Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 10:25 - ಕನ್ನಡ ಸಮಕಾಲಿಕ ಅನುವಾದ

25 ಆಗ ಯೆಹೋಶುವನು ಅವರಿಗೆ, “ಭಯಪಡಬೇಡಿರಿ, ನಿರುತ್ಸಾಹಗೊಳ್ಳಬೇಡಿರಿ, ಬಲಗೊಂಡು ಧೈರ್ಯವಾಗಿರಿ. ಏಕೆಂದರೆ ನೀವು ಯುದ್ಧಮಾಡುವ ನಿಮ್ಮ ಶತ್ರುಗಳೆಲ್ಲರಿಗೂ ಯೆಹೋವ ದೇವರು ಹೀಗೆಯೇ ಮಾಡುವರು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಆಗ ಅವನು ಅವರಿಗೆ “ಅಂಜಬೇಡಿರಿ, ಕಳವಳಗೊಳ್ಳಬೇಡಿರಿ; ಸ್ಥಿರಚಿತ್ತರಾಗಿ, ಧೈರ್ಯದಿಂದಿರಿ. ನಿಮ್ಮೊಡನೆ ಯುದ್ಧಕ್ಕೆ ಬರುವ ಎಲ್ಲಾ ವೈರಿಗಳಿಗೂ ಯೆಹೋವನು ಹೀಗೆಯೇ ಮಾಡುವನು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಆಗ ಅವನು ಅವರಿಗೆ, “ಅಂಜಬೇಡಿ, ಕಳವಳಗೊಳ್ಳಬೇಡಿ, ಸ್ಥಿರಚಿತ್ತರಾಗಿರಿ, ಧೈರ್ಯದಿಂದಿರಿ. ನಿಮ್ಮೊಡನೆ ಯುದ್ಧಕ್ಕೆ ಬರುವ ಎಲ್ಲ ಶತ್ರುಗಳಿಗೂ ಸರ್ವೇಶ್ವರ ಹೀಗೆಯೇ ಮಾಡುವರು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಆಗ ಅವನು ಅವರಿಗೆ - ಅಂಜಬೇಡಿರಿ, ಕಳವಳಗೊಳ್ಳಬೇಡಿರಿ; ಸ್ಥಿರಚಿತ್ತರಾಗಿರ್ರಿ, ಧೈರ್ಯದಿಂದಿರ್ರಿ. ನಿಮ್ಮೊಡನೆ ಯುದ್ಧಕ್ಕೆ ಬರುವ ಎಲ್ಲಾ ವೈರಿಗಳಿಗೂ ಯೆಹೋವನು ಹೀಗೆಯೇ ಮಾಡುವನು ಎಂದು ಹೇಳಿದನಂತರ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಆಗ ಯೆಹೋಶುವನು ತನ್ನ ಜನರಿಗೆ, “ಸ್ಥಿರಚಿತ್ತರಾಗಿರಿ, ಧೈರ್ಯದಿಂದಿರಿ, ಅಂಜಬೇಡಿರಿ, ಇನ್ನು ಮುಂದೆ ನಮ್ಮ ಜೊತೆ ಹೋರಾಡುವ ಎಲ್ಲ ಶತ್ರುಗಳಿಗೆ ಯೆಹೋವನು ಏನು ಮಾಡುತ್ತಾನೆಂಬುದನ್ನು ನಿಮಗೆ ತೋರಿಸುತ್ತೇನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 10:25
13 ತಿಳಿವುಗಳ ಹೋಲಿಕೆ  

ನಾವು ಭರವಸೆಯಿಟ್ಟ ದೇವರು ಅಂಥಾ ಮರಣಕರ ಅಪಾಯದಿಂದ ನಮ್ಮನ್ನು ತಪ್ಪಿಸಿದ್ದಾರೆ ಮತ್ತು ಮುಂದೆಯೂ ಅಪಾಯಗಳಿಂದ ನಮ್ಮನ್ನು ಪಾರುಮಾಡುವರು.


ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ, ಬಲಿಷ್ಠನಾಗಿರು. ಧೈರ್ಯದಿಂದಿರು, ಭಯಪಡಬೇಡ, ನಿರುತ್ಸಾಹಗೊಳ್ಳಬೇಡ. ಏಕೆಂದರೆ ನೀನು ಹೋಗುವ ಕಡೆಯೆಲ್ಲಾ ನಿನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ,” ಎಂದು ಹೇಳಿದರು.


ಕೊನೆಯದಾಗಿ, ಕರ್ತನಲ್ಲಿಯೂ ಅವರ ಪರಾಕ್ರಮ ಶಕ್ತಿಯಲ್ಲಿಯೂ ಬಲಗೊಳ್ಳಿರಿ.


ಇವೆಲ್ಲವುಗಳಲ್ಲಿಯೂ ನಾವು ನಮ್ಮನ್ನು ಪ್ರೀತಿಸಿದಾತನ ಮೂಲಕ ಜಯ ಹೊಂದಿದವರಿಗಿಂತಲೂ ಹೆಚ್ಚಿನವರಾಗಿದ್ದೇವೆ.


ಇದಲ್ಲದೆ ದಾವೀದನು, “ನನ್ನನ್ನು ಸಿಂಹದ ಕೈಗೂ, ಕರಡಿಯ ಕೈಗೂ ತಪ್ಪಿಸಿಬಿಟ್ಟ ಯೆಹೋವ ದೇವರು, ಈ ಫಿಲಿಷ್ಟಿಯನ ಕೈಗೂ ನನ್ನನ್ನು ತಪ್ಪಿಸಿಬಿಡುವರು,” ಎಂದನು. ಆಗ ಸೌಲನು ದಾವೀದನಿಗೆ, “ನೀನು ಹೋಗು, ಯೆಹೋವ ದೇವರು ನಿನ್ನ ಸಂಗಡ ಇರಲಿ,” ಎಂದನು.


ಕಣ್ಣಾರೆ ನೋಡಿದ ದೊಡ್ಡ ಉಪದ್ರವಗಳನ್ನೂ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಹೊರಗೆ ಬರಮಾಡಿದಾಗ ಉಂಟಾದ ಗುರುತುಗಳನ್ನೂ, ಅದ್ಭುತಗಳನ್ನೂ, ದೇವರ ಬಲವಾದ ಹಸ್ತವನ್ನೂ, ಚಾಚಿದ ತೋಳನ್ನೂ ನೀವು ಚೆನ್ನಾಗಿ ಜ್ಞಾಪಕಮಾಡಿಕೊಳ್ಳಬೇಕು. ನೀವು ಯಾವ ಜನರಿಗೆ ಭಯಪಡುತ್ತೀರೋ, ಆ ಜನರಿಗೆಲ್ಲಾ ನಿಮ್ಮ ದೇವರಾದ ಯೆಹೋವ ದೇವರು ಹಾಗೆಯೇ ಮಾಡುವರು.


ಯೆಹೋವ ದೇವರ ಕ್ರಿಯೆಗಳನ್ನು ಜ್ಞಾಪಕಮಾಡಿಕೊಳ್ಳುವೆನು. ಹೌದು, ಆದಿಯಿಂದಲೂ ನೀವು ನಡೆಸಿದ ಅದ್ಭುತಗಳನ್ನು ನೆನಪುಮಾಡಿಕೊಳ್ಳುವೆನು.


ನನ್ನ ಪ್ರಾಣಕ್ಕೆ ಕೇಡು ಬಯಸುವವರು ತಾವೇ ನಾಶವಾಗುವರು ಅವರು ಭೂಮಿಯ ಆಳಕ್ಕೆ ಹೋಗುವರು.


ಯೆಹೋವ ದೇವರು ಯೆಹೋಶುವನಿಗೆ, “ನೀನು ಅವರಿಗೆ ಭಯಪಡಬೇಡ, ನಾನು ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಕೊಟ್ಟಿದ್ದೇನೆ. ಅವರಲ್ಲಿ ಒಬ್ಬನಾದರೂ ನಿನ್ನ ಎದುರಿನಲ್ಲಿ ನಿಲ್ಲುವುದಿಲ್ಲ,” ಎಂದರು.


ಬಲಿಷ್ಠನಾಗಿರು, ಧೈರ್ಯದಿಂದಿರು. ಏಕೆಂದರೆ ನಾನು ಈ ಜನರಿಗೆ ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನು ಇವರಿಗೆ ಸ್ವಾಧೀನಪಡಿಸಬೇಕಾದವನು ನೀನೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು