Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 39:12 - ಕನ್ನಡ ಸಮಕಾಲಿಕ ಅನುವಾದ

12 “ ‘ಇಸ್ರಾಯೇಲನ ಮನೆತನದವರು ದೇಶವನ್ನು ಶುದ್ಧಮಾಡುವ ಹಾಗೆ ಅವರನ್ನು ಏಳು ತಿಂಗಳುಗಳವರೆಗೂ ಸಮಾಧಿಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಇಸ್ರಾಯೇಲರು ದೇಶವನ್ನು ಶುದ್ಧಿಮಾಡುವುದಕ್ಕಾಗಿ ಏಳು ತಿಂಗಳು ಅವರನ್ನು ಸಮಾಧಿ ಮಾಡುತ್ತಲೇ ಇರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಇಸ್ರಯೇಲರು ನಾಡನ್ನು ಶುದ್ಧಿಮಾಡುವುದಕ್ಕಾಗಿ ಏಳು ತಿಂಗಳು ಅವರನ್ನು ಹೂಣುತ್ತಲೇ ಇರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಇಸ್ರಾಯೇಲ್ಯರು ದೇಶವನ್ನು ಶುದ್ಧಿಮಾಡುವದಕ್ಕಾಗಿ ಏಳು ತಿಂಗಳು ಅವರನ್ನು ಹೂಣುತ್ತಲೇ ಇರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಇವರನ್ನೆಲ್ಲಾ ಸಮಾಧಿ ಮಾಡಲು ಇಸ್ರೇಲರಿಗೆ ಏಳು ತಿಂಗಳು ಬೇಕಾಗುವದು. ತಮ್ಮ ರಾಜ್ಯವನ್ನು ಶುದ್ಧಪಡಿಸಲು ಅವರು ಹಾಗೆ ಮಾಡಲೇಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 39:12
7 ತಿಳಿವುಗಳ ಹೋಲಿಕೆ  

ಅವನ ಶವ ರಾತ್ರಿಯಲ್ಲಿ ಮರದ ಮೇಲಿರಬಾರದು. ಅವನನ್ನು ಅದೇ ದಿವಸದಲ್ಲಿ ಹೂಣಬೇಕು. ಏಕೆಂದರೆ ಮರಕ್ಕೆ ತೂಗಹಾಕಲಾದವನು ದೇವರ ಶಾಪವನ್ನು ಹೊಂದಿದವನು. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ಭೂಮಿಯು ಅಶುದ್ಧವಾಗಬಾರದು.


ದೇಶವನ್ನು ಶುದ್ಧೀಕರಿಸುವ ಹಾಗೆ ಅದರ ಮೇಲೆ ಮಿಕ್ಕವರನ್ನು ಹೂಳಿಡುವುದಕ್ಕೆ ಯಾವಾಗಲೂ ದೇಶವನ್ನು ಹಾದುಹೋಗುವ ಮನುಷ್ಯರನ್ನೇ ನಿರಂತರವಾಗಿ ನೇಮಿಸುವರು. “ ‘ಮತ್ತು ಇವರು ಏಳು ತಿಂಗಳುಗಳಾದ ಮೇಲೆ ಹುಡುಕುವರು.


ಆ ನಗರಕ್ಕೆ ಹಾಮೋನ ಎಂದು ಹೆಸರಾಗುವದು, ಹೀಗೆ ಅವರು ದೇಶವನ್ನು ಶುದ್ಧಿಮಾಡುವರು.’


“ಇದಲ್ಲದೆ ಬಯಲಿನಲ್ಲಿ ಖಡ್ಗದಿಂದ ಹತನಾದ ವ್ಯಕ್ತಿಯನ್ನು ಮುಟ್ಟಿದವರೂ ಅಥವಾ ಬೇರೆ ಯಾವ ಮನುಷ್ಯನ ಶವವಾಗಲಿ, ಮನುಷ್ಯನ ಎಲುಬನ್ನಾಗಲಿ, ಸಮಾಧಿಯನ್ನಾಗಲಿ ಮುಟ್ಟಿದವರೆಲ್ಲರೂ ಏಳು ದಿವಸ ಅಪವಿತ್ರರಾಗಿರುವರು.


“ ‘ಆ ದಿನದಲ್ಲಿ ನಾನು ಗೋಗನಿಗೆ ಇಸ್ರಾಯೇಲಿನ ಸಮಾಧಿಗಳಲ್ಲಿ ಸ್ಥಳವನ್ನು ಕೊಡುತ್ತೇನೆ. ಸಮುದ್ರದ ಪೂರ್ವದಲ್ಲಿರುವ ಪ್ರಯಾಣಿಕರು ಹಾದುಹೋಗುವ ಕಣಿವೆಯೇ, ಆಗ ಅದು ಹಾದು ಹೋಗುವವರನ್ನು ನಿಲ್ಲಿಸುವುದು. ಅಲ್ಲಿ ಗೋಗನನ್ನೂ ಅವನ ಎಲ್ಲಾ ದಳವನ್ನು ಸಮಾಧಿಮಾಡುವರು. ಆ ಕಣಿವೆಯನ್ನು ಹಾಮೋನ್ ಗೋಗ್ ಎಂದು ಕರೆಯುವರು.


“ಮನುಷ್ಯನ ಶವವನ್ನು ಮುಟ್ಟಿದವನು ಏಳು ದಿನಗಳವರೆಗೆ ಅಶುದ್ಧನಾಗಿರುವನು.


“ಒಬ್ಬ ಮನುಷ್ಯನು ಡೇರೆಯಲ್ಲಿ ಸತ್ತರೆ, ಅವನ ವಿಷಯವಾದ ನಿಯಮವೇನೆಂದರೆ: ಆ ಡೇರೆಯೊಳಗೆ ಪ್ರವೇಶಿಸುವವರೆಲ್ಲರೂ, ಡೇರೆಯಲ್ಲಿರುವವರೆಲ್ಲರೂ ಏಳು ದಿವಸಗಳವರೆಗೆ ಅಶುದ್ಧರಾಗಿರುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು