Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 37:4 - ಕನ್ನಡ ಸಮಕಾಲಿಕ ಅನುವಾದ

4 ಅವರು ನನಗೆ ಹೇಳಿದ್ದೇನೆಂದರೆ, “ಈ ಎಲುಬುಗಳ ಮೇಲೆ ಪ್ರವಾದಿಸಿ, ಅವುಗಳಿಗೆ ಹೇಳು: ‘ಒಣಗಿದ ಎಲುಬುಗಳೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆಗ ಆತನು ನನಗೆ ಹೀಗೆ ಅಪ್ಪಣೆಮಾಡಿದನು, “ನೀನು ಈ ಎಲುಬುಗಳ ಮೇಲೆ ಪ್ರವಾದಿಸಿ, ಹೀಗೆ ನುಡಿ, ‘ಒಣಗಿದ ಎಲುಬುಗಳೇ, ಯೆಹೋವನ ವಾಕ್ಯವನ್ನು ಕೇಳಿರಿ’.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಆಗ ಅವರು ನನಗೆ ಹೀಗೆ ಅಪ್ಪಣೆಮಾಡಿದರು: “ನೀನು ಆ ಎಲುಬುಗಳಿಗೇ ಪ್ರವಾದಿಸಿ ಅವಕ್ಕೆ ಈ ದೈವೋಕ್ತಿಯನ್ನು ನುಡಿ: ಒಣ ಎಲುಬುಗಳೇ, ಸರ್ವೇಶ್ವರನ ವಾಣಿಯನ್ನು ಕೇಳಿ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಆಗ ಆತನು ನನಗೆ ಹೀಗೆ ಅಪ್ಪಣೆಮಾಡಿದನು - ನೀನು ಎಲುಬುಗಳ ಮೇಲೆ ಧ್ವನಿಯನ್ನು ಹರಡಿ ಅದಕ್ಕೆ ಈ ದೈವೋಕ್ತಿಯನ್ನು ನುಡಿ - ಒಣಗಿದ ಎಲುಬುಗಳೇ, ಯೆಹೋವನ ವಾಕ್ಯವನ್ನು ಕೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆಗ ಯೆಹೋವನು, “ನನ್ನ ಪರವಾಗಿ ಆ ಎಲುಬುಗಳೊಂದಿಗೆ ಮಾತನಾಡು. ಅವುಗಳಿಗೆ ಹೀಗೆ ಹೇಳು: ‘ಒಣಗಿದ ಎಲುಬುಗಳೇ, ಯೆಹೋವನ ಮಾತನ್ನು ಕೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 37:4
17 ತಿಳಿವುಗಳ ಹೋಲಿಕೆ  

ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಸತ್ತವರು ದೇವಪುತ್ರನ ಸ್ವರವನ್ನು ಕೇಳುವ ಕಾಲ ಬರುತ್ತದೆ. ಈಗಾಗಲೇ ಬಂದಿದೆ. ಈ ಸ್ವರವನ್ನು ಕೇಳುವವರು ಬದುಕುವರು.


ಯೇಸು ಉತ್ತರವಾಗಿ ಅವರಿಗೆ, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ಸಂದೇಹ ಪಡದೆ ನಂಬಿದರೆ, ನಾನು ಈ ಅಂಜೂರದ ಮರಕ್ಕೆ ಮಾಡಿದಂತೆಯೇ ನೀವೂ ಮಾಡುವಿರಿ. ಇದಲ್ಲದೆ ನೀವು ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿದರೂ ಅದು ಹಾಗೆಯೇ ಆಗುವುದು.


“ನರಪುತ್ರನೇ, ಇಸ್ರಾಯೇಲ್ ಪರ್ವತಗಳ ಕಡೆಗೆ ಪ್ರವಾದಿಸು. ಹೇಳು, ‘ಇಸ್ರಾಯೇಲ್ ಪರ್ವತಗಳೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ.


ಓ ದೇಶವೇ, ದೇಶವೇ, ದೇಶವೇ, ಯೆಹೋವ ದೇವರ ವಾಕ್ಯವನ್ನು ಕೇಳು.


ಆದರೆ ಮೃತರಾದ ನಿನ್ನ ಜನರು ಬದುಕುವರು. ಅವರ ದೇಹಗಳು ಏಳುವುವು. ಧೂಳಿನ ನಿವಾಸಿಗಳೇ, ಎಚ್ಚೆತ್ತು ಹರ್ಷಧ್ವನಿಗೈಯಿರಿ! ಯೆಹೋವ ದೇವರೇ, ನಿಮ್ಮ ಇಬ್ಬನಿ ಮುಂಜಾನೆಯ ಇಬ್ಬನಿಯಂತಿರುವುದು. ಭೂಮಿಯು ಸತ್ತವರನ್ನು ಹೊರಪಡಿಸುವುದು.


ಆಮೇಲೆ ಆತನು ನನಗೆ ಹೇಳಿದ್ದೇನೆಂದರೆ, “ಮನುಷ್ಯಪುತ್ರನೇ, ಈ ಎಲುಬುಗಳು ಸಂಪೂರ್ಣ ಇಸ್ರಾಯೇಲ್ ಮನೆತನಗಳೇ. ಇಗೋ, ‘ನಮ್ಮ ಎಲುಬುಗಳು ಒಣಗಿಹೋದವು. ನಮ್ಮ ನಿರೀಕ್ಷೆಯು ಸಹ ಕಳೆದು ಹೋಗಿದೆ. ಸಂಪೂರ್ಣವಾಗಿ ನಾಶವಾದೆವು ಎಂದು ಅವರು ಹೇಳುವರು.’


ಯೇಸುವಿನ ತಾಯಿಯು ಸೇವಕರಿಗೆ, “ಆತನು ನಿಮಗೆ ಹೇಳಿದಂತೆ ಮಾಡಿರಿ,” ಎಂದು ಹೇಳಿದಳು.


“ಕೋಲನ್ನು ತೆಗೆದುಕೊಂಡು ನೀನು ನಿನ್ನ ಸಹೋದರ ಆರೋನನು ಜನರನ್ನು ಕೂಡಿಸಿಕೊಂಡು, ಅವರ ಕಣ್ಣುಗಳ ಮುಂದೆ ಬಂಡೆಯ ಸಂಗಡ ಮಾತನಾಡಿರಿ. ಅದು ತನ್ನ ನೀರನ್ನು ಕೊಡುವುದು. ನೀನು ಅವರಿಗೋಸ್ಕರ ಬಂಡೆಯೊಳಗಿಂದ ನೀರನ್ನು ಹೊರಗೆ ತರುವೆ, ಜನರಿಗೂ ಅವರ ಪಶುಗಳಿಗೂ ನೀನು ಕುಡಿಯಲು ಕೊಡಬಹುದು,” ಎಂದು ಹೇಳಿದರು.


ಅವನು ಯೆಹೋವ ದೇವರ ಅಪ್ಪಣೆಯಿಂದ ಆ ಪೀಠವನ್ನು ಕುರಿತು: “ಪೀಠವೇ, ಪೀಠವೇ! ದಾವೀದನ ಸಂತಾನದಲ್ಲಿ ಯೋಷೀಯ ಎಂಬ ಹೆಸರುಳ್ಳ ಒಬ್ಬ ಮಗನು ಹುಟ್ಟುವನು. ಅವನು ನಿನ್ನ ಮೇಲೆ ಧೂಪವನ್ನರ್ಪಿಸುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು ಬಲಿಯಾಗಿ ಅರ್ಪಿಸುವನು. ಮನುಷ್ಯರ ಎಲುಬುಗಳನ್ನು ನಿನ್ನ ಮೇಲೆ ಸುಡಲಾಗುವವು,” ಎಂದು ಯೆಹೋವ ದೇವರು ಹೇಳುತ್ತಾರೆ ಎಂದನು.


“ಕಿವುಡರೇ, ಕೇಳಿರಿ; ಕುರುಡರೇ, ನೀವು ದೃಷ್ಟಿಸಿ ನೋಡಿರಿ.


ಬೆಟ್ಟಗಳೇ, ಯೆಹೋವ ದೇವರ ಆಪಾದನೆಯನ್ನು ಕೇಳಿರಿ. ಭೂಮಿಯ ಶಾಶ್ವತವಾದ ಅಸ್ತಿವಾರಗಳೇ ಕಿವಿಗೊಡಿರಿ. ಏಕೆಂದರೆ ಯೆಹೋವ ದೇವರಿಗೆ ತಮ್ಮ ಜನರ ವಿರುದ್ಧ ವ್ಯಾಜ್ಯವಿದೆ, ಅವರು ಇಸ್ರಾಯೇಲಿನ ವಿರುದ್ಧ ಆರೋಪಿಸುತ್ತಾರೆ.


ಆಗ ನನಗೆ, “ನೀನು ಅನೇಕ ಪ್ರಜೆ, ರಾಷ್ಟ್ರ, ಜನಾಂಗ, ಭಾಷೆ ಮತ್ತು ಅರಸರ ಮುಂದೆ ಪುನಃ ಪ್ರವಾದಿಸಬೇಕು,” ಎಂದು ಹೇಳಲಾಯಿತು.


ಆಮೇಲೆ ಆತನು ನನಗೆ ಹೇಳಿದ್ದೇನೆಂದರೆ, “ಉಸಿರಿನ ಕಡೆಗೆ ಪ್ರವಾದಿಸು, ಮನುಷ್ಯಪುತ್ರನೇ, ಆ ಉಸಿರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಓ ಉಸಿರೇ, ನಾಲ್ಕು ದಿಕ್ಕುಗಳಿಂದ ಬಂದು ಈ ಹತಶರೀರಗಳು ಬದುಕುವಂತೆ ಅದರ ಮೇಲೆ ಊದು.’ ”


ಆದ್ದರಿಂದ ನೀನು ಪ್ರವಾದಿಸಿ ಅವರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನು ತೆರೆಯುವೆನು ಮತ್ತು ಸಮಾಧಿಗಳಿಂದ ನೀವು ಹೊರಗೆ ಬರುವಂತೆ ಮಾಡುವೆನು. ಇಸ್ರಾಯೇಲ್ ದೇಶಕ್ಕೆ ನಿಮ್ಮನ್ನು ತರುವೆನು.


ದೇವರೇ, ನೀವು ಚರ್ಮವನ್ನೂ, ಮಾಂಸವನ್ನೂ ನನಗೆ ಹೊದಿಸಿದ್ದೀರಿ; ನೀವು ಎಲುಬು ನರಗಳಿಂದಲೂ ನನ್ನನ್ನು ಹೆಣೆದಿರುವಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು