Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 7:2 - ಕನ್ನಡ ಸಮಕಾಲಿಕ ಅನುವಾದ

2 “ಮನುಷ್ಯಪುತ್ರನೇ, ಸಾರ್ವಭೌಮ ಯೆಹೋವ ದೇವರು ಇಸ್ರಾಯೇಲ್ ದೇಶಕ್ಕೆ ಹೀಗೆ ಹೇಳುತ್ತಾರೆ: “ ‘ಅಂತ್ಯವು ಬಂದಿದೆ! ಈ ದೇಶದ ನಾಲ್ಕು ಮೂಲೆಗಳಲ್ಲಿಯೂ ಅಂತ್ಯವು ಬಂದಿದೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 “ನರಪುತ್ರನೇ, ಕರ್ತನಾದ ಯೆಹೋವನು ಇಸ್ರಾಯೇಲ್ ದೇಶಕ್ಕೆ ಹೀಗೆ ನುಡಿಯುತ್ತಾನೆ, ‘ಪ್ರಳಯವು, ಪೂರ್ಣ ಪ್ರಳಯವು ದೇಶದ ಚತುರ್ದಿಕ್ಕಿನಲ್ಲಿಯೂ ಸಂಭವಿಸಿದೆ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 “ನರಪುತ್ರನೇ, ಸರ್ವೇಶ್ವರನಾದ ದೇವರು ಇಸ್ರಯೇಲ್ ನಾಡಿಗೆ ಹೀಗೆ ನುಡಿಯುತ್ತಾರೆ: ‘ಪ್ರಳಯ, ಪೂರ್ಣಪ್ರಳಯ ನಾಡಿನ ಚತುರ್ದಿಕ್ಕಿನಲ್ಲೂ ಸಂಭವಿಸಿದೆ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ನರಪುತ್ರನೇ, ಕರ್ತನಾದ ಯೆಹೋವನು ಇಸ್ರಾಯೇಲ್ ದೇಶಕ್ಕೆ ಹೀಗೆ ನುಡಿಯುತ್ತಾನೆ - ಪ್ರಳಯವು, ಪೂರ್ಣಪ್ರಳಯವು ದೇಶದ ಚತುರ್ದಿಕ್ಕಿನಲ್ಲಿಯೂ ಸಂಭವಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಆತನು ಹೇಳಿದ್ದೇನೆಂದರೆ: “ನರಪುತ್ರನೇ, ನನ್ನ ಒಡೆಯನಾದ ಯೆಹೋವನ ಸಂದೇಶವಿದು. ಈ ಸಂದೇಶವನ್ನು ಇಸ್ರೇಲ್ ದೇಶಕ್ಕೆ ನೀಡು. “ಅಂತ್ಯ, ಅಂತ್ಯವು ಬರುವುದು. ಇಡೀ ದೇಶವು ಹಾಳಾಗಿಹೋಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 7:2
28 ತಿಳಿವುಗಳ ಹೋಲಿಕೆ  

ಆಗ, “ಆಮೋಸನೇ, ಏನು ನೋಡುತ್ತಿರುವೆ?” ಎಂದು ಕೇಳಿದರು. ನಾನು, “ಮಾಗಿದ ಹಣ್ಣುಗಳ ಬುಟ್ಟಿ,” ಎಂದೆನು. ಆಗ ಯೆಹೋವ ದೇವರು ನನಗೆ, “ನನ್ನ ಜನರಾದ ಇಸ್ರಾಯೇಲರ ಸಮಯವು ಮಾಗುತ್ತಾ ಬಂತು. ನಾನು ಇನ್ನು ಮೇಲೆ ಅವರನ್ನು ಉಳಿಸುವುದಿಲ್ಲ,” ಎಂದು ಹೇಳಿದರು.


ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಸ್ವಸ್ಥಚಿತ್ತರಾಗಿಯೂ ಜಾಗ್ರತರಾಗಿಯೂ ಪ್ರಾರ್ಥನೆಗೆ ಸಿದ್ಧವಾಗಿರಿ.


ನಿಮ್ಮ ಹಬ್ಬಗಳನ್ನು ದುಃಖಕ್ಕೂ, ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು. ಎಲ್ಲರೂ ಸೊಂಟಗಳಿಗೆ ಗೋಣಿತಟ್ಟನ್ನು ಕಟ್ಟಿಕೊಂಡು, ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು. ಒಬ್ಬನೇ ಮಗನಿಗಾಗಿ ಗೋಳಾಡುವ ಸಮಯದಂತೆ ಮಾಡುವೆನು. ಅದರ ಅಂತ್ಯವು ಕಹಿಯಾದ ದಿನದಂತಿರುವುದು.


