ ಹೋರೋನ್, ಮೇಲಿನ ಬೇತ್ ಹೋರೋನ್ ಮತ್ತು ಉಜ್ಜೇನ್ ಶೇರವನ್ನೂ ಕಟ್ಟಿಸಿದಳು.


ಪಶ್ಚಿಮದಲ್ಲಿ ದೊಡ್ಡ ಸಮುದ್ರವೇ ನಿಮಗೆ ಮೇರೆಯಾಗಿರಬೇಕು. ಇದೇ ನಿಮ್ಮ ಪಶ್ಚಿಮ ಮೇರೆಯಾಗಿರುವುದು.


ಮತ್ತೊಂದು ಗುಂಪು ಬೇತ್ ಹೋರೋನಿನ ಮಾರ್ಗವಾಗಿ ಹೋಯಿತು. ಬೇರೊಂದು ಗುಂಪು ಮರುಭೂಮಿಗೆ ಎದುರಾಗಿರುವ ಜೆಬೋಯಿಮ್ ತಗ್ಗಿಗೆದುರಾದ ಮೇರೆಯ ಮಾರ್ಗವಾಗಿ ಹೋಯಿತು.


ಇದರ ತರುವಾಯ, ಫಿಲಿಷ್ಟಿಯರ ಸಂಗಡ ಗೆಜೆರಿನಲ್ಲಿ ಯುದ್ಧನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬವನು ರೆಫಾಯನಾದ ಸಿಪ್ಪೈ ಎಂಬವನನ್ನು ಕೊಂದದ್ದರಿಂದ ಫಿಲಿಷ್ಟಿಯರು ಸೋತುಹೋದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು