ಅವರು ನನಗೆ, “ಮನುಷ್ಯಪುತ್ರನೇ, ನನ್ನ ಸಿಂಹಾಸನದ ಸ್ಥಳವನ್ನೂ ನನ್ನ ಅಂಗಾಲುಗಳ ಸ್ಥಳವನ್ನೂ ಮತ್ತು ನಾನು ಇಸ್ರಾಯೇಲರ ಮಧ್ಯದಲ್ಲಿ ನಿತ್ಯವಾಗಿ ವಾಸವಾಗಿರುವ ಸ್ಥಳವನ್ನೂ ನನ್ನ ಪರಿಶುದ್ಧ ಹೆಸರನ್ನೂ ಇಸ್ರಾಯೇಲಿನ ಮನೆತನದವರೂ ಎಂದರೆ ಅವರಾದರೂ ಅವರ ಅರಸರಾದರೂ ತಮ್ಮ ವ್ಯಭಿಚಾರದಿಂದಲೂ ಅವರ ಅರಸರ ಮರಣದ ಸಮಯದಲ್ಲಿ ಅವರ ಅಂತ್ಯಕ್ರಿಯೆಯ ವಿಧಿಗಳ ಅರ್ಪಣೆಯಿಂದ ಅಪವಿತ್ರಗೊಳಿಸುವುದಿಲ್ಲ.
ದೇವರ ಆಲಯಕ್ಕೂ ವಿಗ್ರಹಗಳಿಗೂ ಏನು ಒಪ್ಪಂದ? ನಾವು ಜೀವಿಸುವ ದೇವರ ಆಲಯವಾಗಿದ್ದೇವೆ. ದೇವರು ಹೀಗೆ ಹೇಳಿದ್ದಾರೆ: “ನಾನು ಅವರೊಂದಿಗೆ ವಾಸಿಸುವೆನು, ಅವರ ಮಧ್ಯದಲ್ಲಿ ತಿರುಗಾಡುವೆನು. ನಾನು ಅವರಿಗೆ ದೇವರಾಗಿರುವೆನು ಮತ್ತು ಅವರು ನನ್ನ ಜನರಾಗಿರುವರು.”
ಅವರು ಇನ್ನು ತಮ್ಮ ವಿಗ್ರಹಗಳಿಂದಲೂ ತಮ್ಮ ಅಸಹ್ಯ ವಸ್ತುಗಳಿಂದಲೂ ತಮ್ಮ ಅಕ್ರಮಗಳಿಂದಲೂ ಅಶುದ್ಧವಾಗುವುದಿಲ್ಲ. ಅವರ ಎಲ್ಲಾ ಪಾಪದ ಹಿಂಜಾರುವಿಕೆಯಿಂದಲೂ ನಾನು ಅವರನ್ನು ರಕ್ಷಿಸಿ, ಅವರನ್ನು ಶುದ್ಧಮಾಡುವೆನು. ಹೀಗೆ ಅವರು ನನ್ನ ಜನರಾಗಿರುವರು ನಾನು ಅವರಿಗೆ ದೇವರಾಗಿರುವೆನು.
“ನಿಮ್ಮ ತಾಯಿಯ ಸಂಗಡ ವಾದಮಾಡಿರಿ, ಅವಳೊಂದಿಗೆ ವಾದಮಾಡಿರಿ, ಏಕೆಂದರೆ ಅವಳು ನನ್ನ ಹೆಂಡತಿಯಲ್ಲ, ಮತ್ತು ನಾನು ಅವಳ ಗಂಡನಲ್ಲ. ಅವಳು ತನ್ನ ವ್ಯಭಿಚಾರದ ನೋಟವನ್ನು ಮತ್ತು ತನ್ನ ಸ್ತನಗಳ ಮಧ್ಯದಿಂದ ಅಪನಂಬಿಗಸ್ತಿಕೆಯನ್ನು ತ್ಯಜಿಸಲಿ.