ಈಗಲೇ ನಿನಗೆ ಅಂತ್ಯವು ಬಂದಿದೆ. ನನ್ನ ಕೋಪವನ್ನು ನಿನ್ನ ಮೇಲೆ ಬರಮಾಡುತ್ತೇನೆ. ನಿನ್ನ ನಡತೆಯ ಪ್ರಕಾರ ನಿನಗೆ ನ್ಯಾಯತೀರಿಸುತ್ತೇನೆ. ನಿನ್ನ ಎಲ್ಲಾ ಅಸಹ್ಯ ಕಾರ್ಯಗಳಿಗೋಸ್ಕರ ನಿನ್ನ ಮೇಲೆ ಮುಯ್ಯಿತೀರಿಸುವೆನು.


ನಾನು ಪ್ರವಾದಿಸುತ್ತಿರುವಾಗ, ಬೆನಾಯನ ಮಗನಾದ ಪೆಲಟೀಯನು ಸತ್ತನು. ಆಗ ನಾನು ಮುಖ ಕೆಳಗಾಗಿ ಬಿದ್ದು, ಗಟ್ಟಿಯಾಗಿ ಕೂಗಿ, “ಸಾರ್ವಭೌಮ ಯೆಹೋವ ದೇವರೇ, ನೀವು ಇಸ್ರಾಯೇಲಿನಲ್ಲಿ ಉಳಿದವರನ್ನು ಪೂರ್ಣವಾಗಿ ಮುಗಿಸಿಬಿಡುತ್ತೀರೋ?” ಎಂದು ಹೇಳಿದನು.


ನಾವು ನಮ್ಮ ಬೀದಿಗಳಲ್ಲಿ ಹೋಗದ ಹಾಗೆ, ಶತ್ರುಗಳು ನಮ್ಮ ಹೆಜ್ಜೆಗಳನ್ನೇ ಬೇಟೆಯಾಡುತ್ತಾರೆ. ನಮ್ಮ ಅಂತ್ಯವು ಸಮೀಪಿಸಿತು, ನಮ್ಮ ದಿನಗಳು ತೀರಿದವು. ಏಕೆಂದರೆ ನಮ್ಮ ಅಂತ್ಯವು ಬಂದಿತು.


ಯುದ್ಧಗಳನ್ನೂ ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಿರಿ, ಆದರೆ ನೀವು ಕಳವಳಗೊಳ್ಳದಂತೆ ನೋಡಿಕೊಳ್ಳಿರಿ. ಏಕೆಂದರೆ ಇವೆಲ್ಲವು ಸಂಭವಿಸುವುದು ಅಗತ್ಯ. ಆದರೆ ಇದು ಇನ್ನೂ ಅಂತ್ಯವಲ್ಲ.


ದೇವರ ದರ್ಶನಗಳಲ್ಲಿ ಅವರು ನನ್ನನ್ನು ಇಸ್ರಾಯೇಲ್ ದೇಶಕ್ಕೆ ತಂದು ಅತಿ ಎತ್ತರವಾದ ಪರ್ವತಗಳ ಮೇಲೆ ನನ್ನನ್ನು ನಿಲ್ಲಿಸಿದರು. ಅದರ ಮೇಲೆ ದಕ್ಷಿಣದ ಕಡೆಯಲ್ಲಿ ಪಟ್ಟಣವು ಕಟ್ಟಿರುವಂತಿತ್ತು.


“ಮನುಷ್ಯಪುತ್ರನೇ, ನೀನು ಯೆರೂಸಲೇಮಿಗೆ ಅಭಿಮುಖವಾಗಿ ಅಲ್ಲಿನ ಪರಿಶುದ್ಧ ಸ್ಥಳಗಳ ಕಡೆಗೆ ಮಾತನಾಡುತ್ತಾ ಇಸ್ರಾಯೇಲ್ ದೇಶಕ್ಕೆ ವಿರುದ್ಧವಾಗಿ ಪ್ರವಾದಿಸಿ,


“ಮನುಷ್ಯಪುತ್ರನೇ, ‘ದಿನಗಳು ಬಹಳವಾಗುತ್ತಿವೆ. ದಿವ್ಯದರ್ಶನಗಳೆಲ್ಲಾ ನಿರರ್ಥಕ ಎಂದು ಇಸ್ರಾಯೇಲ್ ದೇಶದಲ್ಲಿ ಹೇಳಿಕೊಳ್ಳುವ ಈ ಗಾದೆ ಏನು’?


