Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 39:11 - ಕನ್ನಡ ಸಮಕಾಲಿಕ ಅನುವಾದ

11 “ ‘ಆ ದಿನದಲ್ಲಿ ನಾನು ಗೋಗನಿಗೆ ಇಸ್ರಾಯೇಲಿನ ಸಮಾಧಿಗಳಲ್ಲಿ ಸ್ಥಳವನ್ನು ಕೊಡುತ್ತೇನೆ. ಸಮುದ್ರದ ಪೂರ್ವದಲ್ಲಿರುವ ಪ್ರಯಾಣಿಕರು ಹಾದುಹೋಗುವ ಕಣಿವೆಯೇ, ಆಗ ಅದು ಹಾದು ಹೋಗುವವರನ್ನು ನಿಲ್ಲಿಸುವುದು. ಅಲ್ಲಿ ಗೋಗನನ್ನೂ ಅವನ ಎಲ್ಲಾ ದಳವನ್ನು ಸಮಾಧಿಮಾಡುವರು. ಆ ಕಣಿವೆಯನ್ನು ಹಾಮೋನ್ ಗೋಗ್ ಎಂದು ಕರೆಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 “ಆ ದಿನದಲ್ಲಿ ಗೋಗನಿಗೆ ನಾನು ಇಸ್ರಾಯೇಲಿನ ಸಮಾಧಿಗಳಲ್ಲಿ ಸ್ಥಳವನ್ನು ಏರ್ಪಡಿಸುವೆನು; ಲವಣ ಸಮುದ್ರದ ಪೂರ್ವದಿಕ್ಕಿನಲ್ಲಿ ಪ್ರಯಾಣಿಕರ ಮಾರ್ಗವಾದ ಕಣಿವೆಯೇ. ಅಲ್ಲಿ ಪ್ರಯಾಣ ಮಾಡಲು ಆಗುವುದಿಲ್ಲ; ಅಲ್ಲೇ ಗೋಗನನ್ನೂ ಮತ್ತು ಅವನ ಸಮೂಹವೆಲ್ಲವನ್ನೂ ಸಮಾಧಿ ಮಾಡುವರು; ಅ ಕಣಿವೆಯನ್ನು ‘ಗೋಗನ ಸಮೂಹದ ಕಣಿವೆ’ ಎಂದು ಕರೆಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 “ಆ ದಿನದಲ್ಲಿ ನಾನು ಇಸ್ರಯೇಲಿನೊಳಗೆ ಲವಣಸಮುದ್ರದ ಪೂರ್ವದಿಕ್ಕಿನಲ್ಲಿ ಪ್ರಯಾಣಿಕರ ಮಾರ್ಗವಾದ ಕಣಿವೆಯನ್ನು ಗೋಗನಿಗೆ ಹೂಳುವ ಸ್ಥಳವನ್ನಾಗಿ ಏರ್ಪಡಿಸುವೆನು; ಅಲ್ಲಿ ಪ್ರಯಾಣಮಾಡಲು ಆಗುವುದಿಲ್ಲ; ಅಲ್ಲೇ ಗೋಗನನ್ನೂ ಅವನ ಸಮೂಹವೆಲ್ಲವನ್ನೂ ಹೂಣಿಡುವರು; ಅದು ‘ಹಮೋನ್ ಗೋಗ್’ ಕಣಿವೆ ಎನಿಸಿಕೊಳ್ಳುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಆ ದಿನದಲ್ಲಿ ನಾನು ಇಸ್ರಾಯೇಲಿನೊಳಗೆ ಲವಣ ಸಮುದ್ರದ ಮೂಡಣ ದಿಕ್ಕಿನಲ್ಲಿ ಪ್ರಯಾಣಿಕರ ಮಾರ್ಗವಾದ ತಗ್ಗನ್ನು ಗೋಗನಿಗೆ ಹೂಳುವ ಸ್ಥಳವನ್ನಾಗಿ ಏರ್ಪಡಿಸುವೆನು; ಅಲ್ಲಿ ಪ್ರಯಾಣಮಾಡಲು ಆಗುವದಿಲ್ಲ; ಅಲ್ಲೇ ಗೋಗನನ್ನೂ ಅವನ ಸಮೂಹವೆಲ್ಲವನ್ನೂ ಹೂಣಿಡುವರು; ಅದು ಗೋಗನ ಸಮೂಹದ ತಗ್ಗು ಅನ್ನಿಸಿಕೊಳ್ಳುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ದೇವರು ಹೇಳಿದ್ದೇನೆಂದರೆ, “ಆ ಸಮಯದಲ್ಲಿ ಗೋಗನನ್ನು ಹೂಣಿಡಲು ನಾನು ಇಸ್ರೇಲಿನಲ್ಲಿ ಸ್ಥಳವನ್ನು ಆರಿಸುತ್ತೇನೆ. ಇವನನ್ನು ಮೃತ್ಯುಸಮುದ್ರದ ಪೂರ್ವದಲ್ಲಿರುವ ‘ಪ್ರಯಾಣಿಕರ ಕಣಿವೆ’ ಯಲ್ಲಿ ಸಮಾಧಿ ಮಾಡಲಾಗುವುದು. ಅದು ಪ್ರವಾಸಿಗಳಿಗೆ ಅಡ್ಡಿಯಾಗುವದು. ಯಾಕೆಂದರೆ ಗೋಗನೂ ಅವನ ಸೈನ್ಯವೂ ಅಲ್ಲಿ ಹೂಣಿಡಲ್ಪಡುವವು. ಆ ಸ್ಥಳ ‘ಗೋಗ್ ಸೈನ್ಯದ ತಗ್ಗು’ ಎಂಬ ಹೊಸ ಹೆಸರಿನಿಂದ ಕರೆಯಲ್ಪಡುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 39:11
10 ತಿಳಿವುಗಳ ಹೋಲಿಕೆ  

ಇವುಗಳಾದ ಮೇಲೆ ಯೇಸು ತಿಬೇರಿಯದ ಗಲಿಲಾಯ ಸರೋವರದ ಆಚೆಗೆ ಹೋದರು.


ಒಂದು ದಿನ ಯೇಸು ಗೆನೆಜರೇತ್ ಕೆರೆಯ ಬಳಿಯಲ್ಲಿ ನಿಂತುಕೊಂಡಿದ್ದಾಗ, ಜನರು ದೇವರ ವಾಕ್ಯವನ್ನು ಕೇಳುವುದಕ್ಕಾಗಿ ಅವರ ಸುತ್ತಲೂ ಗುಂಪಾಗಿ ಕೂಡಿದ್ದರು.


ಪೂರ್ವದಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯೆ ಯೊರ್ದನ್ ಹೊಳೆಯ ಮೇರೆಯಿಂದ ಲವಣ ಸಮುದ್ರದಿಂದ ಮತ್ತು ತಾಮರ್ ನೀವು ಅಳೆಯಬೇಕು. ಇದೇ ಪೂರ್ವದಿಕ್ಕಿನ ಮೇರೆಯಾಗಿದೆ.


“ಓ ಮನುಷ್ಯಪುತ್ರನೇ, ರೋಷ್, ಮೆಷೆಕ್ ಮತ್ತು ತೂಬಲ್‌ನ ಮುಖ್ಯ ರಾಜಕುಮಾರನಾದ ಮಾಗೋಗ್ ದೇಶದ ಗೋಗನ ಕಡೆಗೆ ನಿನ್ನ ಮುಖವನ್ನು ತಿರುಗಿಸು; ಮತ್ತು ಅವನ ವಿರುದ್ಧವಾಗಿ ಪ್ರವಾದಿಸು.


ಶೆಫಾಮಿನಿಂದ ಮೇರೆ ಆಯಿನಿನ ಪೂರ್ವದಲ್ಲಿರುವ ರಿಬ್ಲಾಕ್ಕೆ ಇಳಿದು, ಕಿನ್ನೆರೆತ್ ಸಮುದ್ರದ ಪೂರ್ವ ತೀರವನ್ನು ಮುಟ್ಟಲಿ.


ಆಶೆ ಪಟ್ಟವರನ್ನು ಅಲ್ಲಿ ಹೂಳಿಟ್ಟಿದ್ದರಿಂದ ಆ ಸ್ಥಳಕ್ಕೆ ಕಿಬ್ರೋತ್ ಹತಾವ ಎಂದು ಹೆಸರಾಯಿತು.


ಅದಕ್ಕಾಗಿ ಅವರು ಬಯಲಿನಿಂದ ಮರಗಳನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಅರಣ್ಯಗಳಲ್ಲಿ ಯಾವುದನ್ನೂ ಕತ್ತರಿಸಿಕೊಳ್ಳುವುದೂ ಇಲ್ಲ, ಅವರು ಆಯುಧಗಳನ್ನು ಬೆಂಕಿಗೆ ಸೌದೆಯಾಗಿ ಉಪಯೋಗಿಸುವರು. ಅವರು ಸೂರೆಯಾದವುಗಳನ್ನು ಸೂರೆ ಮಾಡುವರು ಮತ್ತು ಕೊಳ್ಳೆ ಹೊಡೆದವರನ್ನು ತಾವು ಕೊಳ್ಳೆಹೊಡೆಯುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.


“ ‘ಇಸ್ರಾಯೇಲನ ಮನೆತನದವರು ದೇಶವನ್ನು ಶುದ್ಧಮಾಡುವ ಹಾಗೆ ಅವರನ್ನು ಏಳು ತಿಂಗಳುಗಳವರೆಗೂ ಸಮಾಧಿಮಾಡುವರು.


ಪ್ರಯಾಣಿಕರು ಆ ದೇಶದಲ್ಲಿ ಹಾದುಹೋಗುತ್ತಿರುವಾಗ ಯಾವುದಾದರೊಂದು ಮನುಷ್ಯನ ಎಲುಬನ್ನು ಕಂಡರೆ ಅಲ್ಲಿ ಒಂದು ಗುರುತನ್ನು ಹಾಕುವರು, ಹೂಣಿಡುವವರು ಅದನ್ನು ಹಾಮೋನ್ ಗೋಗಿನ ಕಣಿವೆಯಲ್ಲಿ ಹೂಳಿಡುವ ತನಕ ಆ ಗುರುತು ಹಾಗೆಯೇ ಇರುವದು.


ಅವರು ಅವುಗಳನ್ನು ರಾಶಿಗಳಾಗಿ ಕೂಡಿಸಿಟ್ಟಿದ್ದರಿಂದ ದೇಶವು ದುರ್ವಾಸನೆಯಿಂದ ತುಂಬಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು