Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 35:13 - ಕನ್ನಡ ಸಮಕಾಲಿಕ ಅನುವಾದ

13 ಹೀಗೆ ನಿಮ್ಮ ಬಾಯಿಂದ ನೀವು ನನಗೆ ವಿರೋಧವಾಗಿ ನಿಮ್ಮ ಮಾತುಗಳಿಂದ ಹೆಚ್ಚಿಸಿದ್ದನ್ನೂ ನಾನು ಕೇಳಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ನಿನ್ನವರು ಬಾಯಿ ತೆರೆದು, ನನ್ನ ವಿರುದ್ಧವಾಗಿ ಆಡಿದ ಮಾತುಗಳನ್ನು ಕೇಳಿದ್ದೇನೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ನಿನ್ನವರು ದೊಡ್ಡ ಬಾಯಿಮಾಡಿ ನನ್ನ ಮೇಲೆ ಆಡಿದ ಅತಿಯಾದ ಹರಟೆಗಳನ್ನು ಕೇಳಿದ್ದೇನೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ನಿನ್ನವರು ದೊಡ್ಡ ಬಾಯಿಮಾಡಿ ನನ್ನ ಮೇಲೆ ಆಡಿದ ಹೆಚ್ಚು ಹರಟೆಗಳನ್ನು ಕೇಳಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನಿನ್ನ ಹೆಮ್ಮೆಯಿಂದ ನನ್ನ ವಿರುದ್ಧವಾಗಿ ಮಾತನಾಡಿದ್ದೀ, ನೀನು ಅನೇಕ ಬಾರಿ ಹೇಳಿರುತ್ತೀ. ನಾನೆಲ್ಲವನ್ನು ಕೇಳಿದ್ದೇನೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 35:13
30 ತಿಳಿವುಗಳ ಹೋಲಿಕೆ  

ಅರಸನು ತನ್ನ ಇಷ್ಟದ ಪ್ರಕಾರ ಮಾಡುವನು. ತನ್ನನ್ನು ತಾನೇ ಹೆಚ್ಚಿಸಿಕೊಂಡು, ತನ್ನನ್ನು ಎಲ್ಲಾ ದೇವರುಗಳಿಗಿಂತಲೂ ದೊಡ್ಡವನನ್ನಾಗಿ ಮಾಡಿಕೊಂಡು, ದೇವರುಗಳ ದೇವರಿಗೆ ವಿರೋಧವಾಗಿ ಆಶ್ಚರ್ಯವಾದ ಸಂಗತಿಗಳನ್ನು ಮಾತನಾಡಿ, ರೋಷವು ತೀರುವವರೆಗೂ ವೃದ್ಧಿಯಾಗಿರುವನು. ಹೀಗೆ ನಿಶ್ಚಯವಾದದ್ದು ನೆರವೇರಲೇಬೇಕು.


ಆಗ ನಾನೇ ಯೆಹೋವನೆಂದು ನೀನು ತಿಳಿಯುವೆ ಮತ್ತು ಇಸ್ರಾಯೇಲಿನ ಪರ್ವತಗಳ ವಿಷಯವಾಗಿ, “ಅವು ಹಾಳಾಗಿವೆ ನಮಗೆ ನುಂಗುವುದಕ್ಕೆ ಕೊಡಲಾಗಿವೆ,” ಎಂದು ಹೇಳಿ ಮಾತನಾಡಿದ ನಿನ್ನ ಎಲ್ಲಾ ದೂಷಣೆಗಳನ್ನು ಯೆಹೋವ ದೇವರೆಂಬ ನಾನೇ ಕೇಳಿರುವೆನೆಂದು ತಿಳಿಯುವೆ.


ಏಕೆಂದರೆ ಅವರು ತಮ್ಮ ನೆರೆಯವರ ಹೆಂಡರ ಸಂಗಡ ವ್ಯಭಿಚಾರ ಮಾಡಿ, ನನ್ನ ಹೆಸರಿನಲ್ಲಿ ಸುಳ್ಳಾಗಿ ನಾನು ಅವರಿಗೆ ಆಜ್ಞಾಪಿಸದೆ ಇದ್ದ ಮಾತುಗಳನ್ನಾಡಿ, ಇಸ್ರಾಯೇಲಿನಲ್ಲಿ ನೀಚತನವನ್ನು ನಡೆಸಿದರು. ನಾನೇ ಅದನ್ನು ತಿಳಿದು ಸಾಕ್ಷಿಯಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.


ಈ ದೇಶಗಳ ಸಮಸ್ತ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ, ಯೆಹೋವ ದೇವರು ಯೆರೂಸಲೇಮನ್ನು ನನ್ನ ಕೈಗೆ ಸಿಗದಂತೆ ತಪ್ಪಿಸಿ ಕಾಪಾಡುವನೋ?” ಎಂದು ಹೇಳಿದನು.


“ಇನ್ನು ಮೇಲೆ ಗರ್ವದಿಂದ ಮಾತನಾಡಬೇಡಿರಿ. ನಿಮ್ಮ ಬಾಯಿಂದ ಕಠಿಣ ಮಾತು ಹೊರಡದಿರಲಿ. ಏಕೆಂದರೆ ಯೆಹೋವ ದೇವರು ತಿಳುವಳಿಕೆಯುಳ್ಳ ದೇವರು. ಅವರು ಮನುಷ್ಯರ ಕಾರ್ಯಗಳನ್ನು ತೂಗಿನೋಡುವರು.


ಎಲ್ಲರಿಗೆ ನ್ಯಾಯತೀರಿಸುವುದಕ್ಕೆ ಬರುವರು. ಮಾತ್ರವಲ್ಲದೆ ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ದುಷ್ಕೃತ್ಯಗಳನ್ನು ಮತ್ತು ಪಾಪಿಷ್ಠರು ತಮಗೆ ವಿರೋಧವಾಗಿ ಆಡಿದ ಎಲ್ಲಾ ದೂಷಣೆಗಳ ವಿಷಯವಾಗಿ ಅವರನ್ನು ಖಂಡಿಸಲು ಬರುವರು,” ಎಂಬುದಾಗಿ ಪ್ರವಾದಿಸಿದನು.


ತಪ್ಪಾದ ಮಾರ್ಗದಲ್ಲಿ ಬಾಳುವವರಿಂದ ತಪ್ಪಿಸಿಕೊಂಡವರನ್ನು ಇವರು ಹುರುಳಿಲ್ಲದ ದೊಡ್ಡ ದೊಡ್ಡ ಮಾತುಗಳನ್ನಾಡಿ ಶರೀರದ ದುರಾಶೆಗಳನ್ನು ಹುಟ್ಟಿಸಿ ಅವರನ್ನು ಮರುಳುಗೊಳಿಸುತ್ತಾರೆ.


“ನೀವು ನನಗೆ ವಿರೋಧವಾಗಿ ಅಹಂಕಾರದಿಂದ ಮಾತುಗಳನ್ನಾಡಿದಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ. “ಆದರೂ ನೀವು, ‘ನಿನಗೆ ವಿರೋಧವಾಗಿ ನಾವು ಏನು ಮಾತಾಡಿದ್ದೇವೆ?’ ಎನ್ನುತ್ತೀರಿ.”


ನೀನು ನನಗೆ ವಿರೋಧವಾಗಿ ಮಾಡುವ ನಿನ್ನ ರೌದ್ರವೂ ನಿನ್ನ ಅಹಂಕಾರವೂ ನನ್ನ ಕಿವಿಗಳಿಗೆ ತಲುಪಿದೆ. ಆದ್ದರಿಂದ ನಾನು ನನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ; ನನ್ನ ಕಡಿವಾಣವನ್ನು ನಿನ್ನ ಬಾಯಲ್ಲಿಯೂ ಹಾಕಿ, ನೀನು ಬಂದ ದಾರಿಯಿಂದಲೇ ನಿನ್ನನ್ನು ಹಿಂದಿರುಗಿಸುವೆನು.


ನೀನು ಯಾರನ್ನು ನಿಂದಿಸಿ ಯಾರನ್ನು ದೂಷಿಸಿದೆ? ಯಾರಿಗೆ ವಿರೋಧವಾಗಿ ನಿನ್ನ ಧ್ವನಿಯನ್ನು ಎತ್ತಿದ್ದೀ? ನಿನ್ನ ಕಣ್ಣುಗಳು ಗರ್ವದಿಂದ ನೋಡಿದ್ದು ಯಾರನ್ನು? ಇಸ್ರಾಯೇಲಿನ ಪರಿಶುದ್ಧ ದೇವರಿಗೆ ವಿರೋಧವಾಗಿಯಲ್ಲವೇ?


“ಹಿಜ್ಕೀಯನೇ, ನೀನು ನಂಬುವ ದೇವರು, ‘ಯೆರೂಸಲೇಮನ್ನು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲ,’ ಎಂದು ಹೇಳಿ ನಿನ್ನನ್ನು ಮೋಸಗೊಳಿಸಾನು.


ಮೂಢನು ಮಾತುಗಳನ್ನು ಹೆಚ್ಚಿಸುತ್ತಾನೆ. ಆದರೂ ಅವನು ಭವಿಷ್ಯ ಏನೆಂದು ತಿಳಿಯನು. ಅವನ ತರುವಾಯ ಆಗುವುದನ್ನೂ ಅವನಿಗೆ ತಿಳಿಸುವವರು ಇಲ್ಲ.


ಆದ್ದರಿಂದ ಯೋಬನಾದ ನೀನು ವ್ಯರ್ಥವಾಗಿ ಬಾಯಿತೆರೆದು, ತಿಳುವಳಿಕೆಯಿಲ್ಲದೆ ಬಹಳ ಮಾತಾಡಿರುವಿ.”


ಯೋಬನು ತನ್ನ ಪಾಪಕ್ಕೆ ದೇವರಿಗೆ ಎದುರಾಗಿ ಪ್ರತಿಭಟನೆಯನ್ನು ಸಹ ಕೂಡಿಸುತ್ತಿದ್ದಾನೆ; ಅಪಹಾಸ್ಯದಿಂದ ನಮ್ಮ ಮಧ್ಯದಲ್ಲಿ ಚಪ್ಪಾಳೆ ತಟ್ಟುತ್ತಾನೆ; ದೇವರಿಗೆ ವಿರುದ್ಧ ಹೆಚ್ಚು ಮಾತುಗಳನ್ನಾಡುತ್ತಾನೆ,’ ಎಂದು ನನಗೆ ಹೇಳುತ್ತಿದ್ದಾರೆ.”


ಮನುಷ್ಯರ ಕೈಕೆಲಸವಾದ ಭೂಮಿಯ ಜನರ ದೇವರುಗಳಿಗೆ ವಿರೋಧವಾಗಿ ಮಾತನಾಡಿದ ಹಾಗೆ, ಯೆರೂಸಲೇಮಿನ ದೇವರಿಗೆ ವಿರೋಧವಾಗಿ ಮಾತನಾಡಿದರು.


ಆದ್ದರಿಂದ ಹಿಜ್ಕೀಯನು ನಿಮ್ಮನ್ನು ವಂಚಿಸಿ ನಿಮ್ಮನ್ನು ದಾರಿತಪ್ಪಿಸಲು ಬಿಡಬೇಡಿರಿ. ಅವನ ಮಾತು ನಂಬಬೇಡಿರಿ. ನನ್ನ ಕೈಯೊಳಗಿಂದಲೂ, ನನ್ನ ಪಿತೃಗಳ ಕೈಯೊಳಗಿಂದಲೂ ತಮ್ಮ ಜನರನ್ನು ಬಿಡಿಸಲು ಸಕಲ ಜನಾಂಗ, ರಾಜ್ಯಗಳ ದೇವರುಗಳಲ್ಲಿ ಸಾಮರ್ಥ್ಯವುಳ್ಳ ದೇವರು ಒಂದೂ ಇಲ್ಲ. ನನ್ನ ಕೈಯಿಂದ ನಿಮ್ಮನ್ನು ಬಿಡಿಸಲು ನಿಮ್ಮ ದೇವರು ಎಷ್ಟರವನು? ಅನ್ನುತ್ತಾನೆ,” ಎಂದು ಹೇಳಿದರು.


ನೀನು ನನಗೆ ವಿರೋಧವಾಗಿ ಮಾಡುವ ನಿನ್ನ ರೌದ್ರವೂ, ನಿನ್ನ ಅಹಂಕಾರವೂ ನನ್ನ ಕಿವಿಗಳಿಗೆ ತಲುಪಿದೆ. ಆದ್ದರಿಂದ ನಾನು ನನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ, ನನ್ನ ಕಡಿವಾಣವನ್ನು ನಿನ್ನ ಬಾಯಲ್ಲಿಯೂ ಹಾಕಿ, ನೀನು ಬಂದ ದಾರಿಯಿಂದಲೇ ನಿನ್ನನ್ನು ಹಿಂದಿರುಗಿಸುವೆನು.’


“ಈ ದುಷ್ಟಜನರು ನನಗೆ ವಿರೋಧವಾಗಿ ಗೊಣಗುಟ್ಟುವುದನ್ನು ನಾನು ಎಷ್ಟು ಕಾಲ ಸಹಿಸಲಿ? ಇಸ್ರಾಯೇಲರು ನನಗೆ ವಿರೋಧವಾಗಿ ಗೊಣಗುಟ್ಟಿದ್ದನ್ನು ನಾನು ಕೇಳಿದ್ದೇನೆ.


“ಇಸ್ರಾಯೇಲರ ಗೊಣಗುಟ್ಟುವಿಕೆಯನ್ನು ಕೇಳಿದ್ದೇನೆ. ಅವರ ಸಂಗಡ ನೀನು ಮಾತನಾಡಿ, ‘ನೀವು ಸಂಜೆಯಲ್ಲಿ ಮಾಂಸವನ್ನು ತಿನ್ನುವಿರಿ. ಬೆಳಿಗ್ಗೆ ರೊಟ್ಟಿಯಿಂದ ತೃಪ್ತರಾಗುವಿರಿ. ನಾನೇ ನಿಮ್ಮ ದೇವರಾದ ಯೆಹೋವ ದೇವರೆಂದು ತಿಳಿದುಕೊಳ್ಳುವಿರಿ,’ ಎಂದು ಅವರಿಗೆ ಹೇಳು,” ಎಂದರು.


ನನ್ನ ಹೆಸರನ್ನು ಹೊಂದಿರುವ ಈ ಆಲಯವು ನಿಮ್ಮ ಕಣ್ಣುಗಳಲ್ಲಿ ಕಳ್ಳರ ಗವಿಯಾಯಿತೋ? ಇಗೋ, ನಾನೇ ಅದನ್ನು ನೋಡಿದ್ದೇನೆಂದು ಯೆಹೋವ ದೇವರು ಹೇಳುತ್ತಾರೆ.


“ಅದನ್ನು ನೀವು ಅಮಲೇರಿಸಿರಿ; ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡಿದೆ; ಮೋವಾಬು ಸಹ ತಾನೇ ವಾಂತಿ ಮಾಡಿದ್ದರಲ್ಲಿ ಹೊರಳಾಡುವುದು; ಅದೇ ಹಾಸ್ಯಕ್ಕಾಗಿರುವುದು.


ಏಕೆಂದರೆ ಮೋವಾಬು ಅದು ಯೆಹೋವ ದೇವರಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡದ್ದರಿಂದ, ಜನಾಂಗವಲ್ಲದ ಹಾಗೆ ನಾಶವಾಗುವುದು.


ಆದ್ದರಿಂದ ನೀನು ಪ್ರವಾದಿಸಿ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅವರು ನಿನ್ನನ್ನು ಹಾಳು ಮಾಡಿ ಎಲ್ಲಾ ಕಡೆಗಳಿಂದಲೂ ನಿನ್ನನ್ನು ತುಳಿದುಬಿಟ್ಟರು. ನೀವು ಇತರ ಜನಾಂಗಗಳಲ್ಲಿ ಉಳಿದವರ ವಶವಾಗಿದ್ದು ಹರಟೆಗಾರರ ಬಾಯಿಗೆ ಬಿದ್ದು ಜನರ ನಿಂದೆಗೆ ಗುರಿಯಾಗಿದ್ದೀರಿ.


ಅವರು, “ಯೆಹೋವ ದೇವರು ಮೋಶೆಯ ಮುಖಾಂತರ ಮಾತ್ರವೇ ಮಾತನಾಡಿದ್ದಾರೋ? ನಮ್ಮ ಮುಖಾಂತರ ಮಾತಾಡಲಿಲ್ಲವೋ?” ಎಂದರು. ಅವರು ಆಡಿದ ಮಾತು ಯೆಹೋವ ದೇವರಿಗೆ ಕೇಳಿಸಿತು.


ಮೂರ್ಖರು ನಿಮ್ಮ ನಾಮವನ್ನು ನಿಂದಿಸುತ್ತಾರೆ. ಶತ್ರುಗಳು ನಿಮ್ಮನ್ನು ಹಾಸ್ಯಮಾಡುತ್ತಾರೆ. ಯೆಹೋವ ದೇವರೇ, ಇದನ್ನು ಜ್ಞಾಪಕಮಾಡಿಕೊಳ್ಳಿರಿ.


ಕಿವಿಯನ್ನು ನಿರ್ಮಿಸಿದ ದೇವರು ಕೇಳದಿರುವರೇ? ಕಣ್ಣನ್ನು ರೂಪಿಸಿದವರು ನೋಡುವುದಿಲ್ಲವೇ?


ಆದ್ದರಿಂದ ಅವುಗಳ ನಿವಾಸಿಗಳು ಬಲಹೀನರಾಗಿ ಹೆದರಿ ಆಶಾಭಂಗಹೊಂದಿ ನಾಚಿಕೆಪಟ್ಟರು. ಅವರು ಹೊಲದ ಹುಲ್ಲಿನಂತೆಯೂ, ಹಸಿರು ಸಸಿಗಳಂತೆಯೂ, ಮಾಳಿಗೆಯ ಮೇಲಿನ ಹುಲ್ಲಿನಂತೆಯೂ, ಬೆಳೆಯುವುದಕ್ಕಿಂತ ಮುಂಚೆಯೇ ಬಾಡಿಹೋಗುವ ಪೈರಿನಂತೆಯೂ ಅವರಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು