ಯೆಹೆಜ್ಕೇಲನು 43:11 - ಕನ್ನಡ ಸಮಕಾಲಿಕ ಅನುವಾದ11 ಅವರು ಮಾಡಿದ ಎಲ್ಲದಕ್ಕಾಗಿ ನಾಚಿಕೆಪಟ್ಟರೆ, ದೇವಾಲಯದ ರೂಪವನ್ನೂ, ಅದರ ಆಕಾರವನ್ನೂ, ಅದರ ಆಗಮನ ನಿರ್ಗಮನಗಳನ್ನೂ, ಅದರ ಎಲ್ಲಾ ನಿಯಮಗಳನ್ನೂ ಅದರ ಎಲ್ಲಾ ಕಟ್ಟಳೆಗಳನ್ನೂ ಅವರಿಗೆ ವಿವರಿಸು. ಅವರು ಅದರ ರಚನಾವಿಧಾನಗಳಿಗೆ ನಂಬಿಗಸ್ತರಾಗಿರುವಂತೆಯೂ ಅವರು ಅದರ ಎಲ್ಲಾ ಕಟ್ಟಳೆಗಳನ್ನೂ ಅನುಸರಿಸುವಂತೆಯೂ ಅವರ ಮುಂದೆಯೇ ಇವುಗಳನ್ನು ಬರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ತಾವು ನಡೆಸಿದ ದುಷ್ಕೃತ್ಯಗಳಿಗೆಲ್ಲಾ ನಾಚಿಕೆಪಟ್ಟರೆ, ನೀನು ಆಲಯದ ರೂಪವನ್ನೂ, ವ್ಯವಸ್ಥೆಯನ್ನೂ ಅದರ ಆಗಮನ ಮತ್ತು ನಿರ್ಗಮನಗಳನ್ನೂ ಮತ್ತು ಅದರ ಎಲ್ಲಾ ಕಟ್ಟಳೆಗಳನ್ನೂ, ಸಕಲ ರಚನಾವಿಧಾನಗಳನ್ನೂ, ಸಮಸ್ತ ವಿಧಿಗಳನ್ನೂ, ಸರ್ವ ನಿರ್ಮಾಣ ರೀತಿಗಳನ್ನೂ ಅವರಿಗೆ ತಿಳಿಸು. ಅವರು ಅದರ ಪೂರ್ಣಕ್ರಮವನ್ನೂ, ಎಲ್ಲಾ ವಿಧಿಗಳನ್ನೂ ಅನುಸರಿಸಿ ಕೈಕೊಳ್ಳುವಂತೆ ಅವರ ಕಣ್ಣೆದುರಿಗೆ ಬರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ತಾವು ನಡೆಸಿದ ದುಷ್ಕೃತ್ಯಗಳಿಗೆಲ್ಲಾ ನಾಚಿಕೆಪಟ್ಟರೆ, ನೀನು ದೇವಸ್ಥಾನದ ರೂಪ, ಅದರ ವ್ಯವಸ್ಥೆ, ಗಮನಾಗಮನ ನಿಯಮಗಳು, ಸಕಲ ರಚನಾ ವಿಧಾನಗಳು, ಸಮಸ್ತ ವಿಧಿಗಳು, ಸರ್ವನಿರ್ಮಾಣ ರೀತಿಗಳು, ಎಲ್ಲ ಕಟ್ಟಳೆಗಳು ಇವೆಲ್ಲವನ್ನು ಅವರಿಗೆ ತಿಳಿಸಿ, ಅವರು ಅದರ ಪೂರ್ಣಕ್ರಮವನ್ನೂ ಎಲ್ಲ ವಿಧಿಗಳನ್ನೂ ಅನುಸರಿಸಿ ಕೈಗೊಳ್ಳುವಂತೆ ಅವರ ಕಣ್ಣೆದುರಿಗೆ ಬರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ತಾವು ನಡಿಸಿದ ದುಷ್ಕೃತ್ಯಗಳಿಗೆಲ್ಲಾ ನಾಚಿಕೆಪಟ್ಟರೆ ನೀನು ದೇವಸ್ಥಾನದ ರೂಪವನ್ನೂ ವ್ಯವಸ್ಥೆಯನ್ನೂ ಗಮನಾಗಮನ ನಿಯಮಗಳನ್ನೂ ಸಕಲ ರಚನಾವಿಧಾನಗಳನ್ನೂ ಸಮಸ್ತ ವಿಧಿಗಳನ್ನೂ ಸರ್ವನಿರ್ಮಾಣರೀತಿಗಳನ್ನೂ ಎಲ್ಲಾ ಕಟ್ಟಳೆಗಳನ್ನೂ ಅವರಿಗೆ ತಿಳಿಸಿ ಅವರು ಅದರ ಪೂರ್ಣಕ್ರಮವನ್ನೂ ಎಲ್ಲಾ ವಿಧಿಗಳನ್ನೂ ಅನುಸರಿಸಿ ಕೈಕೊಳ್ಳುವಂತೆ ಅವರ ಕಣ್ಣೆದುರಿಗೆ ಬರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಅವರು ತಮ್ಮ ಎಲ್ಲಾ ಪಾಪಗಳ ನಿಮಿತ್ತ ನಾಚಿಕೆಪಡುವರು. ಆಲಯದ ವಿನ್ಯಾಸವನ್ನು ಅವರು ತಿಳಿದುಕೊಳ್ಳಲಿ. ಅದು ಹೇಗೆ ಕಟ್ಟಲ್ಪಡಬೇಕೆಂಬುದನ್ನು, ಪ್ರವೇಶ ದ್ವಾರಗಳು ಮತ್ತು ಹೊರಗೆ ಹೋಗುವ ಬಾಗಿಲುಗಳು ಎಲ್ಲಿರಬೇಕೆಂಬುದನ್ನು ಮತ್ತು ಅವುಗಳ ಮೇಲೆ ಇರಬೇಕಾದ ಎಲ್ಲಾ ಚಿತ್ರಗಳನ್ನು ಅವರು ತಿಳಿದುಕೊಳ್ಳಲಿ. ಅದರ ನಿಯಮಗಳನ್ನು, ಕಟ್ಟಳೆಗಳನ್ನು ಅವರಿಗೆ ಬೋಧಿಸಿರಿ. ಅವರು ಎಲ್ಲಾ ಧರ್ಮಬೋಧನೆಗಳನ್ನು ಅನುಸರಿಸುವಂತೆ ಎಲ್ಲಾ ಕಟ್ಟಳೆಗಳನ್ನು ಬರೆದಿಡಿರಿ. ಅಧ್ಯಾಯವನ್ನು ನೋಡಿ |