Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 38:19 - ಕನ್ನಡ ಸಮಕಾಲಿಕ ಅನುವಾದ

19 ಏಕೆಂದರೆ ನನ್ನ ಈ ರೋಷದಲ್ಲಿ ಮತ್ತು ನನ್ನ ಕೋಪದ ಬೆಂಕಿಯಲ್ಲಿ ನಾನು ಮಾತನಾಡುತ್ತೇನೆ. ನಿಶ್ಚಯವಾಗಿ ಆ ದಿನದಂದು ಇಸ್ರಾಯೇಲ್ ದೇಶದಲ್ಲಿ ಮಹಾಕಂಪನ ಉಂಟಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ನಾನು ರೋಷದಿಂದ ಮತ್ತು ಕೋಪದಿಂದ ಉರಿಯುತ್ತಾ ಹೀಗೆ ನುಡಿದಿದ್ದೇನೆ, ‘ಆಹಾ, ಆ ದಿನದಲ್ಲಿ ಇಸ್ರಾಯೇಲ್ ದೇಶದೊಳಗೆ ಮಹಾಕಂಪನವಾಗುವುದು ಖಂಡಿತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ನಾನು ರೋಷಾನಿಷ್ಟನಾಗಿ ಕೋಪದಿಂದುರಿಯುತ್ತಾ ಹೀಗೆ ನುಡಿದಿದ್ದೇನೆ: ಆಹಾ, ಆ ದಿನದಲ್ಲಿ, ಇಸ್ರಯೇಲ್ ನಾಡಿನೊಳಗೆ ಅದ್ಭುತಕಂಪನವಾಗುವುದು ಖಂಡಿತ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನಾನು ರೋಷಾವಿಷ್ಟನಾಗಿ ಕೋಪದಿಂದುರಿಯುತ್ತಾ ಹೀಗೆ ನುಡಿದಿದ್ದೇನೆ - ಆಹಾ, ಆ ದಿನದಲ್ಲಿ ಇಸ್ರಾಯೇಲ್ ದೇಶದೊಳಗೆ ಅದ್ಭುತಕಂಪನವಾಗುವದು ಖಂಡಿತ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ನನ್ನ ಸಿಟ್ಟಿನ ಭರದಲ್ಲಿ ಪ್ರಮಾಣಮಾಡಿ ಹೇಳುವುದೇನೆಂದರೆ, ಆ ಸಮಯದಲ್ಲಿ ಇಸ್ರೇಲಿನಲ್ಲಿ ಭಾರಿ ಭೂಕಂಪವಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 38:19
23 ತಿಳಿವುಗಳ ಹೋಲಿಕೆ  

ಆಗ ಪ್ರತಿಯೊಂದು ದ್ವೀಪಗಳು ಮರೆಯಾಗಿ ಹೋದವು, ಬೆಟ್ಟಗಳು ಕಾಣದಂತಾದವು.


ಆಗ ಅಲ್ಲಿ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಮತ್ತು ಮಹಾಭೂಕಂಪವೂ ಸಂಭವಿಸಿದವು. ಮನುಷ್ಯನು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ.


ಅದೇ ಗಳಿಗೆಯಲ್ಲಿ, ಮಹಾ ಭೂಕಂಪ ಉಂಟಾಗಿ ಆ ಪಟ್ಟಣದ ಹತ್ತರಲ್ಲೊಂದು ಭಾಗವು ಬಿದ್ದುಹೋಯಿತು. ಆ ಭೂಕಂಪದಲ್ಲಿ ಏಳು ಸಾವಿರ ಮಂದಿ ಸತ್ತುಹೋದರು. ಉಳಿದವರು ಭಯಗ್ರಸ್ತರಾಗಿ ಪರಲೋಕದ ದೇವರಿಗೆ ಮಹಿಮೆಯನ್ನು ಸಲ್ಲಿಸಿದರು.


ಆ ಕಾಲದಲ್ಲಿ ದೇವರ ಧ್ವನಿಯು ಭೂಮಿಯನ್ನು ಕದಲಿಸಿತು. ಈಗಲಾದರೋ, “ಇನ್ನೊಂದು ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ಕದಲಿಸುತ್ತೇನೆ!” ಎಂದು ದೇವರು ವಾಗ್ದಾನಮಾಡಿದ್ದಾರೆ.


