Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 44:16 - ಕನ್ನಡ ಸಮಕಾಲಿಕ ಅನುವಾದ

16 ಇವರು ಮಾತ್ರ ನನ್ನ ಪರಿಶುದ್ಧ ಸ್ಥಳವನ್ನು ಪ್ರವೇಶಿಸಿ, ಇವರು ಮಾತ್ರ ನನಗೆ ಸೇವೆ ಮಾಡುವುದಕ್ಕಾಗಿ ನನ್ನ ಮೇಜಿನ ಬಳಿಗೆ ಬರುವರು ಮತ್ತು ನನಗೆ ಕಾವಲುಗಾರರಾಗಿ ಸೇವೆ ಸಲ್ಲಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಅವರು ನನ್ನ ಪವಿತ್ರಾಲಯವನ್ನು ಪ್ರವೇಶಿಸಿ, ನನ್ನ ಸೇವೆ ಮಾಡುವುದಕ್ಕೆ ನನ್ನ ಯಜ್ಞವೇದಿಯನ್ನು ಸಮೀಪಿಸಿ, ನನ್ನ ಆಲಯದ ಪಾರುಪತ್ಯವನ್ನು ವಹಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಅವರು ನನ್ನ ಪವಿತ್ರಾಲಯವನ್ನು ಪ್ರವೇಶಿಸಿ, ನನ್ನ ಸೇವೆ ಮಾಡುವುದಕ್ಕೆ ನನ್ನ ವೇದಿಕೆಯನ್ನು ಸಮೀಪಿಸಿ, ನನ್ನ ಆಲಯದ ಪಾರುಪತ್ಯವನ್ನು ವಹಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅವರು ನನ್ನ ಪವಿತ್ರಾಲಯವನ್ನು ಪ್ರವೇಶಿಸಿ ನನ್ನ ಸೇವೆಮಾಡುವದಕ್ಕೆ ನನ್ನ ವೇದಿಯನ್ನು ಸಮೀಪಿಸಿ ನನ್ನ [ಆಲಯದ] ಪಾರುಪತ್ಯವನ್ನು ವಹಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 “ಅವರು ನನ್ನ ಪವಿತ್ರಸ್ಥಳವನ್ನು ಪ್ರವೇಶಿಸುವರು. ನನ್ನ ಮೇಜಿನ ಬಳಿಗೆ ನನಗೆ ಸೇವೆಮಾಡಲು ಬರುವರು. ನಾನು ಅವರಿಗೆ ವಹಿಸಿರುವ ವಸ್ತುಗಳನ್ನು ಪರಾಂಬರಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 44:16
10 ತಿಳಿವುಗಳ ಹೋಲಿಕೆ  

ಸುಮಾರು ಒಂದೂವರೆ ಮೀಟರ್ ಎತ್ತರ ಮತ್ತು ಸುಮಾರು ಒಂದು ಮೀಟರ್ ಉದ್ದ ಮತ್ತು ಅಗಲವಿರುವ ಮರದ ಬಲಿಪೀಠವಿತ್ತು. ಅದರ ಮೂಲೆಗಳು, ಅದರ ತಳ ಮತ್ತು ಅದರ ಬದಿಗಳು ಮರದಿಂದ ಆಗಿದ್ದವು. ಆ ಮನುಷ್ಯನು ನನಗೆ, “ಇದು ಯೆಹೋವ ದೇವರ ಮುಂದೆ ಇರುವ ಮೇಜು” ಎಂದು ಹೇಳಿದನು.


“ಆದರೆ ನೀವು ಯೆಹೋವ ದೇವರ ಮೇಜು ಅಶುದ್ಧ, ‘ಅದರ ಫಲವೂ, ಅದರ ಆಹಾರವೂ ಅಸಹ್ಯ,’ ಎಂದು ಹೇಳಿ ಅದನ್ನು ಅಪವಿತ್ರ ಮಾಡಿದ್ದೀರಿ.


“ನನ್ನ ಬಲಿಪೀಠದ ಮೇಲೆ ಅಪವಿತ್ರವಾದ ರೊಟ್ಟಿಯನ್ನು ಅರ್ಪಿಸುತ್ತೀರಿ. “ ‘ಯಾವುದರಲ್ಲಿ ನಿಮ್ಮನ್ನು ನಾವು ಅಪವಿತ್ರ ಮಾಡಿದ್ದೇವೆ?’ ಎಂದು ಕೇಳುತ್ತೀರಿ.” ಯೆಹೋವ ದೇವರ ಮೇಜು ಹೀನವಾದದ್ದೆಂದು ನೀವು ಹೇಳುವುದರಿಂದಲೇ!


“ಇಸ್ರಾಯೇಲರ ಮೇಲೆ ಇನ್ನು ಮುಂದೆ ಎಂದಿಗೂ ನನ್ನ ಕೋಪಾಗ್ನಿಯು ಬಾರದ ಹಾಗೆ ಪರಿಶುದ್ಧ ಸ್ಥಳವನ್ನು ಮತ್ತು ಬಲಿಪೀಠವನ್ನು ನೀವೇ ನೋಡಿಕೊಳ್ಳಬೇಕು.


ನಮ್ಮನ್ನು ಒಂದು ರಾಜ್ಯವನ್ನಾಗಿಯೂ ತಮ್ಮ ತಂದೆಯಾದ ದೇವರಿಗೆ ಸೇವೆ ಸಲ್ಲಿಸುವ ಯಾಜಕರನ್ನಾಗಿಯೂ ಮಾಡಿರುವ ಕ್ರಿಸ್ತ ಯೇಸುವಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯು, ಬಲವು ಇರಲಿ ಆಮೆನ್.


ವೈಭವದ ಮಂಚದ ಮೇಲೆ ಕುಳಿತುಕೊಂಡೆ. ಅವರ ಮುಂದೆ ನನ್ನ ಧೂಪವನ್ನು ನನ್ನ ಎಣ್ಣೆಯನ್ನು ಇಟ್ಟಿದ್ದ ಮೇಜನ್ನು ಸಿದ್ಧಮಾಡಿದೆ.


ಯೆಹೋವ ದೇವರ ಗುಡಾರದ ಸೇವೆಯನ್ನು ಮಾಡುವುದಕ್ಕೂ, ಸಮೂಹದ ಮುಂದೆ ಇರುವ ಅವರ ಸೇವೆಯಲ್ಲಿ ನಿಲ್ಲುವುದಕ್ಕೂ ಇಸ್ರಾಯೇಲರ ದೇವರು ನಿಮ್ಮನ್ನು ಹತ್ತಿರ ಬರಮಾಡಿಕೊಳ್ಳುವ ವಿಷಯದಲ್ಲಿ ಇಸ್ರಾಯೇಲರೊಳಗಿಂದಲೇ ನಿಮ್ಮನ್ನು ಪ್ರತ್ಯೇಕಿಸಿದ್ದು, ನಿಮಗೆ ಅಲ್ಪವಾಗಿ ತೋರಿತೋ?


ಆದರೆ ನನ್ನ ಹೃದಯಕ್ಕೂ, ನನ್ನ ಮನಸ್ಸಿಗೂ ಸಮರ್ಪಕವಾದದ್ದನ್ನೇ ಮಾಡುವ ನಂಬಿಗಸ್ತನಾದ ಒಬ್ಬ ಯಾಜಕನನ್ನು ನನಗೋಸ್ಕರ ಎಬ್ಬಿಸಿ, ಅವನಿಗೆ ಸ್ಥಿರವಾದ ಮನೆಯನ್ನು ಕಟ್ಟುವೆನು. ಅವನು ನನ್ನ ಅಭಿಷಿಕ್ತನ ಮುಂದೆ ನಿರಂತರವಾಗಿ ಸೇವೆಮಾಡುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು