ಯೆಹೆಜ್ಕೇಲನು 44:4 - ಕನ್ನಡ ಸಮಕಾಲಿಕ ಅನುವಾದ4 ಆಮೇಲೆ ಅವನು ನನ್ನನ್ನು ಉತ್ತರದ ಬಾಗಿಲಿನ ಮಾರ್ಗವಾಗಿ ಆಲಯದ ಮುಂದೆ ಕರೆದುಕೊಂಡು ಹೋದನು. ನಾನು ನೋಡಿದೆ ಯೆಹೋವ ದೇವರ ಮಹಿಮೆಯು ಯೆಹೋವ ದೇವರ ಆಲಯವನ್ನು ತುಂಬಿಕೊಂಡಿತು, ನಾನು ಬೋರಲು ಬಿದ್ದೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಬಳಿಕ ಆ ಪುರುಷನು ಉತ್ತರದಿಕ್ಕಿನ ಹೆಬ್ಬಾಗಿಲಿನ ಮಾರ್ಗವಾಗಿ ನನ್ನನ್ನು ಆಲಯದ ಮುಂದೆ ಕರೆದುಕೊಂಡು ತಂದನು; ಆಹಾ, ನಾನು ನೋಡಿದ ಯೆಹೋವನ ಮಹಿಮೆಯೂ, ಯೆಹೋವನ ಆಲಯವನ್ನು ತುಂಬಿಕೊಂಡಿತು. ಅದನ್ನು ನೋಡಿ ನಾನು ಬೋರಲು ಬಿದ್ದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಬಳಿಕ ಆ ಪುರಷನು ಉತ್ತರ ಹೆಬ್ಬಾಗಿಲ ಮಾರ್ಗವಾಗಿ ನನ್ನನ್ನು ದೇವಸ್ಥಾನದ ಮುಂದುಗಡೆಗೆ ಕರೆದುತಂದನು; ಏನಾಶ್ಚರ್ಯ! ನಾನು ನೋಡುತ್ತಿದ್ದಂತೆ ಸರ್ವೇಶ್ವರನ ತೇಜಸ್ಸು ದೇವಾಲಯವನ್ನು ತುಂಬಿಕೊಂಡಿತ್ತು; ಅದನ್ನು ನೋಡಿ ಅಡ್ಡಬಿದ್ದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಬಳಿಕ ಆ ಪುರುಷನು ಬಡಗಣ ಹೆಬ್ಬಾಗಿಲ ಮಾರ್ಗವಾಗಿ ನನ್ನನ್ನು ದೇವಸ್ಥಾನದ ಮುಂದುಗಡೆಗೆ ಕರತಂದನು; ಆಹಾ, ನಾನು ನೋಡಲಾಗಿ ಯೆಹೋವನ ತೇಜಸ್ಸು ಯೆಹೋವನ ಆಲಯವನ್ನು ತುಂಬಿಕೊಂಡಿತ್ತು; ಅದನ್ನು ನೋಡಿ ಅಡ್ಡಬಿದ್ದೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಆ ಬಳಿಕ ನನ್ನನ್ನು ಉತ್ತರದ ದ್ವಾರದ ಮೂಲಕ ಆಲಯದ ಮುಂಭಾಗಕ್ಕೆ ಅವನು ಕರೆದುಕೊಂಡು ಹೋದನು. ನಾನು ನೋಡಿದಾಗ ಯೆಹೋವನ ತೇಜಸ್ಸು ಆತನ ಆಲಯವನ್ನು ತುಂಬುತ್ತಿತ್ತು. ನಾನು ಸಾಷ್ಟಾಂಗವೆರಗಿದೆನು. ಅಧ್ಯಾಯವನ್ನು ನೋಡಿ |