ಯೆಹೆಜ್ಕೇಲನು 48:21 - ಕನ್ನಡ ಸಮಕಾಲಿಕ ಅನುವಾದ21 “ಪರಿಶುದ್ಧ ಭಾಗವೂ ಪಟ್ಟಣದ ಸೊತ್ತಿಗೂ ಈ ಕಡೆಗೂ ಆ ಕಡೆಗೂ ಉಳಿದ ಭೂಮಿಯು ಕಾಣಿಕೆಯ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪೂರ್ವದ ಮೇರೆಯಲ್ಲಿರುವಂಥದ್ದೂ ಪಶ್ಚಿಮದಲ್ಲಿ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪಶ್ಚಿಮದ ಮೇರೆಯಲ್ಲಿರುವಂಥದ್ದೂ ಪ್ರಧಾನನಿಗಾದ ಪಾಲಿಗೆ ಎದುರಾಗಿಯೂ ಇರಬೇಕು. ಮೀಸಲಾದ ಪವಿತ್ರ ಕ್ಷೇತ್ರವೂ ಪವಿತ್ರಾಲಯವೂ ಅದರ ಮಧ್ಯದಲ್ಲಿರುವುವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಮೀಸಲಾದ ಪವಿತ್ರ ಕ್ಷೇತ್ರದ ಮತ್ತು ಪಟ್ಟಣಕ್ಕೆ ಒಳಪಟ್ಟ ಭೂಮಿಯ ಎರಡು ಕಡೆಗಳಲ್ಲಿ ಉಳಿದ ಭೂಮಿಯು ಅರಸನ ಪಾಲಾಗಿರಲಿ. ಆ ಪಾಲು ಮೀಸಲಾದ ಕ್ಷೇತ್ರದ ಪೂರ್ವದ ಕಡೆಗೆ ಇಪ್ಪತ್ತೈದು ಸಾವಿರ ಮೊಳ ಉದ್ದವು, ಮೇರೆಯ ಪಕ್ಕದಲ್ಲಿಯ ಪಶ್ಚಿಮದ ಕಡೆಗೆ ಇಪ್ಪತ್ತೈದು ಸಾವಿರ ಮೊಳ ಉದ್ದವು, ಮೇರೆಯ ಪಕ್ಕದಲ್ಲಿಯೂ ಕುಲಗಳ ಪಾಲಿನಷ್ಟು ಉದ್ದವಾಗಿ ಹಬ್ಬುವುದು; ಅದು ಪ್ರಭುವಿಗೆ ಸೇರತಕ್ಕದ್ದು. ಪವಿತ್ರಾಲಯವೂ ಮೀಸಲಾದ ಪವಿತ್ರ ಕ್ಷೇತ್ರದ ಮಧ್ಯದಲ್ಲಿರುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಮೀಸಲಾದ ಪವಿತ್ರಕ್ಷೇತ್ರದ ಮತ್ತು ರಾಜಧಾನಿಗೆ ಒಳಪಟ್ಟ ಭೂಮಿಯ ಎರಡು ಕಡೆಗಳಲ್ಲಿ ಮಿಕ್ಕ ಭೂಮಿ ರಾಜನ ಪಾಲಾಗಿರಲಿ; ಆ ಪಾಲು ಮೀಸಲಾದ ಕ್ಷೇತ್ರದ ಪೂರ್ವದ ಕಡೆ ಹನ್ನೆರಡುವರೆ ಕಿಲೋಮೀಟರ್ ಉದ್ದದ ಎಲ್ಲೆಯ ಪಕ್ಕದಲ್ಲೂ ಪೂರ್ವದ ಕಡೆ ಹನ್ನೆರಡುವರೆ ಕಿಲೋಮೀಟರ್ ಉದ್ದದ ಎಲ್ಲೆಯ ಪಕ್ಕದಲ್ಲೂ ಕುಲಗಳ ಪಾಲಿನಷ್ಟು ಉದ್ದವಾಗಿ ಹಬ್ಬುವುದು; ಅದು ರಾಜನದು; ಮೀಸಲಾದ ಪವಿತ್ರಕ್ಷೇತ್ರ ಹಾಗು ಪವಿತ್ರಾಲಯ ಅದರ ಎರಡು ಭಾಗಗಳ ಮಧ್ಯೆ ಇರುವುವು; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಮೀಸಲಾದ ಪವಿತ್ರಕ್ಷೇತ್ರದ ಮತ್ತು ರಾಜಧಾನಿಗೆ ಒಳಪಟ್ಟ ಭೂವಿುಯ ಎರಡು ಕಡೆಗಳಲ್ಲಿ ವಿುಕ್ಕ ಭೂವಿುಯು ಪ್ರಭುವಿನ ಪಾಲಾಗಿರಲಿ; ಆ ಪಾಲು ಮೀಸಲಾದ ಕ್ಷೇತ್ರದ ಮೂಡಲ ಕಡೆ ಇಪ್ಪತ್ತೈದು ಸಾವಿರ ಮೊಳ ಉದ್ದದ ಎಲ್ಲೆಯ ಪಕ್ಕದಲ್ಲಿಯೂ ಪಡುವಲ ಕಡೆ ಇಪ್ಪತ್ತೈದು ಸಾವಿರ ಮೊಳ ಉದ್ದದ ಎಲ್ಲೆಯ ಪಕ್ಕದಲ್ಲಿಯೂ ಕುಲಗಳ ಪಾಲಿನಷ್ಟು ಉದ್ದವಾಗಿ ಹಬ್ಬುವದು; ಅದು ಪ್ರಭುವಿನದು; ಮೀಸಲಾದ ಪವಿತ್ರ ಕ್ಷೇತ್ರವೂ ಪವಿತ್ರಾಲಯವೂ ಅದರ [ಎರಡು ಭಾಗಗಳ] ಮಧ್ಯದಲ್ಲಿರುವವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21-22 “ಈ ವಿಶೇಷ ಭೂಪ್ರದೇಶದ ಒಂದು ಭಾಗವು ದೇಶಾಧಿಪತಿಗೆ ಸೇರಿದೆ. ಈ ಭೂಪ್ರದೇಶವು ಚೌಕವಾಗಿದೆ. ಇದರ ಉದ್ದ 25,000 ಮೊಳ. ಇದರ ಅಗಲ 25,000 ಮೊಳ. ಈ ವಿಶೇಷ ಪ್ರದೇಶದಲ್ಲಿ ಒಂದು ಭಾಗವು ಯಾಜಕರಿಗೂ ಒಂದು ಭಾಗವು ಲೇವಿಯರಿಗೂ ಒಂದು ಭಾಗವು ದೇವಾಲಯಕ್ಕೂ ಸೇರಿವೆ. ಈ ವಿಶೇಷ ಪ್ರದೇಶದ ಕೇಂದ್ರದಲ್ಲಿ ದೇವಾಲಯವಿರುತ್ತದೆ. ಉಳಿದ ಭಾಗವೆಲ್ಲಾ ದೇಶಾಧಿಪತಿಗೆ ಸೇರಿದೆ. ಬೆನ್ಯಾಮೀನನ ಭಾಗಕ್ಕೂ ಯೆಹೂದದ ಭಾಗಕ್ಕೂ ನಡುವೆ ಇರುವ ಭೂಮಿಯು ಅಧಿಪತಿಗೆ ಸೇರಿದೆ. ಅಧ್ಯಾಯವನ್ನು ನೋಡಿ |