ಯೆಹೆಜ್ಕೇಲನು 43:17 - ಕನ್ನಡ ಸಮಕಾಲಿಕ ಅನುವಾದ17 ಅದರ ಅಂಚು ನಾಲ್ಕು ಕಡೆಗೆ ಹದಿನಾಲ್ಕು ಮೊಳ ಉದ್ದವಾಗಿಯೂ, ಹದಿನಾಲ್ಕು ಮೊಳ ಅಗಲವಾಗಿಯೂ ಅದರ ಸುತ್ತಲಿರುವ ಮೇರೆಯು ಅರ್ಧ ಮೊಳವಾಗಿಯೂ ಅದರ ತಳವು ಒಂದು ಮೊಳವಾಗಿಯೂ ಇರಬೇಕು. ಅದರ ಮೆಟ್ಟಲುಗಳು ಪೂರ್ವದಿಕ್ಕಿಗೆ ಎದುರಾಗಿರಬೇಕು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ದೊಡ್ಡ ಅಂತಸ್ತು ಹದಿನಾಲ್ಕು ಮೊಳ ಉದ್ದವಾಗಿಯೂ, ಹದಿನಾಲ್ಕು ಮೊಳ ಅಗಲವಾಗಿಯೂ, ನಾಲ್ಕು ಕಡೆಗಳಲ್ಲಿ ಸಮವಾಗಿರಬೇಕು. ಸುತ್ತಣ ದಿಂಡಿನ ಅಗಲವು ಅರ್ಧ ಮೊಳ, ಕೆಳಭಾಗದ ಸುತ್ತಣ ಅಂಚಿನ ಅಗಲವು ಒಂದು ಮೊಳವಾಗಿಯೂ ಇರಬೇಕು. ಅದರ ಮೆಟ್ಟಲುಗಳು ಪೂರ್ವದಿಕ್ಕಿಗೆ ಅಭಿಮುಖವಾಗಿರಬೇಕು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ದೊಡ್ಡ ಅಂತಸ್ತು ಏಳು ಮೀಟರ್ ಉದ್ದವಾಗಿಯೂ ಏಳು ಮೀಟರ್ ಅಗಲವಾಗಿಯೂ ನಾಲ್ಕು ಪಾರ್ಶ್ವಗಳಲ್ಲಿ ಸಮವಾಗಿರಬೇಕು. ಸುತ್ತಣ ದಿಂಡಿನ ಅಗಲವು ಇಪ್ಪತ್ತೈದು ಸೆಂಟಿಮೀಟರ್; ಕೆಳಭಾಗದ ಸುತ್ತಣ ಅಂಚಿನ ಅಗಲವು ಐವತ್ತು ಸೆಂಟಿಮೀಟರ್; ಸೋಪಾನವು ಮೂಡಲಿಗೆ ಅಭಿಮುಖವಾಗಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ದೊಡ್ಡ ಅಂತಸ್ತು ಹದಿನಾಲ್ಕು ಮೊಳ ಉದ್ದವಾಗಿಯೂ ಹದಿನಾಲ್ಕು ಮೊಳ ಅಗಲವಾಗಿಯೂ ನಾಲ್ಕು ಪಾರ್ಶ್ವಗಳಲ್ಲಿ ಸಮವಾಗಿರಬೇಕು. ಸುತ್ತಣ ದಿಂಡಿನ ಅಗಲವು ಅರ್ಧ ಮೊಳ; ಕೆಳಭಾಗದ ಸುತ್ತಣ ಅಂಚಿನ ಅಗಲವು ಒಂದು ಮೊಳ; ಸೋಪಾನವು ಮೂಡಲಿಗೆ ಅಭಿಮುಖವಾಗಿರಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 ಅದರ ಮೆಟ್ಟಲು ಹದಿನಾಲ್ಕು ಮೊಳ ಅಗಲ, ಹದಿನಾಲ್ಕು ಮೊಳ ಉದ್ದವಾಗಿದ್ದು ಚೌಕವಾಗಿತ್ತು. ಅದರ ಸುತ್ತಲೂ ಇದ್ದ ಅಂಚು ಅರ್ಧ ಮೊಳ ಅಗಲವಾಗಿತ್ತು. (ಅಡಿಪಾಯದ ಸುತ್ತಲೂ ಇದ್ದ ಕಾಲುವೆಯ ಅಗಲ ಎರಡು ಮೊಳ.) ಯಜ್ಞವೇದಿಯ ಮೇಲೆ ಹತ್ತುವ ಮೆಟ್ಟಲುಗಳು ಪೂರ್ವಭಾಗದಲ್ಲಿದ್ದವು.” ಅಧ್ಯಾಯವನ್ನು ನೋಡಿ |