ಯೆಹೋವ ದೇವರು ಚೀಯೋನಿನೊಳಗಿಂದ ಗರ್ಜಿಸಿ, ಯೆರೂಸಲೇಮಿನೊಳಗಿಂದ ಗುಡುಗುವರು. ಆಕಾಶಗಳೂ ಭೂಮಿಯೂ ನಡುಗುವುವು. ಆದರೆ ಯೆಹೋವ ದೇವರು ತಮ್ಮ ಜನರಿಗೆ ಆಶ್ರಯವೂ, ಇಸ್ರಾಯೇಲರಿಗೆ ರಕ್ಷಣೆಯ ದುರ್ಗವೂ ಆಗಿರುವರು.


“ಈ ಪ್ರಕಾರ ನನ್ನ ಕೋಪವನ್ನು ತೀರಿಸಿಕೊಳ್ಳುವೆನು. ನನ್ನ ರೋಷವನ್ನು ಅವರ ಮೇಲೆ ಕಾರಿ, ಸಮಾಧಾನ ಹೊಂದುವೆನು. ಹೀಗೆ ನಾನು ನನ್ನ ರೋಷವನ್ನು ಅವರ ಮೇಲೆ ತೀರಿಸಿದ ತರುವಾಯ, ಯೆಹೋವ ದೇವರಾದ ನಾನು ರೋಷದಿಂದ ಮಾತನಾಡಿದ್ದೇನೆ ಎಂದು ಅವರು ತಿಳಿಯುವರು.


ನನ್ನ ಸಂಗಡ ಮಾತನಾಡಿದ ದೂತನು ನನಗೆ, “ಇದನ್ನು ಸಾರಿ ಹೇಳು: ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಯೆರೂಸಲೇಮಿಗಾಗಿಯೂ, ಚೀಯೋನಿಗಾಗಿಯೂ ಮಹಾ ರೋಷವುಳ್ಳವನಾಗಿದ್ದೇನೆ.


ಆಗ ಯೆಹೋವ ದೇವರು ತಮ್ಮ ದೇಶಕ್ಕೋಸ್ಕರ ಅಭಿಮಾನಗೊಂಡು, ತಮ್ಮ ಜನರನ್ನು ಕನಿಕರಿಸುವರು.


“ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಪವಿತ್ರ ನಾಮಕ್ಕೆ ಇನ್ನು ಅಪಕೀರ್ತಿ ಬಾರದಂತೆ ನಾನು ಈಗ ಆಸಕ್ತನಾಗಿ ಯಾಕೋಬ್ಯರ ದುರಾವಸ್ಥೆಯನ್ನು ತಪ್ಪಿಸಿ, ಇಸ್ರಾಯೇಲ್ ವಂಶದವರಿಗೆಲ್ಲಾ ಕೃಪೆ ತೋರುವೆನು.


ಯೆಹೋವ ದೇವರು ಪರಾಕ್ರಮಶಾಲಿಯಾಗಿ ಮುಂದೆ ಹೋಗುವರು; ಯುದ್ಧವೀರನ ಹಾಗೆ ತಮ್ಮ ರೌದ್ರವನ್ನು ಎಬ್ಬಿಸುವರು. ಆರ್ಭಟಿಸಿ ಗರ್ಜಿಸಿ ತಮ್ಮ ಶತ್ರುಗಳಿಗೆ ವಿರೋಧವಾಗಿ ಜಯಶಾಲಿಯಾಗುವರು.


ದೇವರು ಬೇಸರಗೊಂಡಿದ್ದರಿಂದ ಭೂಮಿಯು ನಡುಗಿ ಕದಲಿದವು; ಪರ್ವತಗಳ ಅಸ್ತಿವಾರಗಳು ಸಹ ಕದಲಿದವು.


ಅಂಥವನನ್ನು ಯೆಹೋವ ದೇವರು ಉಳಿಸುವುದಿಲ್ಲ, ಆಗಲೇ ಯೆಹೋವ ದೇವರ ಕೋಪವೂ, ರೋಷವೂ ಆ ಮನುಷ್ಯನನ್ನು ಸುಡುವುದು. ಈ ಗ್ರಂಥದಲ್ಲಿ ಬರೆದಿರುವ ಶಾಪವೆಲ್ಲಾ ಅವನ ಮೇಲೆ ಬರುವುದು. ಯೆಹೋವ ದೇವರು ಅವನ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವರು.


ಏಕೆಂದರೆ ನಮ್ಮ, “ದೇವರು ದಹಿಸುವ ಅಗ್ನಿಯಾಗಿದ್ದಾರೆ.”


ಏಕೆಂದರೆ ನನ್ನ ರೋಷ ಬೆಂಕಿಯಂತಿದೆ, ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ, ಅದರ ಫಲವನ್ನೂ ತಿಂದು ಬಿಟ್ಟು, ಬೆಟ್ಟಗಳ ಅಸ್ತಿವಾರವನ್ನು ದಹಿಸುವುದು.


