Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 15:9 - ಕನ್ನಡ ಸಮಕಾಲಿಕ ಅನುವಾದ

9 ಆ ಬೆಟ್ಟದ ಶಿಖರದಿಂದ ನೆಫ್ತೋಹದ ನೀರಿನ ಬುಗ್ಗೆಗೂ ಅಲ್ಲಿಂದ ಎಫ್ರೋನನ ಬೆಟ್ಟದ ಪಟ್ಟಣಗಳಿಗೂ ಅಲ್ಲಿಂದ ಕಿರ್ಯತ್ ಯಾರೀಮ್ ಆದ ಬಾಲಾ ಎಂಬ ಊರಿನವರೆಗೆ ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಅದು ಆ ಬೆಟ್ಟದ ತುದಿಯಿಂದ ಮುಂದೆ ನೆಫ್ತೋಹ ಬುಗ್ಗೆ, ಎಫ್ರೋನ್ ಬೆಟ್ಟದ ಪಟ್ಟಣಗಳು ಇವುಗಳ ಮೇಲೆ ಕಿರ್ಯತ್ಯಾರೀಮ್ ಎನ್ನಿಸಿಕೊಳ್ಳುವ ಬಾಲಾ ಎಂಬ ಊರಿಗೆ ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅದು ಆ ಬೆಟ್ಟದ ತುದಿಯಿಂದ ಮುಂದೆ ನೆಪ್ತೋಹ ಬುಗ್ಗೆ, ಎಫ್ರೋನ್ ಬೆಟ್ಟದ ನಗರಗಳು ಇವುಗಳ ಮೇಲೆ ಕಿರ್ಯತ್ಯಾರೀಮ್ ಎನಿಸಿಕೊಳ್ಳುವ ಬಾಲಾ ಎಂಬ ಊರಿಗೆ ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅದು ಆ ಬೆಟ್ಟದ ತುದಿಯಿಂದ ಮುಂದೆ ನೆಫ್ತೋಹ ಬುಗ್ಗೆ, ಎಫ್ರೋನ್ ಬೆಟ್ಟದ ಪಟ್ಟಣಗಳು ಇವುಗಳ ಮೇಲೆ ಕಿರ್ಯತ್ಯಾರೀಮ್ ಅನ್ನಿಸಿಕೊಳ್ಳುವ ಬಾಲಾ ಎಂಬ ಊರಿಗೆ ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಅಲ್ಲಿಂದ ಆ ಸೀಮೆಯು ನೆಫ್ತೋಹ ಬುಗ್ಗೆಗೆ ಹೋಗುತ್ತದೆ; ಅಲ್ಲಿಂದ ಎಫ್ರೋನ್ ಬೆಟ್ಟದ ಸಮೀಪದ ನಗರಗಳಿಗೆ ಹೋಗುತ್ತದೆ; ಅಲ್ಲಿಂದ ತಿರುಗಿ “ಬಾಲಾ” ಎಂಬ ಊರಿಗೆ ಹೋಗುತ್ತದೆ. (ಬಾಲಾವನ್ನು ಕಿರ್ಯತ್ಯಾರೀಮ್ ಎಂದೂ ಕರೆಯುತ್ತಾರೆ.)

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 15:9
8 ತಿಳಿವುಗಳ ಹೋಲಿಕೆ  

ಆಗ ಕೆರೂಬಿಗಳ ನಡುವೆ ವಾಸವಾಗಿರುವ ಯೆಹೋವ ದೇವರ ಹೆಸರಿನಿಂದ ಕರೆಯಲಾದ ದೇವರ ಮಂಜೂಷವನ್ನು ತೆಗೆದುಕೊಂಡು ಬರಲು, ದಾವೀದನೂ, ಸಮಸ್ತ ಇಸ್ರಾಯೇಲರೂ ಯೆಹೂದಕ್ಕೆ ಸೇರಿದ ಕಿರ್ಯತ್ ಯಾರೀಮಿನ ಬಾಲಾ ಎಂಬಲ್ಲಿಗೆ ಹೋದರು.


ಆ ದಕ್ಷಿಣ ಎಲ್ಲೆಯೂ ಕಿರ್ಯತ್ ಯಾರೀಮ್ ತುದಿಯಿಂದ ಹೊರಟು, ಪಶ್ಚಿಮಕ್ಕೆ ಹೋಗಿ, ನೆಫ್ತೋಹದ ಜಲಬುಗ್ಗೆಯ ಬಳಿ ಮುಗಿಯುತ್ತದೆ.


ಯೆಹೂದದಲ್ಲಿರುವ ಕಿರ್ಯತ್ ಯಾರೀಮಿನಲ್ಲಿ ಇಳಿದುಕೊಂಡರು. ಆ ಸ್ಥಳಕ್ಕೆ ಈ ದಿನದವರೆಗೂ ಮಹನೇ ದಾನ್ ಎಂಬ ಹೆಸರಿದೆ.


ಆ ಕೆರೂಬಿಗಳ ನಡುವೆ ವಾಸವಾಗಿರುವ ಸೇನಾಧೀಶ್ವರ ಯೆಹೋವ ದೇವರ ಹೆಸರಿನಿಂದ ಕರೆಯಲಾದ ದೇವರ ಮಂಜೂಷವನ್ನು ತೆಗೆದುಕೊಂಡು ಬರಲು ತನ್ನ ಸಂಗಡ ಇದ್ದ ಸಮಸ್ತ ಜನರನ್ನು ಕರೆದುಕೊಂಡು, ಯೆಹೂದದ ಬಾಲಾ ಎಂಬಲ್ಲಿಗೆ ಹೊರಟನು.


ಆಗ ಇಸ್ರಾಯೇಲರು ಪ್ರಯಾಣ ಮಾಡುವಾಗ ಮೂರನೆಯ ದಿವಸದಲ್ಲಿ ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ ಯಾರೀಮ್ ಎಂಬ ಅವರ ಪಟ್ಟಣಗಳಿಗೆ ಬಂದರು.


ಅವರು ಕಿರ್ಯತ್ ಯಾರೀಮಿನ ನಿವಾಸಿಗಳಿಗೆ ದೂತರನ್ನು ಕಳುಹಿಸಿ, “ಫಿಲಿಷ್ಟಿಯರು ಯೆಹೋವ ದೇವರ ಮಂಜೂಷವನ್ನು ತಿರುಗಿ ಕಳುಹಿಸಿದ್ದಾರೆ, ನೀವು ಬಂದು ಅದನ್ನು ನಿಮ್ಮ ಬಳಿಗೆ ತೆಗೆದುಕೊಂಡು ಹೋಗಿರಿ,” ಎಂದು ಹೇಳಿದರು.


ಕಿರ್ಯತ್ ಯಾರೀಮ್ ಎಂಬ ಕಿರ್ಯತ್ ಬಾಳ್, ರಬ್ಬಾ ಎಂಬ ಎರಡು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು