Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 47:18 - ಕನ್ನಡ ಸಮಕಾಲಿಕ ಅನುವಾದ

18 ಪೂರ್ವದಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯೆ ಯೊರ್ದನ್ ಹೊಳೆಯ ಮೇರೆಯಿಂದ ಲವಣ ಸಮುದ್ರದಿಂದ ಮತ್ತು ತಾಮರ್ ನೀವು ಅಳೆಯಬೇಕು. ಇದೇ ಪೂರ್ವದಿಕ್ಕಿನ ಮೇರೆಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 “ಇದು ಪೂರ್ವದಿಕ್ಕಿನ ಮೇರೆಯಾಗಿದೆ: ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯದಲ್ಲಿರುವ ಯೊರ್ದನ್ ಹೊಳೆಯು ಮೇರೆಯಾಗಿರುವುದು. ಉತ್ತರ ಮೇರೆಯಿಂದ ದಕ್ಷಿಣ ಸಮುದ್ರದವರೆಗೆ ನೀವು ಗುರುತು ಹಾಕಿಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 “ಪೂರ್ವದಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಯೇಲ್ ನಾಡಿಗೂ ಮಧ್ಯೆ ಜೋರ್ಡನ್ ಹೊಳೆ ಎಲ್ಲೆಯಾಗಿರುವುದು; ಉತ್ತರದ ಮೇರೆಯಿಂದ ಪೂರ್ವದ ಸಮುದ್ರದವರೆಗೆ ನೀವು ಗುರುತುಹಾಕಿಕೊಳ್ಳಬೇಕು. ಇದು ಪೂರ್ವದಿಕ್ಕಿನ ಮೇರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಮೂಡಲಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯೆ ಯೊರ್ದನ್ ಹೊಳೆಯು ಎಲ್ಲೆಯಾಗಿರುವದು; [ಬಡಗಣ] ಮೇರೆಯಿಂದ ಮೂಡಣ ಸಮುದ್ರದವರೆಗೆ ನೀವು ಗುರುತು ಹಾಕಿಕೊಳ್ಳಬೇಕು. ಇದು ಮೂಡಣ ಮೇರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 “ಪೂರ್ವ ಭಾಗದಲ್ಲಿ, ಮೇರೆಯು ಹವ್ರಾನ್ ಮತ್ತು ದಮಸ್ಕದ ಮಧ್ಯದಲ್ಲಿರುವ ಹಚರ್ ಐನೋನ್ ಇಲ್ಲಿಂದ ಹೊರಟು ಜೋರ್ಡನ್ ಹೊಳೆಯ ತೀರದಲ್ಲಿ ಮುಂದುವರಿದು ಗಿಲ್ಯಾದಿಗೂ ಇಸ್ರೇಲ್ ರಾಜ್ಯಕ್ಕೂ ಮಧ್ಯದಲ್ಲಿ ಹರಿದು ಪೂರ್ವದ ಸಮುದ್ರದ ಕಡೆಗೆ ಹೋಗುತ್ತದೆ. ಅಲ್ಲಿಂದ ತಾಮಾರಿಗೆ ಸೇರುತ್ತದೆ. ಇದು ಪೂರ್ವ ಕಡೆಯ ಮೇರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 47:18
12 ತಿಳಿವುಗಳ ಹೋಲಿಕೆ  

ಲೋಟನು ತನ್ನ ಕಣ್ಣುಗಳನ್ನೆತ್ತಿ ನೋಡಿ ಯೊರ್ದನಿನ ಮೈದಾನವನ್ನೆಲ್ಲಾ ಕಂಡನು. ಏಕೆಂದರೆ ಯೆಹೋವ ದೇವರು ಸೊದೋಮನ್ನೂ ಗೊಮೋರವನ್ನೂ ನಾಶ ಮಾಡುವುದಕ್ಕಿಂತ ಮುಂಚೆ, ಅದೆಲ್ಲಾ ಚೋಗರಿನವರೆಗೆ ನೀರಾವರಿ ಪ್ರದೇಶವಾಗಿದ್ದು, ಯೆಹೋವ ದೇವರ ತೋಟದಂತೆಯೂ ಈಜಿಪ್ಟ್ ದೇಶದಂತೆಯೂ ಇತ್ತು.


ಹೊಳೆ ಉಕ್ಕಿ ಬಂದರೂ ನೀರಾನೆಯು ಹೆದರುವುದಿಲ್ಲ. ಯೊರ್ದನ್ ನದಿ ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು.


ಇವರು ಆ ವರ್ಷ ಮೊದಲುಗೊಂಡು ಹದಿನೆಂಟು ವರ್ಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲರನ್ನೆಲ್ಲಾ ಬಾಧಿಸಿ ಕುಂದಿಸಿದರು.


ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಅಧಿಕ ಸಂಖೆಯಲ್ಲಿ ಪಶುಗಳು ಇದ್ದವು. ಅವರು ಯಜ್ಜೇರ್, ಗಿಲ್ಯಾದ್ ಎಂಬ ದೇಶಗಳನ್ನು ನೋಡಿದಾಗ, ಅದು ಪಶುಗಳಿಗೆ ತಕ್ಕ ಸ್ಥಳವೆಂದು ತಿಳಿದುಕೊಂಡರು.


ಆ ಕುಪ್ಪೆಗೆ ಲಾಬಾನನು ಯಗರಸಾಹದೂತ ಎಂದು ಹೆಸರಿಟ್ಟನು. ಯಾಕೋಬನು ಗಲೇದ್ ಎಂದು ಹೆಸರಿಟ್ಟನು.


ಆಗ ಅವನು ತನ್ನ ಬಂಧುಗಳನ್ನು ಕರೆದುಕೊಂಡು, ಅವನನ್ನು ಬೆನ್ನಟ್ಟಿ, ಏಳು ದಿನ ಪ್ರಯಾಣಮಾಡಿ, ಗಿಲ್ಯಾದ್ ಪರ್ವತದಲ್ಲಿ ಅವನನ್ನು ಸಂಧಿಸಿದನು.


ಆದುದರಿಂದ ಲೋಟನು ಯೊರ್ದನಿನ ಕಣಿವೆಯನ್ನೆಲ್ಲಾ ತನಗಾಗಿ ಆರಿಸಿಕೊಂಡನು. ಲೋಟನು ಪೂರ್ವದಿಕ್ಕಿನ ಕಡೆಗೆ ಹೊರಟಿದ್ದರಿಂದ, ಅವರು ಒಬ್ಬರಿಂದೊಬ್ಬರು ಪ್ರತ್ಯೇಕವಾದರು.


ಅವರು ಊಟಕ್ಕೆ ಕುಳಿತುಕೊಂಡಾಗ, ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ, ಇಷ್ಮಾಯೇಲರ ಗುಂಪು ಗಿಲ್ಯಾದಿನಿಂದ ಬರುತ್ತಿತ್ತು. ಅವರ ಒಂಟೆಗಳು ಸಾಂಬ್ರಾಣಿ, ಸುಗಂಧ ತೈಲ, ರಕ್ತಬೋಳಗಳನ್ನು ಹೊರುತ್ತಿದ್ದವು. ಅವರು ಅವುಗಳನ್ನು ಈಜಿಪ್ಟಿಗೆ ತೆಗೆದುಕೊಂಡು ಹೋಗುತ್ತಿದ್ದರು.


ಪೂರ್ವದ ಮೇರೆಗೋಸ್ಕರ ಹಚರ್ ಏನಾನಿನಿಂದ ಶೆಫಾಮಿಗೆ ಸಾಲು ಮಾಡಿಕೊಳ್ಳಿರಿ.


ಇಸ್ರಾಯೇಲನನ್ನು ಅವನ ನಿವಾಸಕ್ಕೆ ತಿರುಗಿ ಬರಮಾಡುತ್ತೇನೆ; ಅವನು ಕರ್ಮೆಲಿನಲ್ಲಿಯೂ, ಬಾಷಾನಿನಲ್ಲಿಯೂ ಮೇಯುವನು; ಅವನ ಪ್ರಾಣವು ಎಫ್ರಾಯೀಮ್ ಬೆಟ್ಟದಲ್ಲಿಯೂ, ಗಿಲ್ಯಾದಿನಲ್ಲಿಯೂ ತೃಪ್ತಿ ಹೊಂದುವುದು.”


ಹಮಾತೂ ಬೇರೋತವು, ದಮಸ್ಕದವರೆಗೂ ಹಾಮಾತಿನ ಮೇರೆಗೂ ಮಧ್ಯವಾಗಿರುವ ಸಿಬ್ರಯಿಮ್ ಹವ್ರಾನಿನ ಮೇರೆಯಲ್ಲಿರುವ ಹಾಚೇರ್ ಹತ್ತೀಕೋನಿನ ಬಳಿಯಲ್ಲಿ ಮುಗಿಯಬೇಕು.


“ಉತ್ತರ ದಿಕ್ಕಿನ ಸೈನ್ಯವನ್ನು ನಿಮ್ಮಿಂದ ದೂರಮಾಡಿ, ಅದನ್ನು ಹಾಳುಬಿದ್ದ ಬಂಜರು ಭೂಮಿಗೂ, ಅದರ ಮುಂಭಾಗವನ್ನು ಪೂರ್ವದ ಉಪ್ಪು ಸಮುದ್ರಕ್ಕೂ ಅದರ ಹಿಂಭಾಗವನ್ನು ಪಶ್ಚಿಮದ ಮೆಡಿಟರೇನಿಯನ್ ಸಮುದ್ರಕ್ಕೂ ಓಡಿಸಿಬಿಡುವೆನು. ಅದರ ದುರ್ವಾಸನೆಯು ಏರುವುದು. ಅದು ಗಬ್ಬು ನಾರುವುದು.” ಏಕೆಂದರೆ, ಆತನು ಮಹಾಕಾರ್ಯಗಳನ್ನು ಮಾಡಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು