Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 15:12 - ಕನ್ನಡ ಸಮಕಾಲಿಕ ಅನುವಾದ

12 ಅದು ಪಶ್ಚಿಮದ ಮೇರೆಯ ಮೆಡಿಟರೇನಿಯನ್ ಮಹಾಸಾಗರವಾಗಿದೆ. ಇದೇ ಯೆಹೂದ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸುತ್ತಲಿರುವ ಮೇರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಮಹಾಸಾಗರದ ತೀರವೇ ಪಶ್ಚಿಮ ಮೇರೆಯು. ಯೆಹೂದಾ ಗೋತ್ರಗಳ ದೇಶದ ಸುತ್ತಣ ಮೇರೆಗಳು ಇವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಮಹಾಸಾಗರದ ತೀರವೇ ಪಶ್ಚಿಮ ಎಲ್ಲೆ, ಯೆಹೂದ ಗೋತ್ರಗಳ ನಾಡಿನ ಸುತ್ತಣ ಎಲ್ಲೆಗಳು ಇವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಮಹಾಸಾಗರದ ತೀರವೇ ಪಶ್ಚಿಮ ಮೇರೆಯು. ಯೆಹೂದ ಗೋತ್ರಗಳ ದೇಶದ ಸುತ್ತಣ ಮೇರೆಗಳು ಇವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಮೆಡಿಟರೆನಿಯನ್ ಸಮುದ್ರತೀರವೇ ಯೆಹೂದ್ಯರ ಸ್ವಾಸ್ತ್ಯದ ಪಶ್ಚಿಮ ಸೀಮೆಯಾಗಿತ್ತು. ಹೀಗೆ ಯೆಹೂದ್ಯರ ಸ್ವಾಸ್ತ್ಯವು ಈ ನಾಲ್ಕು ಸೀಮೆಯ ಒಳಗಡೆ ಇತ್ತು. ಯೆಹೂದ್ಯರ ಗೋತ್ರಗಳು ಈ ಪ್ರದೇಶದಲ್ಲಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 15:12
7 ತಿಳಿವುಗಳ ಹೋಲಿಕೆ  

ಉತ್ತರದ ಮೇರೆಯಿಂದ ಹಮಾತಿನ ಪ್ರದೇಶದವರೆಗೂ ಇರುವ ದೊಡ್ಡ ಸಮುದ್ರವು ಪಶ್ಚಿಮದ ಕಡೆಗಿದೆ. ಇದೇ ಪಶ್ಚಿಮದ ಮೇರೆ.


ಅಷ್ಡೋದ್ ಪಟ್ಟಣ ಮತ್ತು ಅದರ ಸುತ್ತಲಿನ ಪಟ್ಟಣಗಳೂ ಗ್ರಾಮಗಳೂ, ಗಾಜಾ, ಅದರ ಪಟ್ಟಣಗಳು, ಅದರ ಗ್ರಾಮಗಳು. ಈಜಿಪ್ಟಿನ ಕಲ್ಲಿನ ನಾಲೆ, ಮೆಡಿಟೆರಿಯನ್ ಸಮುದ್ರ, ಅದರ ಮೇರೆ ಇವುಗಳವರೆಗೂ ಇತ್ತು.


ನೀವು ಹೆಜ್ಜೆ ಇಡುವ ಸ್ಥಳವೆಲ್ಲಾ ನಿಮ್ಮದಾಗುವುದು. ಮರುಭೂಮಿಯಿಂದ ಲೆಬನೋನಿನವರೆಗೂ, ಯೂಫ್ರೇಟೀಸ್ ನದಿಯಿಂದ ಪಶ್ಚಿಮ ಸಮುದ್ರದ ಅಂತ್ಯದವರೆಗೂ ನಿಮ್ಮ ಮೇರೆಯಾಗಿರುವುದು.


ಅಲ್ಲಿಂದ ಉತ್ತರಕ್ಕಿರುವ ಎಕ್ರೋನಿನ ಗುಡ್ಡಕ್ಕೆ ಹೋಗಿ ಶಿಕ್ಕೆರೋನಿಗೂ, ಅಲ್ಲಿಂದ ಬಾಲಾ ಬೆಟ್ಟವನ್ನು ದಾಟಿ ಯಬ್ನೆಯೇಲಿಗೆ ಹೊರಟು ಸಮುದ್ರ ತೀರದಲ್ಲಿ ಮುಗಿಯುತ್ತದೆ.


ನೀವು ಅದನ್ನು ಏಳು ಪಾಲಾಗಿ ಹಂಚಬೇಕು. ದಕ್ಷಿಣದಲ್ಲಿ ಯೆಹೂದವು, ಉತ್ತರದಲ್ಲಿ ಯೋಸೇಫನ ಮನೆತನದವರೂ ನೆಲೆಸಬೇಕು.


ರೂಬೇನಿನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ, ಪಶ್ಚಿಮದ ಕಡೆಯವರೆಗೂ ಯೆಹೂದಕ್ಕೆ ಒಂದು ಭಾಗ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು