ಯೆಹೆಜ್ಕೇಲನು 41:25 - ಕನ್ನಡ ಸಮಕಾಲಿಕ ಅನುವಾದ25 ಆಲಯದ ಬಾಗಿಲುಗಳ ಮೇಲೆ ಕೆರೂಬಿಗಳೂ ಖರ್ಜೂರದ ಮರಗಳೂ ಗೋಡೆಗಳ ಮೇಲೆ ಚಿತ್ರಿತವಾಗುವ ಹಾಗೆಯೇ ಚಿತ್ರಿತವಾಗಿದ್ದವು. ದ್ವಾರಾಂಗಣದ ಮುಂದೆ ಹೊರಗಡೆಯಲ್ಲಿ ದಪ್ಪವಾದ ಹಲಗೆಗಳಿದ್ದವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ಆ ಬಾಗಿಲುಗಳಲ್ಲಿ ಅಂದರೆ ಪರಿಶುದ್ಧ ಸ್ಥಳದ ಬಾಗಿಲುಗಳಲ್ಲಿ ಕೆರೂಬಿಗಳ ಮತ್ತು ಖರ್ಜೂರ ಮರಗಳ ಚಿತ್ರಗಳು ಗೋಡೆಗಳಲ್ಲಿ ಚಿತ್ರಿಸಲ್ಪಟ್ಟ ಹಾಗೆಯೇ ಇದ್ದವು. ದ್ವಾರಮಂಟಪದ ಹೊರಗಡೆ ಮರದ ಹಲಗೆಗಳಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ಆ ಕದಗಳಲ್ಲಿ, ಅಂದರೆ ಪರಿಶುದ್ಧ ಸ್ಥಳದ ಕದಗಳಲ್ಲಿ ಕೆರೂಬಿಗಳು ಹಾಗು ಖರ್ಜೂರ ವೃಕ್ಷಗಳು ಗೋಡೆಗಳಲ್ಲಿ ಚಿತ್ರಿತವಾಗಿದ್ದ ಹಾಗೆಯೇ ಚಿತ್ರಿತವಾಗಿದ್ದವು. ದ್ವಾರಮಂಟಪದ ಹೊರಗಡೆ ಮರದ ಸೂರು ಇತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 ಆ ಕದಗಳಲ್ಲಿ, ಅಂದರೆ ಪರಿಶುದ್ಧಸ್ಥಳದ ಕದಗಳಲ್ಲಿ ಕೆರೂಬಿಗಳೂ ಖರ್ಜೂರ ವೃಕ್ಷಗಳೂ ಗೋಡೆಗಳಲ್ಲಿ ಚಿತ್ರಿಸಲ್ಪಟ್ಟ ಹಾಗೆಯೇ ಚಿತ್ರಿತವಾಗಿದ್ದವು; ದ್ವಾರಮಂಟಪದ ಹೊರಗಡೆ ಮರದ ಸೂರು ಇತ್ತು ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್25 ಅವುಗಳ ಮೇಲೆ ಕೆರೂಬಿದೂತರ ಮತ್ತು ಖರ್ಜೂರ ವೃಕ್ಷದ ಚಿತ್ರಗಳನ್ನು ಕೆತ್ತಲಾಗಿತ್ತು. ಗೋಡೆಗಳಲ್ಲಿ ಹೇಗೆ ಕೆತ್ತಲ್ಪಟ್ಟಿತ್ತೋ ಅದೇ ರೀತಿಯಲ್ಲಿ, ಕೈಸಾಲೆಯ ಮುಂದೆ ಒಂದು ಮರದಿಂದ ಮಾಡಿದ ಸೂರು ಇತ್ತು. ಅಧ್ಯಾಯವನ್ನು ನೋಡಿ |