ಅವಳ ಅಶುದ್ಧವು ಅವಳ ನೆರಿಗೆಗೆ ಅಂಟಿಕೊಂಡಿದೆ. ಅವಳು ತನ್ನ ಭವಿಷ್ಯವನ್ನು ಜ್ಞಾಪಕಮಾಡಿಕೊಳ್ಳುವುದಿಲ್ಲ. ಆದ್ದರಿಂದ ಅವಳು ಭಯಂಕರವಾಗಿ ಇಳಿದು ಬಂದಳು. ಅವಳನ್ನು ಆದರಿಸುವವರು ಯಾರೂ ಇಲ್ಲ. “ಓ ಯೆಹೋವ ದೇವರೇ, ನನ್ನ ಸಂಕಟವನ್ನು ನೋಡಿರಿ, ಶತ್ರುವು ಜಯಿಸಿದ್ದಾನೆ.”


ಅನೇಕ ನೀರುಗಳ ಬಳಿಯಲ್ಲಿ ವಾಸವಾಗಿರುವವಳೇ, ಬಹಳ ದ್ರವ್ಯಗಳುಳ್ಳವಳೇ, ನಿನ್ನ ಅಂತ್ಯವೂ, ನಿನ್ನ ನಾಶನದ ಕಾಲವು ಬಂತು.


ಏನೆಂದರೆ, ಪ್ರವಾದಿಗಳು ಸುಳ್ಳಾಗಿ ಪ್ರವಾದಿಸುತ್ತಾರೆ. ಯಾಜಕರು ತಮ್ಮ ಅಧಿಕಾರದಿಂದ ದೊರೆತನ ಮಾಡುತ್ತಾರೆ. ನನ್ನ ಜನರು ಅದನ್ನು ಪ್ರೀತಿ ಮಾಡುತ್ತಾರೆ. ಆದರೆ ಅಂತ್ಯದಲ್ಲಿ ನೀವು ಏನು ಮಾಡುವಿರಿ?


ಅವನು ಬಲಿಪೀಠಗಳನ್ನೂ, ಅಶೇರ ಸ್ತಂಭಗಳನ್ನೂ ಕೆಡವಿಹಾಕಿ, ಕೆತ್ತಿದ ವಿಗ್ರಹಗಳನ್ನು ಕುಟ್ಟಿ ಪುಡಿಪುಡಿಮಾಡಿ, ಇಸ್ರಾಯೇಲ್ ದೇಶದಲ್ಲೆಲ್ಲಿಯೂ ಇರುವ ಸಮಸ್ತ ವಿಗ್ರಹಗಳನ್ನು ಕೆಡವಿದ ತರುವಾಯ ಯೆರೂಸಲೇಮಿಗೆ ಹಿಂದಿರುಗಿದನು.


ದೇವರು, “ನನ್ನ ಮುಖವನ್ನು ಅವರಿಗೆ ಮರೆಮಾಡುವೆನು, ಅವರ ಅಂತ್ಯವು ಏನೆಂದು ನೋಡುವೆನು. ಅವರು ಮೂರ್ಖ ಸಂತತಿಯೇ. ನಂಬಿಕೆಯಿಲ್ಲದ ಮಕ್ಕಳೇ.


ಆಗ ದೇವರು ನೋಹನಿಗೆ, “ನಾನು ಮನುಷ್ಯರೆಲ್ಲರಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ. ಅವರಿಂದ ಭೂಮಿಯು ಹಿಂಸಾಚಾರದಿಂದ ತುಂಬಿದೆ. ನಾನು ಭೂಮಿಯೊಂದಿಗೆ ಅವರನ್ನೂ ನಾಶಮಾಡುವೆನು.


ಇದಾದನಂತರ ನಾಲ್ಕು ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತಿರುವುದನ್ನು ಕಂಡೆನು. ಅವರು ಭೂಮಿಯ ಮೇಲಾಗಲಿ, ಸಮುದ್ರದ ಮೇಲಾಗಲಿ ಅಥವಾ ಯಾವ ಮರದ ಮೇಲಾಗಲಿ ಗಾಳಿ ಬೀಸದಂತೆ ಭೂಮಿಯ ನಾಲ್ಕು ದಿಕ್ಕಿನ ಗಾಳಿಯನ್ನು ತಡೆಹಿಡಿದಿದ್ದರು.


ಅವನು ಹೊರಗೆ ಬಂದು ಭೂಮಿಯ ನಾಲ್ಕುದಿಕ್ಕುಗಳಲ್ಲಿರುವ ಗೋಗ್ ಮಾಗೋಗ್ ಎಂಬ ರಾಷ್ಟ್ರಗಳನ್ನು ಮೋಸಗೊಳಿಸಿ ಅವರನ್ನು ಯುದ್ಧಕ್ಕೆ ಕೂಡಿಸುವನು. ಅವರ ಸಂಖ್ಯೆಯು ಸಮುದ್ರತೀರದ ಮರಳಿನಷ್ಟಿರುವುದು.


‘ನಾನು ಶಾಶ್ವತವಾದ ರಾಣಿ’ ಎಂದು ನೀನು ಅಂದುಕೊಂಡದ್ದರಿಂದ ಈ ಸಂಗತಿಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೊಳ್ಳಲಿಲ್ಲ. ಅವರ ಅಂತ್ಯವನ್ನೂ ನೆನಸಿಕೊಳ್ಳಲಿಲ್ಲ.


ಇನ್ನೆಷ್ಟರವರೆಗೆ ಎಲ್ಲಾ ಸೀಮೆಯ ಹುಲ್ಲು, ಸೊಪ್ಪು ಒಣಗಿ ದೇಶವು ದುಃಖಿಸುತ್ತಿರುವುದು? ಅಲ್ಲಿನ ನಿವಾಸಿಗಳು ದುಷ್ಟರಾಗಿರುವುದರಿಂದ ಮೃಗ ಪಕ್ಷಿಗಳು ಬಡಿದುಕೊಂಡು ಹೋಗಿವೆ; ಆಹಾ, ಅವನು ನಮ್ಮ ಅಂತ್ಯ ಗತಿಯನ್ನು ನೋಡುವುದೇ ಇಲ್ಲ, ಎಂದು ಹೇಳಿದ್ದಾರಷ್ಟೆ.


ಯೆಹೋವ ದೇವರ ವಾಕ್ಯವು ನನಗೆ ಬಂದಿತು:


ಆಮೇಲೆ ನಾನು ನೀತಿವಂತರನ್ನೂ, ದುಷ್ಟರನ್ನೂ ಕಡಿದುಬಿಡುವುದರಿಂದ ನನ್ನ ಖಡ್ಗವು ದಕ್ಷಿಣದಿಂದ ಮೊದಲುಗೊಂಡು ಉತ್ತರದ ಮನುಷ್ಯರೆಲ್ಲರಿಗೆ ವಿರೋಧವಾಗಿ ಅದರ ಒರೆಯನ್ನು ಬಿಟ್ಟು ಹೋಗುವುದು.


“ ‘ದುಷ್ಟನಾದ ಭ್ರಷ್ಟ ಇಸ್ರಾಯೇಲಿನ ರಾಜಕುಮಾರನೇ, ನೀನು ಮಾಡಿದ ಅಕ್ರಮಗಳಿಂದ ನಿನಗೆ ಅಂತ್ಯ ದಿವಸವು ಬಂದಿತು.


“ ‘ನೀನು ಇಸ್ರಾಯೇಲರ ಮೇಲೆ ದೀರ್ಘ ದ್ವೇಷವಿಟ್ಟು ಅವರ ಅಪರಾಧದ ಕಾಲದಲ್ಲಿ ಅವರನ್ನು ಖಡ್ಗದ ಬಾಯಿಗೆ ಗುರಿಮಾಡಿದ ಕಾರಣ ಅವರ ಶಿಕ್ಷೆಯು ತಪ್ಪದು.


ಆ ದಿನ ಭಯಂಕರವಾದದ್ದು! ಏಕೆಂದರೆ ಯೆಹೋವ ದೇವರ ದಿವಸವು ಸಮೀಪವಾಗಿದೆ. ಸರ್ವಶಕ್ತರ ಕಡೆಯಿಂದ ಇದು ನಾಶವಾದಂತೆ ಬರುವುದು.


‘ನೀನು ಏಕೆ ನರಳಾಡುತ್ತೀ?’ ಎಂದು ಅವರು ನಿನಗೆ ಕೇಳಿದಾಗ, ನೀನು ಹೇಳಬೇಕಾದದ್ದೇನೆಂದರೆ, ‘ಆ ಸುದ್ದಿಯ ನಿಮಿತ್ತವೇ ಅದು ಬರುವುದು. ಏಕೆಂದರೆ ಆಗ ಹೃದಯಗಳೆಲ್ಲಾ ಕರಗುವುವು. ಕೈಗಳೆಲ್ಲಾ ನಿತ್ರಾಣವಾಗುವುವು. ಪ್ರತಿಯೊಂದು ಆತ್ಮವು ಕುಂದುವದು. ಎಲ್ಲಾ ಮೊಣಕಾಲುಗಳು ನೀರಿನಂತೆ ತೇವವಾಗಿರುತ್ತವೆ. ಅದು ಬರುತ್ತದೆ, ಅದು ತರಲಾಗುತ್ತದೆ,’ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು