ಯೆಹೆಜ್ಕೇಲನು 36:5 - ಕನ್ನಡ ಸಮಕಾಲಿಕ ಅನುವಾದ5 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಶ್ಚಯವಾಗಿ ನನ್ನ ರೋಷದ ಬೆಂಕಿಯಿಂದ ಇತರ ಜನಾಂಗಗಳಲ್ಲಿ ಉಳಿದವರಿಗೂ ಎದೋಮಿನವರೆಲ್ಲರಿಗೂ ವಿರುದ್ಧವಾಗಿ ನಾನು ಮಾತನಾಡಿದ್ದೇನೆ; ಅವರ ಸಂಪೂರ್ಣ ಹೃದಯದ ಸಂತೋಷದಿಂದಲೂ ತಮ್ಮ ಹಗೆಯ ಮನೋಭಾವದಿಂದಲೂ ನನ್ನ ದೇಶವನ್ನು ತಮ್ಮ ಸೊತ್ತಾಗಿ ಮಾಡಿಕೊಂಡಿದ್ದಾರೆ. ಅವರು ಅದರ ಹುಲ್ಲುಗಾವಲನ್ನು ಸಹ ಸೂರೆಮಾಡಬೇಕೆಂದಿದ್ದಾರೆ.’ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ದೇವರಾದ ಯೆಹೋವನಾದ ಕರ್ತನು ಹೀಗೆ ನುಡಿಯುತ್ತಾನೆ, ಆಹಾ, ನನ್ನ ದೇಶವನ್ನು ತಮ್ಮ ಸ್ವಾಸ್ತ್ಯಮಾಡಿಕೊಂಡು ಪೂರ್ಣಹೃದಯದಿಂದ ಆನಂದಪಟ್ಟವರೂ, ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಸೂರೆಗೆ ತಳ್ಳಿಬಿಟ್ಟವರೂ ಆದ ಎದೋಮಿನವರೆಲ್ಲರನ್ನೂ, ಇತರ ಜನಾಂಗಗಳಲ್ಲಿ ಉಳಿದವರನ್ನೂ ನಾನು ರೋಷದ ಬೆಂಕಿಯಿಂದ ಉರಿಯುತ್ತಾ ಶಪಿಸಿದ್ದೇನೆ.’ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 “ಆಹಾ, ನನ್ನ ದೇಶವನ್ನು ತಮ್ಮ ಸೊತ್ತಾಗಿ ಮಾಡಿಕೊಂಡು, ಪೂರ್ಣಹೃದಯದಿಂದ ಆನಂದಪಟ್ಟವರು ಹಾಗು ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಸೂರೆಗೆ ತಳ್ಳಿಬಿಟ್ಟವರು ಆದ ಎದೋಮಿನವರೆಲ್ಲರನ್ನು ಮತ್ತು ಇತರ ಜನಾಂಗಗಳಲ್ಲಿ ಉಳಿದವರನ್ನು ನಾನು ರೋಷಾವೇಶದಿಂದ ಶಪಿಸಿಯೇ ಶಪಿಸಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಆಹಾ, ನನ್ನ ದೇಶವನ್ನು ತಮ್ಮ ಸ್ವಾಸ್ತ್ಯಮಾಡಿಕೊಂಡು ಪೂರ್ಣಹೃದಯದಿಂದ ಆನಂದಪಟ್ಟವರೂ ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಸೂರೆಗೆ ತಳ್ಳಿಬಿಟ್ಟವರೂ ಆದ ಎದೋವಿುನವರೆಲ್ಲರನ್ನೂ ಇತರ ಜನಾಂಗಗಳಲ್ಲಿ ಉಳಿದವರನ್ನೂ ನಾನು ರೋಷದಿಂದುರಿಯುತ್ತಾ ಶಪಿಸೇ ಶಪಿಸಿದ್ದೇನೆ; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 “ಎದೋಮಿನ ಬಗ್ಗೆಯೂ ಉಳಿದ ಆ ವಿದೇಶಗಳ ಬಗ್ಗೆಯೂ ನಾನು ರೋಷದಿಂದ ಮಾತಾಡುತ್ತಿದ್ದೇನೆಂದು ಪ್ರಮಾಣ ಮಾಡುತ್ತೇನೆ. ಆ ಜನಾಂಗಗಳು ನನ್ನ ದೇಶವನ್ನು ತಮ್ಮ ಸ್ವಾಸ್ತ್ಯವನ್ನಾಗಿ ಸಂತೋಷದಿಂದ ತೆಗೆದುಕೊಂಡರು. ಅವರು ಅದನ್ನು ವಶಪಡಿಸಿಕೊಂಡು ಸೂರೆ ಮಾಡಿದಾಗ ಮತ್ತು ನನ್ನ ಜನರಿಗೆ ಅವಮಾನ ಮಾಡಿದಾಗ ನನ್ನ ಜನರನ್ನು ಅವರು ಎಷ್ಟೊಂದು ದ್ವೇಷಿಸುತ್ತಾರೆಂದು ತೋರಿಸುತ್ತಾ ಉಲ್ಲಾಸಪಟ್ಟರು. ಅಧ್ಯಾಯವನ್ನು ನೋಡಿ |
ಆದ್ದರಿಂದ ಯೆಹೋವ ದೇವರು ಹೀಗೆನ್ನುತ್ತಾರೆ: ನಾನು ಬೇಟೆ ಹಿಡಿಯಲಿಕ್ಕೆ ಏಳುವ ದಿವಸದವರೆಗೂ ನನಗೆ ಕಾದುಕೊಳ್ಳಿರಿ.” ಏಕೆಂದರೆ ಜನಾಂಗಗಳನ್ನು ಕೂಡಿಸುವುದಕ್ಕೂ ರಾಜ್ಯಗಳನ್ನು ಒಟ್ಟು ಸೇರಿಸುವುದಕ್ಕೂ ಅವುಗಳ ಮೇಲೆ ನನ್ನ ರೌದ್ರವನ್ನೂ ನನ್ನ ಕೋಪದ ಎಲ್ಲಾ ಉರಿಯನ್ನೂ ಹೊಯ್ಯುವುದಕ್ಕೂ ತೀರ್ಮಾನಿಸಿಕೊಂಡಿದ್ದೇನೆ. ಏಕೆಂದರೆ ನನ್ನ ರೋಷದ ಬೆಂಕಿಯಿಂದ ಭೂಮಿಯೆಲ್ಲಾ ದಹಿಸಲಾಗುವುದು.