ಯೆಹೆಜ್ಕೇಲನು 42:3 - ಕನ್ನಡ ಸಮಕಾಲಿಕ ಅನುವಾದ3 ಒಳಗಿನ ಅಂಗಳಕ್ಕೆ ಇದ್ದ ಇಪ್ಪತ್ತು ಮೊಳಕ್ಕೆ ಎದುರಾಗಿಯೂ ಹೊರಗಿನ ಅಂಗಳಕ್ಕೆ ಇದ್ದ ಕಲ್ಲು ಹಾಸಿದ ನೆಲಕ್ಕೆ ಎದುರಾಗಿಯೂ ಮೂರು ಅಂತಸ್ತುಗಳಲ್ಲಿಯೂ ಪಡಸಾಲೆಗಳ ಮೇಲೆ ಪಡಸಾಲೆಗಳಿದ್ದವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಒಳಗಿನ ಅಂಗಳಕ್ಕೆ ಸೇರಿದ ಇಪ್ಪತ್ತು ಮೊಳಕ್ಕೆ ಎದುರಾಗಿಯೂ, ಹೊರಗಿನ ಅಂಗಳದ ಕಲ್ಲುಹಾಸಿದ ನೆಲಕ್ಕೆ ಎದುರಾಗಿಯೂ ಮೂರು ಅಂತಸ್ತುಗಳಿದ್ದವು ಅವುಗಳಲ್ಲಿ ಪಡಸಾಲೆಗಳಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಒಳಗಣ ಪ್ರಾಕಾರಕ್ಕೆ ಸೇರಿದ ಹತ್ತು ಮೀಟರ್ ಅಗಲದ ದೀಕ್ಷಿತರ ಪ್ರಾಕಾರಕ್ಕೂ ಹೊರಗಣ ಪ್ರಾಕಾರದ ನೆಲಗಟ್ಟಿಗೂ ನಡುವೆಯಿದ್ದ ಆ ಪ್ರದೇಶ ಇಪ್ಪತ್ತೈದು ಮೀಟರ್ ಅಗಲ. ಅಲ್ಲಿನ ಎರಡು ಸಾಲುಗಳ ಮೂರನೆಯ ಅಂತಸ್ತಿನ ಅಂಚಿನ ದಾರಿಗಳು ಒಂದಕ್ಕೊಂದು ಎದುರಾಗಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಒಳಗಣ ಪ್ರಾಕಾರಕ್ಕೆ ಸೇರಿದ ಇಪ್ಪತ್ತು ಮೊಳ ಅಗಲದ ದೀಕ್ಷಿತರ ಪ್ರಾಕಾರಕ್ಕೂ ಹೊರಗಣ ಪ್ರಾಕಾರದ ನೆಲಗಟ್ಟಿಗೂ ನಡುವೆಯಿದ್ದ ಆ ಪ್ರದೇಶವು ಐವತ್ತು ಮೊಳ ಅಗಲ; [ಅಲ್ಲಿನ ಎರಡು ಸಾಲುಗಳ] ಮೂರನೆಯ ಅಂತಸ್ತಿನ ಅಂಚಿನ ದಾರಿಗಳು ಒಂದಕ್ಕೊಂದು ಎದುರಾಗಿದ್ದವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಆ ಕಟ್ಟಡವು ಮೂರು ಅಂತಸ್ತಿನಷ್ಟು ಎತ್ತರವಿದ್ದು ಅದಕ್ಕೆ ಅನೇಕ ಮೇಲಂತಸ್ತುಗಳಿದ್ದವು. ಇಪ್ಪತ್ತು ಮೊಳದ ಒಳಗಿನ ಪ್ರಾಕಾರವು ಆಲಯಕ್ಕೂ ಕಟ್ಟಡಕ್ಕೂ ನಡುವೆ ಇತ್ತು. ಎದುರಿನ ಕೋಣೆಗಳು ಹೊರಗಿನ ಪ್ರಾಕಾರದ ನೆಲಗಟ್ಟಿಗೆ ಮುಖಮಾಡಿದ್ದವು. ಅಧ್ಯಾಯವನ್ನು ನೋಡಿ |