ಮೂಗಿನಿಂದ ಹೊಗೆ ಬಂದಂತೆಯೂ ಬಾಯಿಯೊಳಗಿಂದ ದಹಿಸುವ ಅಗ್ನಿ ಹೊರಟಂತೆಯೂ; ಕೆಂಡಗಳು ಅದರಿಂದ ಜ್ವಾಲಿಸಿದಂತೆಯೂ ಇರಲು,


ಯೆಹೋವ ದೇವರೇ ಎಷ್ಟರವರೆಗೆ ಕೋಪಗೊಂಡಿರುವಿರಿ? ಸತತವೂ ನೀವು ಕೋಪದಿಂದಿರುವಿರೋ? ಎಷ್ಟರವರೆಗೆ ನಿಮ್ಮ ರೋಷವು ಬೆಂಕಿಯಂತೆ ಉರಿಯುವುದು?


ನಾನು ಬೆಟ್ಟಗುಡ್ಡಗಳನ್ನು ನಾಶಮಾಡಿ, ಅಲ್ಲಿಯ ಮೇವನ್ನು ಒಣಗಿಸಿ; ನದಿಗಳನ್ನು ದ್ವೀಪಗಳನ್ನಾಗಿಯೂ, ಕೆರೆಗಳನ್ನು ಬತ್ತಿಹೋಗುವಂತೆಯೂ ಮಾಡುವೆನು.


ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಶ್ಚಯವಾಗಿ ನನ್ನ ರೋಷದ ಬೆಂಕಿಯಿಂದ ಇತರ ಜನಾಂಗಗಳಲ್ಲಿ ಉಳಿದವರಿಗೂ ಎದೋಮಿನವರೆಲ್ಲರಿಗೂ ವಿರುದ್ಧವಾಗಿ ನಾನು ಮಾತನಾಡಿದ್ದೇನೆ; ಅವರ ಸಂಪೂರ್ಣ ಹೃದಯದ ಸಂತೋಷದಿಂದಲೂ ತಮ್ಮ ಹಗೆಯ ಮನೋಭಾವದಿಂದಲೂ ನನ್ನ ದೇಶವನ್ನು ತಮ್ಮ ಸೊತ್ತಾಗಿ ಮಾಡಿಕೊಂಡಿದ್ದಾರೆ. ಅವರು ಅದರ ಹುಲ್ಲುಗಾವಲನ್ನು ಸಹ ಸೂರೆಮಾಡಬೇಕೆಂದಿದ್ದಾರೆ.’


ಆದ್ದರಿಂದ ಇಸ್ರಾಯೇಲ್ ದೇಶಕ್ಕೆ ಸಂಬಂಧಪಟ್ಟ ಹಾಗೆ ಪ್ರವಾದಿಸು. ಪರ್ವತಗಳಿಗೂ ಬೆಟ್ಟಗಳಿಗೂ ಹಳ್ಳಕೊಳ್ಳಗಳಿಗೂ ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಇಂತೆನ್ನುತ್ತಾರೆ: ಇತರ ಜನಾಂಗಗಳ ಅವಮಾನವನ್ನು ಹೊತ್ತದ್ದರಿಂದ ನಾನು ರೋಷದಿಂದಲೂ ರೌದ್ರದಿಂದಲೂ ಮಾತನಾಡಿದ್ದೇನೆ.


ನಾನು ಮಾಗೋಗ್ ಮತ್ತು ಅವರೊಂದಿಗೆ ದ್ವೀಪಗಳಲ್ಲಿ ನಿರ್ಭಯವಾಗಿ ವಾಸಿಸುವವರ ಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ, ಅವರು ನಾನೇ ಯೆಹೋವ ದೇವರೆಂದು ತಿಳಿಯುವರು.


ಯೆಹೋವ ದೇವರು ಅಸೂಯೆಪಡುವ ಮತ್ತು ಸೇಡು ತೀರಿಸಿಕೊಳ್ಳುವ ದೇವರು. ಅವರು ತಮ್ಮನ್ನು ಎದುರಿಸುವವರನ್ನು ಎದುರಿಸುತ್ತಾರೆ. ಯೆಹೋವ ದೇವರು ರೋಷದಿಂದ ಮುಯ್ಯಿಗೆ ಮುಯ್ಯಿ ತೀರಿಸುತ್ತಾರೆ. ಯೆಹೋವ ದೇವರು ತಮ್ಮ ವೈರಿಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ತಮ್ಮ ಶತ್ರುಗಳ ಮೇಲೆ ಕೋಪವನ್ನು ಪ್ರಕಟಿಸಿಕೊಳ್ಳುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು