Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 41:7 - ಕನ್ನಡ ಸಮಕಾಲಿಕ ಅನುವಾದ

7 ಸುತ್ತಣ ಅಂತಸ್ತುಗಳು ಮೇಲೆ ಮೇಲೆ ಹೋದ ಹಾಗೆ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂದಿತು. ಅವು ಮನೆಯನ್ನು ಸುತ್ತಿಕೊಂಡು ಮೇಲೆ ಮೇಲೆ ಹೋದ ಹಾಗೆಲ್ಲಾ ಅದನ್ನು ಬಿಗಿಯಾಗಿ ಹಿಡಿದುಕೊಂಡಂತೆ ಇದ್ದವು; ಹೀಗೆ ಮೇಲಿನ ಅಂತಸ್ತುಗಳು ಮನೆಯ ಕಡೆಗೆ ಅಗಲವಾಗುತ್ತಾ ಬಂದವು; ಕೆಳಗಿನ ಅಂತಸ್ತಿನಿಂದ ಮಧ್ಯದ ಅಂತಸ್ತಿನ ಮಾರ್ಗವಾಗಿ ಮೇಲಿನ ಅಂತಸ್ತಿಗೆ ಹತ್ತುತ್ತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಸುತ್ತಣ ಅಂತಸ್ತುಗಳು ಮೇಲೆ ಹೋದ ಹಾಗೆಲ್ಲಾ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂದಿತು. ಅವು ದೇವಸ್ಥಾನವನ್ನು ಸುತ್ತಿಕೊಂಡು ಮೇಲೆ ಹೋದ ಹಾಗೆಲ್ಲಾ ಅದನ್ನು ಬಿಗಿಯಾಗಿ ತಬ್ಬಿಕೊಂಡಂತೆ ಕಟ್ಟಲ್ಪಟ್ಟಿತ್ತು. ಹೀಗೆ ಮೇಲಿನ ಅಂತಸ್ತುಗಳು ದೇವಸ್ಥಾನದ ಕಡೆಗೆ ಅಗಲವಾಗುತ್ತಾ ಬಂದವು. ಕೆಳಗಿನ ಅಂತಸ್ತಿನಿಂದ ಮಧ್ಯದ ಅಂತಸ್ತಿನ ಮಾರ್ಗವಾಗಿ ಮೇಲಿನ ಅಂತಸ್ತಿಗೆ ಹತ್ತುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಸುತ್ತಣ ಅಂತಸ್ತುಗಳು ಮೇಲೆ ಮೇಲೆ ಹೋದಹಾಗೆಲ್ಲಾ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂದಿತು; ಅವು ದೇವಸ್ಥಾನವನ್ನು ಸುತ್ತಿಕೊಂಡು ಮೇಲೆ ಮೇಲೆ ಹೋದಹಾಗೆಲ್ಲಾ ಅದನ್ನು ಬಿಗಿಬಿಗಿಯಾಗಿ ತಬ್ಬಿಕೊಂಡಂತೆ ಇದ್ದವು. ಹೀಗೆ ಮೇಲು ಮೇಲಿನ ಅಂತಸ್ತುಗಳು ದೇವಸ್ಥಾನದ ಕಡೆಗೆ ಅಗಲವಾಗುತ್ತಾ ಬಂದವು; ಕೆಳಗಣ ಅಂತಸ್ತಿನಿಂದ ನಡುವಣ ಅಂತಸ್ತಿನ ಮಾರ್ಗವಾಗಿ ಮೇಲಣ ಅಂತಸ್ತಿಗೆ ಹತ್ತುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಸುತ್ತಣ ಅಂತಸ್ತುಗಳು ಮೇಲೆ ಮೇಲೆ ಹೋದ ಹಾಗೆಲ್ಲಾ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂತು; ಅವು ದೇವಸ್ಥಾನವನ್ನು ಸುತ್ತಿಕೊಂಡು ಮೇಲೆ ಮೇಲೆ ಹೋದ ಹಾಗೆಲ್ಲಾ ಅದನ್ನು ಬಿಗಿಬಿಗಿಯಾಗಿ ತಬ್ಬಿಕೊಂಡಂತೆ ಇದ್ದವು. ಹೀಗೆ ಮೇಲುಮೇಲಿನ ಅಂತಸ್ತುಗಳು ದೇವಸ್ಥಾನದ ಕಡೆಗೆ ಅಗಲವಾಗುತ್ತಾ ಬಂದವು; ಕೆಳಗಣ ಅಂತಸ್ತಿನಿಂದ ನಡುವಣ ಅಂತಸ್ತಿನ ಮಾರ್ಗವಾಗಿ ಮೇಲಣ ಅಂತಸ್ತಿಗೆ ಹತ್ತುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಪ್ರತಿ ಅಂತಸ್ತು ಅದರ ಕೆಳಗಿನ ಅಂತಸ್ತಿಗಿಂತ ಅಗಲವಾಗಿದ್ದವು. ಆಲಯದ ಸುತ್ತ ಇದ್ದ ಕೋಣೆಗಳ ಗೋಡೆಗಳು ಮೇಲಕ್ಕೆ ಹೋದಂತೆ ಕಿರಿದಾಗಿದ್ದವು. ಹೀಗೆ ಕೊನೆ ಅಂತಸ್ತಿನ ಕೋಣೆಗಳು ಕೆಳಗಣ ಕೋಣೆಗಳಿಗಿಂತ ಹೆಚ್ಚು ಅಗಲವಾಗಿದ್ದವು. ಮಧ್ಯ ಅಂತಸ್ತಿನ ಮೂಲಕ ಒಂದು ನಿಚ್ಚಣಿಕೆಯು ಕೆಳಗಿನ ಅಂತಸ್ತಿನಿಂದ ಕೊನೆಯ ಅಂತಸ್ತಿನವರೆಗೆ ಹೋಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 41:7
4 ತಿಳಿವುಗಳ ಹೋಲಿಕೆ  

ಮಧ್ಯ ಕೊಠಡಿಯ ಬಾಗಿಲು ಆಲಯದ ದಕ್ಷಿಣ ಭಾಗದಲ್ಲಿ ಇತ್ತು. ಅಲ್ಲಿಂದ ಮಧ್ಯ ಕೊಠಡಿಗೂ, ಮಧ್ಯ ಕೊಠಡಿಯಿಂದ ಮೂರನೆಯ ಕೊಠಡಿಗೂ ಹತ್ತಲು ಸುರುಳಿಯಾಕಾರದ ಮೆಟ್ಟಲುಗಳಿದ್ದವು.


ಆದ್ದರಿಂದ ಕ್ರಿಸ್ತ ಯೇಸುವಿನ ವಿಷಯವಾದ ಪ್ರಾಥಮಿಕ ಉಪದೇಶಗಳನ್ನು ಬಿಟ್ಟು, ನಿರ್ಜೀವ ಕ್ರಿಯೆಗಳಿಂದ ದೇವರ ಕಡೆಗೆ ತಿರುಗಿಕೊಳ್ಳುವುದೂ ದೇವರಲ್ಲಿ ನಂಬಿಕೆಯಿಡುವುದೂ


ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದ್ದರೂ ಅದು ಬೆಳೆದಾಗ, ಎಲ್ಲಾ ಸಸ್ಯಗಳಿಗಿಂತಲೂ ದೊಡ್ಡದಾಗಿ ಮರವಾಯಿತು. ಹೀಗೆ ಆಕಾಶದ ಪಕ್ಷಿಗಳು ಬಂದು, ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸಮಾಡುತ್ತವೆ.”


ಕಟ್ಟಡದ ಹೊರಗಿನ ಗೋಡೆಗಳ ಸುತ್ತಲೂ, ಸೊಲೊಮೋನನು ಅನೇಕ ಕೋಣೆಗಳ ಸಂಕೀರ್ಣವನ್ನು ಎರಡೂ ಬದಿಗಳಲ್ಲಿ ನಿರ್ಮಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು