Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 41:17 - ಕನ್ನಡ ಸಮಕಾಲಿಕ ಅನುವಾದ

17 ಬಾಗಿಲಿನ ಮೇಲಕ್ಕೂ ಒಳಗಿನ ಆಲಯದವರೆಗೂ ಮತ್ತು ಹೊರಗೂ ಸುತ್ತಲೂ ಇದ್ದ ಗೋಡೆ, ಹೀಗೆ ಒಳಗೂ ಹೊರಗೂ ಎಲ್ಲವನ್ನೂ ಅಳೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ದ್ವಾರದಿಂದ ಗರ್ಭಗೃಹದವರೆಗೂ ಮತ್ತು ಗೃಹದ ಗೋಡೆಗೆಲ್ಲಾ ಸುತ್ತುಮುತ್ತಲೂ ಕೆರೂಬಿಗಳ ಮತ್ತು ಖರ್ಜೂರ ಮರಗಳ ಚಿತ್ರಗಳಿಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ನೆಲದಿಂದ ಕಿಟಕಿಗಳವರೆಗೂ ದ್ವಾರದ ಮೇಲೂ ಗರ್ಭಗೃಹದ ಮತ್ತು ಈಚಿನ ಗೃಹದ ಗೋಡೆಗೆಲ್ಲಾ ಸುತ್ತುಮುತ್ತಲು ಹಲಗೆಗಳನ್ನು ಚೌಕಚೌಕವಾಗಿ ಹೊದಿಸಲಾಗಿತ್ತು. ಕಿಟಕಿಗಳ ಪಕ್ಕಗಳಿಗೂ ಹಲಿಗೆಯ ಹೊದಿಕೆಯಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ನೆಲದಿಂದ ಕಿಟಕಿಗಳವರೆಗೂ ದ್ವಾರದ ಮೇಲೂ ಗರ್ಭಗೃಹದ ಮತ್ತು ಈಚಿನ ಗೃಹದ ಗೋಡೆಗೆಲ್ಲಾ ಸುತ್ತುಮುತ್ತಲು ಹಲಿಗೆಗಳು ಚೌಕಚೌಕವಾಗಿ ಹೊದಿಸಲ್ಪಟ್ಟಿದ್ದವು; ಕಿಟಕಿಗಳ [ಪಕ್ಕಗಳಿಗೂ ಹಲಿಗೆಯ] ಹೊದಿಕೆಯಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಬಾಗಿಲಿನ ಮೇಲೆಯೂ ಒಳಗಿನ ಮತ್ತು ಹೊರಗಿನ ಕೋಣೆಗಳ ಗೋಡೆಗಳಲ್ಲಿ

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 41:17
3 ತಿಳಿವುಗಳ ಹೋಲಿಕೆ  

ಹೀಗೆ ಅವನು ಒಳಗಿನ ಆಲಯದ ಅಳತೆಮಾಡಿ ಮುಗಿಸಿದ ಮೇಲೆ ನನ್ನನ್ನು ಪೂರ್ವದ ಕಡೆಗೆ ಅಭಿಮುಖವಾಗಿರುವ ಬಾಗಿಲಿನಿಂದ ಹೊರಗೆ ತಂದು ಅದನ್ನು ಸುತ್ತಲಾಗಿ ಅಳೆದನು.


ಹಾಗೆಯೇ ಗರ್ಭಗೃಹ, ಪ್ರಾಕಾರದಲ್ಲಿನ ದ್ವಾರಮಂಟಪಗಳು, ಹೊಸ್ತಿಲುಗಳು ಮತ್ತು ಇಕ್ಕಟ್ಟಾದ ಕಿಟಕಿಗಳನ್ನೂ ಮತ್ತು ಅದರ ಸುತ್ತಲೂ ಇದ್ದಂತಹ ಮೂರು ಅಂತಸ್ತುಗಳಲ್ಲಿ ಬಾಗಿಲಿಗೆ ಎದುರಾಗಿ ಸುತ್ತಲೂ ಮರದಿಂದ ಹೊದಿಕೆಯಾಗಿದ್ದವು. ನೆಲ, ಕಿಟಕಿಯವರೆಗಿನ ಗೋಡೆ ಮತ್ತು ಕಿಟಕಿಗಳನ್ನು ಮುಚ್ಚಲಾಯಿತು.


ಅದು ಕೆರೂಬಿಗಳು ಮತ್ತು ಖರ್ಜೂರದ ಮರಗಳ ಚಿತ್ರಗಳಿಂದ ಕೂಡಿತ್ತು. ಕೆರೂಬಿ ಮತ್ತು ಕೆರೂಬಿಗಳ ಮಧ್ಯೆ ಖರ್ಜೂರದ ಮರವಿತ್ತು ಮತ್ತು ಪ್ರತಿಯೊಂದು ಕೆರೂಬಿಗೂ ಎರಡೆರಡು ಮುಖಗಳು ಇದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು