ಯೆಹೆಜ್ಕೇಲನು 41:2 - ಕನ್ನಡ ಸಮಕಾಲಿಕ ಅನುವಾದ2 ಬಾಗಿಲಿನ ಅಗಲವು ಸುಮಾರು ಐದು ಮೀಟರ್ ಮತ್ತು ಅದರ ಎರಡೂ ಬದಿಗಳಲ್ಲಿ ಗೋಡೆಗಳ ಅಗಲ ಸುಮಾರು ಎರಡೂವರೆ ಮೀಟರ್. ಅವನು ಮುಖ್ಯಸಭಾಂಗಣವನ್ನೂ ಅಳೆದನು. ಅದು ಸುಮಾರು ಇಪ್ಪತ್ತೊಂದು ಮೀಟರ್ ಉದ್ದ ಮತ್ತು ಸುಮಾರು ಹನ್ನೊಂದು ಮೀಟರ್ ಅಗಲವಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ದ್ವಾರದ ಅಗಲವು ಹತ್ತು ಮೊಳಗಳೂ, ದ್ವಾರದ ಎರಡು ಪಕ್ಕದ ಗೋಡೆಗಳ ಅಗಲವು ಐದೈದು ಮೊಳಗಳೂ ಆಗಿದ್ದವು. ಅವನು ಪರಿಶುದ್ಧ ಸ್ಥಳವನ್ನು ಅಳತೆಮಾಡಿದಾಗ ಅದರ ಉದ್ದ ನಲ್ವತ್ತು ಮೊಳಗಳೂ, ಅಗಲ ಇಪ್ಪತ್ತು ಮೊಳಗಳೂ ಇದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ದ್ವಾರದ ಅಗಲ ಐದು ಮೀಟರು ದ್ವಾರದ ಎರಡು ಪಕ್ಕದ ಗೋಡೆಗಳ ಅಗಲ ಎರಡುವರೆ ಎರಡುವರೆ ಮೀಟರ್, ಪರಿಶುದ್ಧ ಸ್ಥಳದ ಉದ್ದ ಇಪ್ಪತ್ತು ಮೀಟರ್, ಅಗಲ ಹತ್ತು ಮೀಟರ್ ಇದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ದ್ವಾರದ ಎರಡು ಪಕ್ಕದ ಗೋಡೆಗಳ ಅಗಲ ಐದೈದು ಮೊಳ, ಪರಿಶುದ್ಧ ಸ್ಥಳದ ಉದ್ದ ನಾಲ್ವತ್ತು ಮೊಳ, ಅಗಲ ಇಪ್ಪತ್ತು ಮೊಳ ಇದ್ದವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ಅದರ ಬಾಗಿಲು ಹತ್ತು ಮೊಳ ಅಗಲವಾಗಿದ್ದು ಅದರ ಎರಡು ಬದಿಯೂ ಐದೈದು ಮೊಳವಿದ್ದವು. ಅವನು ಆ ಕೋಣೆಯ ಅಳತೆ ತೆಗೆದನು. ಅದು ನಲವತ್ತು ಮೊಳ ಉದ್ದ, ಇಪ್ಪತ್ತು ಮೊಳ ಅಗಲವಿತ್ತು. ಅಧ್ಯಾಯವನ್ನು ನೋಡಿ |