Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 6:11 - ಕನ್ನಡ ಸಮಕಾಲಿಕ ಅನುವಾದ

11 “ ‘ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: ನೀನು ಚಪ್ಪಾಳೆ ಹೊಡೆದು ನೆಲವನ್ನೊದ್ದು ಹೀಗೆ ಹೇಳು, “ಆಹಾ!” ಇಸ್ರಾಯೇಲ್ ವಂಶದವರ ಅಸಹ್ಯವಾದ ಕೆಟ್ಟಕೆಲಸಗಳೆಷ್ಟು! ಅವರು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸತ್ತೇ ಸಾಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀನು ಚಪ್ಪಾಳೆಹೊಡೆದು ನೆಲವನ್ನು ಒದ್ದು ಹೀಗೆ ಹೇಳು, ‘ಆಹಾ, ಇಸ್ರಾಯೇಲ್ ವಂಶದವರ ಅಸಹ್ಯವಾದ ಕೆಟ್ಟಕೆಲಸಗಳೆಷ್ಟು! ಅವರು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸತ್ತೇ ಸಾಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಸರ್ವೇಶ್ವರನಾದ ದೇವರು ನುಡಿದದ್ದು : “ನೀನು ಚಪ್ಪಾಳೆ ಹೊಡೆದು ನೆಲವನ್ನೊದ್ದು ಹೀಗೆ ಹೇಳು, ‘ಅಕಟಾ, ಇಸ್ರಯೇಲ್ ವಂಶದವರ ಅಸಹ್ಯವಾದ ಕೆಟ್ಟಕೆಲಸಗಳೆಷ್ಟು! ಅವರು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸತ್ತೇ ಸಾಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನೀನು ಚಪ್ಪಾಳೆ ಹೊಡೆದು ನೆಲವನ್ನೊದ್ದು ಹೀಗೆ ಹೇಳು - ಹಾ, ಇಸ್ರಾಯೇಲ್ ವಂಶದವರ ಅಸಹ್ಯವಾದ ಕೆಟ್ಟಕೆಲಸಗಳೆಷ್ಟು! ಅವರು ಖಡ್ಗ ಕ್ಷಾಮವ್ಯಾಧಿಗಳಿಂದ ಸತ್ತೇ ಸಾಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು: “ಚಪ್ಪಾಳೆ ತಟ್ಟು, ನಿನ್ನ ಕಾಲುಗಳನ್ನು ನೆಲಕ್ಕೆ ಒದ್ದು, ‘ಅಯ್ಯೋ, ಬೇಡ!’ ಎಂದು ಹೇಳು. ಯಾಕೆಂದರೆ ಇಸ್ರೇಲ್ ಜನರು ಎಲ್ಲಾ ಅಸಹ್ಯಕರವಾದ ಮತ್ತು ದುಷ್ಕೃತ್ಯಗಳನ್ನು ಮಾಡಿದ್ದಾರೆ. ಅವರು ಯುದ್ಧದಿಂದಲೂ ಕ್ಷಾಮದಿಂದಲೂ ಭಯಂಕರವಾದ ಕಾಯಿಲೆಗಳಿಂದಲೂ ಸಾಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 6:11
23 ತಿಳಿವುಗಳ ಹೋಲಿಕೆ  

ನಿನ್ನಲ್ಲಿಯ ಮೂರನೆಯ ಒಂದು ಪಾಲು ಜನರು ವ್ಯಾಧಿಗಳಿಂದ ಸಾಯುವರು, ಕ್ಷಾಮದಿಂದ ನಿಮ್ಮಲ್ಲಿ ಅವರು ನಾಶವಾಗುವರು. ಮೂರನೆಯ ಒಂದು ಪಾಲು ನಿಮ್ಮ ಸುತ್ತಲೂ ಖಡ್ಗ ಹಿಡಿದು ಬೀಳುವರು. ಮೂರನೆಯ ಒಂದು ಪಾಲನ್ನು ಎಲ್ಲಾ ದಿಕ್ಕುಗಳಿಗೆ ಗಾಳಿಗೆ ತೂರಿ ಚದರಿಸಿ, ಅವರ ಮೇಲೆ ಖಡ್ಗವನ್ನು ಬೀಸುವೆನು.


ಆ ದಿನ ಭಯಂಕರವಾದದ್ದು! ಏಕೆಂದರೆ ಯೆಹೋವ ದೇವರ ದಿವಸವು ಸಮೀಪವಾಗಿದೆ. ಸರ್ವಶಕ್ತರ ಕಡೆಯಿಂದ ಇದು ನಾಶವಾದಂತೆ ಬರುವುದು.


ಏಕೆಂದರೆ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ; ನೀವು ಕೈತಟ್ಟಿ ಕಾಲಿನಿಂದ ತುಳಿದು ಇಸ್ರಾಯೇಲ್ ದೇಶದವರನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಅದರ ಸ್ಥಿತಿಗೆ ಸಂತೋಷಪಟ್ಟದ್ದರಿಂದ,


“ನಾನು ಖಡ್ಗ, ಬರಗಾಲ ಕ್ಷಾಮ, ದುಷ್ಟಮೃಗ ವ್ಯಾಧಿಗಳೆಂಬ ನನ್ನ ನಾಲ್ಕು ಕಠಿಣವಾದ ನ್ಯಾಯತೀರ್ಪುಗಳನ್ನು ಯೆರೂಸಲೇಮಿನ ಮೇಲೆ ಕಳುಹಿಸಿ ಮನುಷ್ಯರನ್ನೂ, ಮೃಗಗಳನ್ನೂ ಕಡಿದು ಬಿಟ್ಟ ಮೇಲೆ ಮತ್ತೆ ಏನಾಗುವುದು?


“ಯೆರೂಸಲೇಮಿನ ಪಟ್ಟಣದ ಮಧ್ಯೆ ಹಾದು ಹೋಗಿ, ಅವರ ಮಧ್ಯೆ ನಡೆಯುವ ಎಲ್ಲಾ ಅಸಹ್ಯವಾದವುಗಳ ನಿಮಿತ್ತ ನಿಟ್ಟುಸಿರು ಬಿಡುತ್ತಾ ಅಳುತ್ತಿರುವವರೆಲ್ಲರ ಹಣೆಯ ಮೇಲೆ ಗುರುತು ಹಾಕು,” ಎಂದರು.


ನಾನು ಅವರಿಗೂ, ಅವರ ತಂದೆಗಳಿಗೂ ಕೊಟ್ಟ ದೇಶದೊಳಗಿಂದ ಅವರು ನಾಶವಾಗುವವರೆಗೂ ಖಡ್ಗವನ್ನೂ, ಕ್ಷಾಮವನ್ನೂ, ವ್ಯಾಧಿಯನ್ನೂ ಅವರಲ್ಲಿ ಕಳುಹಿಸುವೆನು.’ ”


ಆಕೆಯ ಯಾತನೆಯ ದೆಸೆಯಿಂದ ಹೆದರಿ, ದೂರದಲ್ಲಿ ನಿಂತು: “ ‘ಅಯ್ಯೋ! ಅಯ್ಯೋ! ಮಹಾನಗರಿಯೇ, ಬಲಿಷ್ಠನಗರಿ ಬಾಬಿಲೋನೇ! ಒಂದೇ ತಾಸಿನಲ್ಲಿ ನಿನಗೆ ತೀರ್ಪಾಯಿತಲ್ಲಾ?’ ಎಂದು ಶೋಕಿಸುವರು.


ಆದ್ದರಿಂದ ಸರ್ವಶಕ್ತ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಎಲ್ಲಾ ಬೀದಿಗಳಲ್ಲೂ ವಿಲಾಪಗಳು, ಎಲ್ಲಾ ಸಾರ್ವಜನಿಕ ಚೌಕದಲ್ಲಿ ದುಃಖದ ಗೋಳಾಟಗಳು ಎನ್ನುವರು. ರೈತರನ್ನು ಕಣ್ಣೀರಿಡುವುದಕ್ಕೂ ಶೋಕವೃತ್ತಿಯವರನ್ನು, ಗೋಳಾಡುವುದಕ್ಕೂ ಕರೆಯಲಾಗುವುದು.


ಅಯ್ಯೋ, ಈ ದಿನವು ಘೋರವಾದದ್ದು, ಅದಕ್ಕೆ ಎಣೆ ಇಲ್ಲ; ಅದು ಯಾಕೋಬ್ಯರಿಗೆ ಇಕ್ಕಟ್ಟಿನ ದಿನ; ಆದರೂ ಅವರು ಅದರಿಂದ ಪಾರಾಗುವರು.’


“ಅವರು ಮರಣಕರವಾದ ಬೇನೆಗಳಿಂದ ಸಾಯುವರು. ಅವರಿಗೋಸ್ಕರ ಗೋಳಾಟ ಆಗುವುದಿಲ್ಲ. ಅವರಿಗೆ ಸಮಾಧಿಯಾಗುವುದಿಲ್ಲ. ಭೂಮಿಯ ಮೇಲೆ ಅವರು ಗೊಬ್ಬರವಾಗುವರು. ಖಡ್ಗದಿಂದಲೂ ಕ್ಷಾಮದಿಂದಲೂ ಸಂಹಾರವಾಗುವರು. ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗುವುವು.”


ಬೆಟ್ಟಗಳಿಗೋಸ್ಕರ ನಾನು ಅಳುವಿಕೆಯನ್ನೂ, ದುಃಖವನ್ನೂ, ಮರುಭೂಮಿಯ ಸ್ಥಳಗಳಿಗೋಸ್ಕರ ಗೋಳಾಟವನ್ನೂ ಎತ್ತುವೆನು. ಅವುಗಳ ಮೂಲಕ ಹಾದುಹೋಗದಂತೆ ಅವು ಸುಟ್ಟುಹೋಗಿದೆ. ದನಗಳ ಕೂಗು ಕಿವಿಗೆ ಬೀಳುವುದಿಲ್ಲ. ಆಕಾಶದ ಪಕ್ಷಿಗಳೂ, ಮೃಗಗಳೂ ಸಹ ಓಡಿ ಹೋಗಿವೆ.


ಓ, ನನ್ನ ತಲೆ ಚಿಲುಮೆಯೂ, ನನ್ನ ಕಣ್ಣುಗಳು ಕಣ್ಣೀರಿನ ಬುಗ್ಗೆಯಾಗಿಯೂ ಇದ್ದರೆ ಒಳ್ಳೆಯದು, ಆಗ ನನ್ನ ಜನರಲ್ಲಿ ಹತರಾದವರ ನಿಮಿತ್ತ ಹಗಲುರಾತ್ರಿ ಅಳುವೆನು.


“ಗಟ್ಟಿಯಾಗಿ ಕೂಗು, ಹಿಂತೆಗೆಯಬೇಡ. ತುತೂರಿಯಂತೆ ನಿನ್ನ ಸ್ವರವನ್ನೆತ್ತು. ನನ್ನ ಜನರಿಗೆ ಅವರ ದ್ರೋಹವನ್ನೂ ಯಾಕೋಬನ ಮನೆಯವರಿಗೆ ಅವರ ಪಾಪವನ್ನು ಘೋಷಿಸು.


ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು, ಚಪ್ಪಾಳೆ ಹೊಡೆದು ಬಿಳಾಮನಿಗೆ, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆದೆನು. ಆದರೆ ಇಗೋ, ನೀನು ಈ ಮೂರು ಸಾರಿಯೂ ಆಶೀರ್ವದಿಸಿದೆ.


ಹೀಗಿರುವುದರಿಂದ ನೀವು ವಾಸಿಸುವುದಕ್ಕೆ ಹೋಗಲು ಮನಸ್ಸು ಮಾಡುವ ಸ್ಥಳದಲ್ಲಿ ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಸಾಯುವಿರೆಂದು ಈಗ ನಿಶ್ಚಯವಾಗಿ ತಿಳಿದುಕೊಳ್ಳಿರಿ,” ಎಂದನು.


ನಾನೇ ಯೆಹೋವ ದೇವರೆಂದೂ, ನಾನು ಈ ಕೇಡನ್ನು ಮಾಡುತ್ತಿರುವೆನೆಂದೂ, ನಾನು ವ್ಯರ್ಥವಾಗಿ ಹೇಳುವುದಿಲ್ಲವೆಂದೂ ತಿಳಿದುಕೊಳ್ಳುವರು.


ಸಮಯವು ಬಂತು, ದಿನವು ಬಂದೇಬಿಟ್ಟಿತು. ಕೊಂಡುಕೊಳ್ಳುವವನಿಗೆ ಸಂತೋಷವಿಲ್ಲದಿರಲಿ, ಮಾರುವವನು ದುಃಖಿಸದಿರಲಿ. ಏಕೆಂದರೆ ಆ ಎಲ್ಲಾ ಜನಸಮೂಹದ ಮೇಲೆ ನನ್ನ ರೌದ್ರವಿದೆ.


ಹೊರಗೆ ಖಡ್ಗವೂ ಒಳಗೆ ವ್ಯಾಧಿಯೂ ಕ್ಷಾಮವೂ ಉಂಟು. ಹೊರಗಿರುವವರನ್ನು ಖಡ್ಗವು ಸಾಯಿಸುವುದು, ಪಟ್ಟಣದಲ್ಲಿರುವವರನ್ನು ವ್ಯಾಧಿಯೂ ಕ್ಷಾಮವೂ ತಿಂದುಬಿಡುವುದು.


“ಮನುಷ್ಯಪುತ್ರನೇ, ಬಾಬಿಲೋನಿನ ಅರಸನ ಖಡ್ಗವು ಬರುವ ಹಾಗೆ ನೀನು ಎರಡು ಮಾರ್ಗಗಳನ್ನು ನೇಮಿಸಿಕೋ. ಅವೆರಡು ದಾರಿಗಳು ಒಂದೇ ದೇಶದಿಂದ ಹೊರಟ ಹಾಗಿರಲಿ. ಒಂದೊಂದು ಪಟ್ಟಣಕ್ಕೆ ಹೋಗುವ ದಾರಿಯ ಮೊದಲಲ್ಲಿ ಕೈಮರವನ್ನು ಚಿತ್ರಿಸು.


“ನೀನು ಅವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ, ನಿಶ್ಚಯವಾಗಿ ಹಾಳು ಸ್ಥಳಗಳಲ್ಲಿರುವವರು ಖಡ್ಗದಿಂದ ಬೀಳುವರು. ಬಯಲಿನಲ್ಲಿರುವವರನ್ನು ಕಾಡುಮೃಗಗಳಿಗೆ ಆಹಾರವನ್ನಾಗಿ ಕೊಡುತ್ತೇನೆ. ಕೋಟೆಗಳಲ್ಲಿಯೂ ಗುಹೆಗಳಲ್ಲಿಯೂ ಇರುವವರು ವ್ಯಾಧಿಗಳಿಂದ ಸಾಯುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು