ಯೆಹೆಜ್ಕೇಲನು 40:13 - ಕನ್ನಡ ಸಮಕಾಲಿಕ ಅನುವಾದ13 ಆಗ ಅವನು, ಒಂದು ಕೋಣೆಯ ಉಪವಿಭಾಗದ ಮಾಳಿಗೆಯಿಂದ ಇನ್ನೊಂದು ಕೋಣೆಯ ಉಪವಿಭಾಗದ ಮಾಳಿಗೆಯವರೆಗೆ ಅಳೆದನು. ಆ ದ್ವಾರದಿಂದ ಈ ದ್ವಾರಕ್ಕೇರುವ ಅಗಲವು ಸುಮಾರು ಹದಿಮೂರು ಮೀಟರಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಅವನು ಒಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಗಡೆಯಿಂದ ಇನ್ನೊಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಗಡೆ ಅಂದರೆ ಒಂದು ಕೋಣೆಯ ಬಾಗಿಲಿಂದ ಇನ್ನೊಂದು ಕೋಣೆಯ ಬಾಗಿಲಿಗೆ ಹೆಬ್ಬಾಗಿಲಿನ ಅಗಲವನ್ನು ಅಳೆಯಲು ಇಪ್ಪತ್ತೈದು ಮೊಳವಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಅವನು ಒಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಕೊನೆಯಿಂದ ಇನ್ನೊಂದು ಕಡೆಯ ಗೋಡೇಕೋಣೆಗಳ ಮಾಳಿಗೆಯ ಹೊರ ಕೊನೆಗೆ, ಅಂದರೆ ಒಂದು ಕೋಣೆಯ ಬಾಗಿಲಿನಿಂದ ಇನ್ನೊಂದು ಕೋಣೆಯ ಬಾಗಿಲಿಗೆ ಹೆಬ್ಬಾಗಿಲಿನ ಅಗಲವನ್ನು ಅಳೆಯಲು ಹನ್ನೆರಡುವರೆ ಮೀಟರಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಅವನು ಒಂದು ಕಡೆಯ ಗೋಡೇಕೋಣೆಗಳ ಮಾಳಿಗೆಯ ಹೊರಕೊನೆಯಿಂದ ಇನ್ನೊಂದು ಕಡೆಯ ಗೋಡೇಕೋಣೆಗಳ ಮಾಳಿಗೆಯ ಹೊರಕೊನೆಗೆ ಅಂದರೆ [ಒಂದು ಕೋಣೆಯ] ಬಾಗಿಲಿನಿಂದ [ಇನ್ನೊಂದು ಕೋಣೆಯ] ಬಾಗಿಲಿಗೆ ಹೆಬ್ಬಾಗಿಲಿನ ಅಗಲವನ್ನು ಅಳೆಯಲು ಇಪ್ಪತೈದು ಮೊಳವಿತ್ತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಅವನು ಆ ಕೋಣೆಯ ಹೊರಭಾಗದ ತುದಿಯಿಂದ ಇನ್ನೊಂದು ಎದುರಿಗಿದ್ದ ಕೋಣೆಯ ಹೊರಭಾಗದ ತುದಿಯ ತನಕ ಅಳತೆ ಮಾಡಿದಾಗ ಅದು ಇಪ್ಪತ್ತೈದು ಮೊಳವಿತ್ತು. ಅದರ ಬಾಗಿಲುಗಳು ಎದುರುಬದುರಾಗಿದ್ದವು. ಅಧ್ಯಾಯವನ್ನು ನೋಡಿ |