ಯೆಹೆಜ್ಕೇಲನು 45:4 - ಕನ್ನಡ ಸಮಕಾಲಿಕ ಅನುವಾದ4 ದೇಶದ ಪರಿಶುದ್ಧ ಭಾಗವು ಯೆಹೋವ ದೇವರಿಗೆ ಸೇವೆ ಮಾಡಲು ಸಮೀಪಿಸುವಂತೆ, ಪರಿಶುದ್ಧಸ್ಥಳದ ಸೇವಕರಾದಂಥ ಯಾಜಕರದಾಗಿರಬೇಕು. ಅದು ಅವರ ಮನೆಗಳಿಗೆ ಸ್ಥಳವಾಗಿಯೂ ಪರಿಶುದ್ಧ ಸ್ಥಳಕ್ಕೆ ಪರಿಶುದ್ಧ ಜಾಗವಾಗಿಯೂ ಇರಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಇದು ದೇಶದಲ್ಲಿ ಪರಿಶುದ್ಧ ಭಾಗವೂ; ಯೆಹೋವನಿಗೆ ಸೇವೆ ಮಾಡಲು ಸಮೀಪಿಸುವಂತೆ, ಇದು ಪರಿಶುದ್ಧ ಸ್ಥಳದ ಸೇವಕರಾದಂಥ ಯಾಜಕರದಾಗಿರಬೇಕು. ಇದು ಯಾಜಕರ ಮನೆಗಳಿಗೆ ಅಗ್ರಹಾರವಾಗಿಯೂ, ಪವಿತ್ರಾಲಯಕ್ಕೆ ಪವಿತ್ರಸ್ಥಾನವಾಗಿಯೂ ಇರುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಇದು ನಾಡಿನಲ್ಲೇ ಪರಿಶುದ್ಧಭಾಗ; ಇದು ಪವಿತ್ರಾಲಯದ ಅರ್ಚಕರೂ ಸರ್ವೇಶ್ವರನ ಸನ್ನಿಧಿಸೇವಕರೂ ಆದ ಯಾಜಕರಿಗೆ ಸಲ್ಲತಕ್ಕದ್ದು; ಇದು ಯಾಜಕರ ಮನೆಗಳಿಗೆ ಅಗ್ರಹಾರವಾಗಿ ಹಾಗು ಪವಿತ್ರಾಲಯಕ್ಕೆ ಪವಿತ್ರಸ್ಥಾನವಾಗಿ ಇರುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಇದು ದೇಶದಲ್ಲಿ ಪರಿಶುದ್ಧ ಭಾಗ; ಇದು ಪವಿತ್ರಾಲಯದ ಅರ್ಚಕರೂ ಯೆಹೋವನ ಸನ್ನಿಧಿಸೇವಕರೂ ಆದ ಯಾಜಕರಿಗೆ ಸಲ್ಲತಕ್ಕದ್ದು; ಇದು ಯಾಜಕರ ಮನೆಗಳಿಗೆ ಅಗ್ರಹಾರವಾಗಿಯೂ ಪವಿತ್ರಾಲಯಕ್ಕೆ ಪವಿತ್ರಸ್ಥಾನವಾಗಿಯೂ ಇರುವದು. ಅಧ್ಯಾಯವನ್ನು ನೋಡಿ |