Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 48:19 - ಕನ್ನಡ ಸಮಕಾಲಿಕ ಅನುವಾದ

19 ಪಟ್ಟಣದಲ್ಲಿ ಸೇವೆಮಾಡುವವರು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದಲೇ ಅದರಲ್ಲಿಯೇ ಸೇವೆಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅವರು ಇಸ್ರಾಯೇಲಿನ ಯಾವ ಕುಲಕ್ಕೆ ಸೇರಿದ್ದರೂ, ಪಟ್ಟಣದಲ್ಲಿ ವಾಸಿಸುತ್ತಾ ಆ ಭೂಮಿಯನ್ನು ಬಿತ್ತುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಅವರು ಇಸ್ರಯೇಲಿನ ಯಾವ ಕುಲಕ್ಕೆ ಸೇರಿದ್ದರೂ ಪುರದಲ್ಲಿ ವಾಸಿಸುತ್ತಾ ಆ ಭೂಮಿಯನ್ನು ಕೃಷಿಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಅವರು ಇಸ್ರಾಯೇಲಿನ ಯಾವ ಕುಲಕ್ಕೆ ಸೇರಿದ್ದರೂ ಪುರದಲ್ಲಿ ವಾಸಿಸುತ್ತಾ ಆ ಭೂವಿುಯನ್ನು ಗೆಯ್ಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ನಗರದ ಕೆಲಸಗಾರರು ಈ ಜಾಗವನ್ನು ಉತ್ತು ಬೆಳೆ ಬೆಳೆಸುವರು. ಇವರು ಇಸ್ರೇಲರ ಎಲ್ಲಾ ಗೋತ್ರಕ್ಕೆ ಸೇರಿದವರಾಗಿರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 48:19
5 ತಿಳಿವುಗಳ ಹೋಲಿಕೆ  

“ ‘ನೀವು ಪಟ್ಟಣದ ಸೊತ್ತನ್ನು ಕಾಣಿಕೆಯಾದ ಪರಿಶುದ್ಧಭಾಗಕ್ಕೆ ಎದುರಾಗಿ ಐದು ಸಾವಿರ ಮೊಳ ಅಗಲವಾಗಿಯೂ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ನೇಮಿಸಬೇಕು. ಇದು ಸಮಸ್ತ ಇಸ್ರಾಯೇಲಿನ ಮನೆತನದವರಿಗೋಸ್ಕರ ಇರುವುದು.


ಕಾಣಿಕೆಯಾದ ಪರಿಶುದ್ಧಭಾಗಕ್ಕೆ ಎದುರಾಗಿರುವಂಥದ್ದೂ ಉದ್ದದಲ್ಲಿ ಉಳಿದ ಭೂಮಿಯು ಪೂರ್ವಕ್ಕೆ ಹತ್ತು ಸಾವಿರ ಮೊಳವಾಗಿಯೂ ಪಶ್ಚಿಮಕ್ಕೆ ಹತ್ತು ಸಾವಿರ ಮೊಳವಾಗಿಯೂ ಇರಬೇಕು. ಅದು ಕಾಣಿಕೆಯ ಪರಿಶುದ್ಧಭಾಗಕ್ಕೆ ಎದುರಾಗಿರಬೇಕು. ಅದರ ಆದಾಯವು ಪಟ್ಟಣದಲ್ಲಿ ಸೇವೆಮಾಡುವವರ ಆಹಾರಕ್ಕಾಗುವಷ್ಟು ಇರಬೇಕು.


ಎಲ್ಲಾ ಕಾಣಿಕೆಯ ಸ್ಥಳವು ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರಬೇಕು. ನೀವು ಪರಿಶುದ್ಧ ವಿಶೇಷ ಕಾಣಿಕೆಯನ್ನು ಚಚ್ಚೌಕವಾಗಿ ಪಟ್ಟಣದ ಸೊತ್ತಿನ ಸಂಗಡ ಅರ್ಪಿಸಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು