ಯೆಹೆಜ್ಕೇಲನು 38:6 - ಕನ್ನಡ ಸಮಕಾಲಿಕ ಅನುವಾದ6 ಗೋಮೆರ್ ಮತ್ತು ಅದರ ಎಲ್ಲಾ ದಳಗಳನ್ನೂ, ಉತ್ತರ ದಿಕ್ಕಿನ ತೋಗರ್ಮದವರನ್ನೂ ಮತ್ತು ಅದರ ಎಲ್ಲಾ ದಳಗಳನ್ನೂ, ಹೀಗೆ ನಿನ್ನ ಸಂಗಡವಿರುವ ಅನೇಕ ಜನರನ್ನೂ ನಿನ್ನೊಂದಿಗೆ ಬರಮಾಡುವೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಉತ್ತರದಿಕ್ಕಿನ ಕಟ್ಟಕಡೆಯಿಂದ ಬಂದ ಗೋಮೆರ್ ಮತ್ತು ಸೈನ್ಯದವರನ್ನೂ, ತೋಗರ್ಮದವರನ್ನು ಮತ್ತು ಅನೇಕ ಜನರನ್ನು ನಿನ್ನೊಂದಿಗೆ ಬರಮಾಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಪಡೆಪಡೆಯಾದ ಗೋಮೆರ್ಯರನ್ನು, ಉತ್ತರದಿಕ್ಕಿನ ಕಟ್ಟಕಡೆಯಿಂದ ಬಂದ ಪಡೆಪಡೆಯಾದ ತೋಗರ್ಮದವರನ್ನು, ಹೀಗೆ ಅನೇಕಾನೇಕ ಜನಾಂಗಗಳನ್ನು ನಿನ್ನೊಂದಿಗೆ ಬರಮಾಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಇವರನ್ನು ಗುವ್ಮಿುಗುವ್ಮಿುಯಾದ ಗೋಮೆರ್ಯರನ್ನು, ಉತ್ತರದಿಕ್ಕಿನ ಕಟ್ಟಕಡೆಯಿಂದ ಬಂದ ಗುವ್ಮಿುಗುವ್ಮಿುಯಾದ ತೋಗರ್ಮದವರನ್ನು ಅಂತು ಅನೇಕಾನೇಕ ಜನಾಂಗಗಳನ್ನು ನಿನ್ನೊಂದಿಗೆ ಬರಮಾಡುವೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ಅಲ್ಲಿ ಗೋಮೆರ್ಯ ರಾಜ್ಯವು ತನ್ನ ಎಲ್ಲಾ ಸಿಪಾಯಿಗಳೊಂದಿಗೆ ಇರುವುದು. ಬಹು ದೂರದ ಉತ್ತರ ದಿಕ್ಕಿನಲ್ಲಿರುವ ತೋಗರ್ಮ ರಾಜ್ಯವೂ ಇದರಲ್ಲಿ ಸೇರಿರುವದು. ಈ ಕೈದಿಗಳ ಸಾಲಿನಲ್ಲಿ ಅನೇಕಾನೇಕ ಮಂದಿ ಇರುವರು. ಅಧ್ಯಾಯವನ್ನು ನೋಡಿ |