Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 36:20 - ಕನ್ನಡ ಸಮಕಾಲಿಕ ಅನುವಾದ

20 ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ ಇವರೇ, ‘ಯೆಹೋವ ದೇವರ ಜನರು ಮತ್ತು ಇವರು ಆತನ ದೇಶದಿಂದ ಹೊರಟು ಹೋದರು,’ ಎಂದು ಅವರಿಗೆ ಹೇಳಿ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ, ‘ಇವರು ಯೆಹೋವನ ಪ್ರಜೆಗಳು, ಆತನ ದೇಶದಿಂದ ಭ್ರಷ್ಟರಾಗಿ ಬಂದಿದ್ದಾರೆ’ ಎಂದು ಅವರಿಗೆ ಹೇಳಿ, ನನ್ನ ಪರಿಶುದ್ಧ ಹೆಸರನ್ನು ಅಪವಿತ್ರ ಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ, ‘ಓಹೋ, ಇವರು ಸರ್ವೇಶ್ವರನ ಪ್ರಜೆಗಳು, ಆತನ ದೇಶದಿಂದ ಭ್ರಷ್ಟರಾಗಿ ಬಂದಿದ್ದಾರೆ’ ಎಂದೆನಿಸಿಕೊಂಡರು. ನನ್ನ ಪರಿಶುದ್ಧನಾಮಕ್ಕೆ ಅಪಕೀರ್ತಿಯನ್ನು ತಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ ಓಹೋ, ಇವರು ಯೆಹೋವನ ಪ್ರಜೆಗಳು, ಆತನ ದೇಶದಿಂದ ಭ್ರಷ್ಟರಾಗಿ ಬಂದಿದ್ದಾರೆ ಎಂದೆನ್ನಿಸಿಕೊಂಡು ನನ್ನ ಪರಿಶುದ್ಧನಾಮಕ್ಕೆ ಅಪಕೀರ್ತಿಯನ್ನು ತರಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಆ ದೇಶಗಳಲ್ಲಿರುವಾಗಲೂ ಅವರು ನನ್ನ ಹೆಸರಿಗೆ ಅಪಕೀರ್ತಿ ತಂದರು. ಹೇಗೆ? ‘ಇವರು ಯೆಹೋವನ ಜನರು. ಆತನು ಕೊಟ್ಟ ದೇಶವನ್ನು ಇವರು ತೊರೆದರು.’ ಎಂದು ಆ ದೇಶದ ಜನರು ಅನ್ನುವಂತೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 36:20
15 ತಿಳಿವುಗಳ ಹೋಲಿಕೆ  

ಪವಿತ್ರ ವೇದದಲ್ಲಿ ಬರೆದಿರುವಂತೆ, “ನಿಮ್ಮ ದೆಸೆಯಿಂದ ಯೆಹೂದ್ಯರಲ್ಲದವರಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತಿದೆ.”


“ಈಗ ನನಗೆ ಇಲ್ಲಿ ಏನಿದೆ?” ಎಂದು ಯೆಹೋವ ದೇವರು ಹೇಳುತ್ತಾರೆ. “ನನ್ನ ಜನರನ್ನು ವ್ಯರ್ಥವಾಗಿ ಒಯ್ದಿದ್ದಾರೆ. ಆಳುವವರು ಅವರನ್ನು ಗೋಳಾಡಿಸುತ್ತಿದ್ದಾರೆ. ನನ್ನ ನಾಮವು ಪ್ರತಿದಿನವೂ ಎಡೆಬಿಡದೆ ದೂಷಣೆಗೆ ಗುರಿಯಾಗಿದೆ! ಎಂದು ಯೆಹೋವ ದೇವರು ಹೇಳುತ್ತಾರೆ.


“ ‘ಯೆಹೋವ ದೇವರಾದ ನಾನು ಆರಿಸಿಕೊಂಡಿದ್ದ ಎರಡು ವಂಶಗಳನ್ನು ನಿರಾಕರಿಸಿಬಿಟ್ಟಿದ್ದೇನೆ, ಎಂದು ಜನರು ಆಡಿಕೊಳ್ಳುತ್ತಿದ್ದಾರೆ.’ ಈ ಮಾತನ್ನು ನೀನು ಗಮನಿಸಿರಬೇಕು. ನನ್ನ ಜನರು ಒಂದು ಜನಾಂಗವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಅಸಡ್ಡೆ ಮಾಡುತ್ತಿದ್ದಾರಲ್ಲವೇ?


ಈಗ ನೀವು ಸಿದ್ಧವಾಗಿದ್ದು ತುತೂರಿ, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳುವ ಸಮಯದಲ್ಲಿ ನಾನು ಮಾಡಿಸಿದ ಪ್ರತಿಮೆಯನ್ನು ಆರಾಧಿಸಿದರೆ ಸರಿ, ಆರಾಧಿಸದಿದ್ದರೆ ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಕುಲುಮೆಯ ಮಧ್ಯದಲ್ಲಿ ಹಾಕಲಾಗುವಿರಿ. ನನ್ನ ಕೈಯಿಂದ ನಿಮ್ಮನ್ನು ಬಿಡಿಸುವ ಆ ದೇವರು ಯಾರು?” ಎಂದು ಹೇಳಿದನು.


ಆದರೆ ಅವರು ಎಲ್ಲಿ ಹೋಗುವರೋ, ಆ ಜನಾಂಗಗಳೊಳಗೆ ಅವರ ಹೇಯ ಕಾರ್ಯಗಳನ್ನು ಇವರು ತಿಳಿದುಕೊಳ್ಳುವಂತೆ ಅವರಲ್ಲಿ ಕೆಲವರನ್ನು ಖಡ್ಗದಿಂದಲೂ ಬರಗಾಲದಿಂದಲೂ ವ್ಯಾಧಿಯಿಂದಲೂ ಉಳಿಸುವೆನು. ಆಗ ನಾನೇ ಯೆಹೋವ ದೇವರು ಎಂದು ಅವರು ತಿಳಿದುಕೊಳ್ಳುವರು.”


ಈ ದೇಶಗಳ ಸಮಸ್ತ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ, ಯೆಹೋವ ದೇವರು ಯೆರೂಸಲೇಮನ್ನು ನನ್ನ ಕೈಗೆ ಸಿಗದಂತೆ ತಪ್ಪಿಸಿ ಕಾಪಾಡುವನೋ?” ಎಂದು ಹೇಳಿದನು.


ಇದಲ್ಲದೆ, ‘ಯೆಹೋವ ದೇವರು ನಮ್ಮನ್ನು ನಿಶ್ಚಯವಾಗಿ ರಕ್ಷಿಸುವರು, ಈ ಪಟ್ಟಣವು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲ,’ ಎಂದು ಹೇಳಿ, ಹಿಜ್ಕೀಯನು ನಿಮಗೆ ಯೆಹೋವ ದೇವರಲ್ಲಿ ಭರವಸೆ ಇಡುವಂತೆ ಮಾಡುವನು.


ಕಾನಾನ್ಯರೂ ದೇಶವಾಸಿಗಳೆಲ್ಲರೂ ಇದನ್ನು ಕೇಳಿ ನಮ್ಮ ಸುತ್ತಲೂ ಸುತ್ತಿಕೊಂಡು ನಮ್ಮ ಹೆಸರನ್ನು ಭೂಮಿಯಿಂದ ತೆಗೆದುಬಿಡುವರು, ಆಗ ನಿಮ್ಮ ಮಹತ್ತಾದ ಹೆಸರಿಗೆ ಏನು ಮಾಡುವಿರಿ?” ಎಂದನು.


“ ‘ನಿನ್ನ ಮಕ್ಕಳಲ್ಲಿ ಯಾರನ್ನೂ ಮೋಲೆಕ್ ದೇವತೆಗೆ ಸಮರ್ಪಿಸಿ, ನಿನ್ನ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು. ನಾನು ಯೆಹೋವ ದೇವರು.


ಆದರೂ ಅದರಲ್ಲಿ ಪುತ್ರಪುತ್ರಿಯರಲ್ಲಿ ಕೆಲವರು ಹೇಗೂ ತಪ್ಪಿಸಿಕೊಂಡು ಅಲ್ಲಿಂದ ಉಳಿದು ಒಯ್ಯಲಾಗುವರು. ಅವರು ನಿಮ್ಮ ಬಳಿಗೆ ಬಂದಾಗ, ನೀವು ಅವರ ದುರ್ಮಾರ್ಗ ದುಷ್ಕೃತ್ಯಗಳನ್ನು ಕಂಡು ನಾನು ಯೆರೂಸಲೇಮಿನ ಮೇಲೆ ತಂದ ಕೇಡಿನ ವಿಷಯವಾಗಿಯೂ ಸಮಾಧಾನ ಹೊಂದುವಿರಿ.


“ ‘ಹೀಗೆ ನನ್ನ ಜನರಾದ ಇಸ್ರಾಯೇಲ್ ಮಧ್ಯದಲ್ಲಿ ನಾನು ನನ್ನ ಪರಿಶುದ್ಧವಾದ ಹೆಸರನ್ನು ವ್ಯಕ್ತಗೊಳಿಸುವೆನು. ಅವರು ಇನ್ನೆಂದಿಗೂ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರವಾಗದಂತೆ ಮಾಡುವೆನು. ಇಸ್ರಾಯೇಲಿನಲ್ಲಿ ಪರಿಶುದ್ಧನಾದ ಯೆಹೋವ ದೇವರು ನಾನೇ ಎಂದು ಇತರ ದೇಶದವರಿಗೆ ಗೊತ್ತಾಗುವುದು.


ಹೇಗಿದ್ದರೂ ಈ ಕಾರ್ಯದಿಂದ ನೀನು ಯೆಹೋವ ದೇವರ ಶತ್ರುಗಳಿಗೆ ಬಹಳವಾಗಿ ದೇವದೂಷಣೆ ಮಾಡುವಂತೆ ಆಸ್ಪದ ಕೊಟ್ಟ ಕಾರಣ, ನಿನಗೆ ಹುಟ್ಟಿದ ಮಗುವು ಖಂಡಿತವಾಗಿ ಸಾಯುವುದು,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು